ಜಪಾನ್ ಸಮ್ಮೇಳನಕ್ಕೆ ಮೇಯರ್ ಗೆ ಆಹ್ವಾನ

ಕಸದ ಮರುಬಳಕೆ ವಿಷಯದ ಕುರಿತು ಜಪಾನ್ ನ ಯಕೋಮಾದಲ್ಲಿ ನಡೆಯಲಿರುವ ಜಾಗತಿಕ ಸಮ್ಮೇಳನಕ್ಕೆ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರಿಗೆ ಆಹ್ವಾನ ನೀಡಲಾಗಿದೆ.
ಬಿಬಿಎಂಪಿ ಮೇಯರ್
ಬಿಬಿಎಂಪಿ ಮೇಯರ್
Updated on: 

ಬೆಂಗಳೂರು: ಕಸದ ಮರುಬಳಕೆ ಹಾಗೂ ಕಸದಿಂದ ವಿದ್ಯುತ್ ಉತ್ಪಾದಿಸುವ ವಿಷಯದ ಕುರಿತು ಜಪಾನ್ ನ ಯಕೋಮಾದಲ್ಲಿ ನಡೆಯಲಿರುವ ಜಾಗತಿಕ ಸಮ್ಮೇಳನಕ್ಕೆ ಖಾಸಗಿ ಸಂಸ್ಥೆಯೊಂದು ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರಿಗೆ ಆಹ್ವಾನ ನೀಡಿದೆ.

ಜಗತ್ತಿನ ಪ್ರಮುಖ ನಗರಗಳ ಸ್ಥಳೀಯ ಆಡಳಿತಗಳ ಮುಖ್ಯಸ್ಥರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಬಿಬಿಎಂಪಿಗೆ ಭೇಟಿ ನೀಡಿದ್ದ ಸಂಸ್ಥೆಯ ಪ್ರತಿನಿಧಿಗಳು ವಿದ್ಯುತ್ ಘಟಕ ಸ್ಥಾಪನೆಯ ಕುರಿತು ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ತೋರಿಸಿದ್ದಾರೆ. ಜಪಾನ್ ಗೆ ಬಂದು ಕಸದ ಮರುಬಳಕೆ ಬಗ್ಗೆ ಅಧ್ಯಯನ ಮಾಡುವಂತೆ ಮನವಿ ಮಾಡಿದ್ದಾರೆ. ಜಪಾನ್ ನಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಖಾಸಗಿ ಸಂಸ್ಥೆ ಆಹ್ವಾನ ನೀಡಿದೆ. ಅದೆರ್ ಅಲ್ಲಿಗೆ ತೆರಳುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಮೇಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com