ಬಾಷ್‍ನಿಂದ 650 ಕೋಟಿ ರೂ. ಹೂಡಿಕೆ

ಜರ್ಮನಿ ಮೂಲದ ಬಾಷ್ ಸಂಸ್ಥೆ ದೇಶದಲ್ಲಿನ ಸುಮಾರು ರೂ. 650 ಕೋಟಿಗಳ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ...
ಬಾಷ್ ಕಂಪನಿ
ಬಾಷ್ ಕಂಪನಿ

ಬೆಂಗಳೂರು: ಜರ್ಮನಿ ಮೂಲದ ಬಾಷ್ ಸಂಸ್ಥೆ ದೇಶದಲ್ಲಿನ ಸುಮಾರು ರೂ. 650 ಕೋಟಿಗಳ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ. ಪ್ರಧಾನಿ ನರೇಂದ್ರಮೋದಿ ಮತ್ತು ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಭೇಟಿ ಸಂದರ್ಭದಲ್ಲಿ ನಡೆದ ಬಾಷ್ ಉನ್ನತಾಧಿಕಾರಿಗಳ ಸಭೆ ನಂತರ ಸಂಸ್ಥೆಯ ಮುಖ್ಯಸ್ಥರು ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿದರು.

ಬಾಷ್ ಸಂಸ್ಥೆ ಕರ್ನಾಟಕ ಸೇರಿದಂತೆ ದೇಶದ ಮೂರು ಕಡೆ ಘಟಕಗಳನ್ನು ಸ್ಥಾಪಿಸುತ್ತಿದೆ. ಇದರಲ್ಲಿ ರಾಜ್ಯದ ಬಿಡದಿ ಬಳಿ ನಿರ್ಮಿಸುತ್ತಿರುವ ಡೀಸೆಲ್ ಸಿಸ್ಟೆಮ್ಗೆ ಸಂಬಂಧಿಸಿದ ಘಟಕವನ್ನು ವರ್ಷಾಂತ್ಯಕ್ಕೆ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು. ತಮಿಳುನಾಡಿನಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ಪವರ್ ಟೂಲ್‍ಗೆ ಸಂಬಂಧಿಸಿದ ಘಟಕ ಚೆನ್ನೈ ಮಹಾನಗರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಬಾಷ್‍ನ ಏಷ್ಯಾ ಫೆಸಿಪಿಕ್ ಆಡಳಿತ ಮಂಡಳಿ ಉಸ್ತುವಾರಿ ಫೀಟರ್ ಟೈರೋಲ್ಲರ್ ಹೇಳಿದರು.

ಭಾರತ ಜಾಗತಿಕ ನೆಟ್‍ವರ್ಕ್‍ನ ಪ್ರಮುಖ ಸ್ಥಳವಾಗಿರುವ ಕಾರಣ ಬಾಷ್ ಬಲವರ್ಧನೆಗಾಗಿ ದೇಶದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದೆ ಎಂದು ಅವರು ಹೇಳಿದರು. ಇದೇ ವೇಳೆ ಮಾತನಾಡಿದ ಬಾಷ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಸ್ಟೆಫಿನ್ ಬರ್ನ್, ಬಾಷ್ ಎದುರಿಸುತ್ತಿರುವ ಸಮಸ್ಯೆಗಳನ್ನು ಭಾರತ ಸರ್ಕಾರ ಬಗೆಹರಿಸುತ್ತಿದ್ದು ಇದರಿಂದ ಮೊಬಿಲಿಟಿ, ಮೂಲಸೌಕರ್ಯ, ಉದ್ಯಮ, ಇಂಧನ ಹಾಗೂ ಭದ್ರತಾ ಕ್ಷೇತ್ರಗಳಲ್ಲಿ ಬಾಷ್ ಸಂಸ್ಥೆ ಉತ್ಪನ್ನಗಳಿಗೆ ಭಾರೀ ಅವಕಾಶಗಳಿವೆ ಎಂದರು. ಬಾಷ್‍ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ರಾಜ್ಯಪಾಲ ವಿ.ಆರ್.ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com