ಜನತಾ ಪರಿವಾರ ಒಗ್ಗೂಡಲಿ: ಚಂಪಾ

ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಜನತಾ ಪರಿವಾರದ ನಾಯಕರು ದೇಶದ ಹಿತದೃಷ್ಟಿಯಿಂದ ಮತ್ತೆ ಒಗ್ಗೂಡುವ ಅಗತ್ಯವಿದೆ...
ಸಾಹಿತಿ ಚಂದ್ರಶೇಖರ ಪಾಟೀಲ (ಸಂಗ್ರಹ ಚಿತ್ರ)
ಸಾಹಿತಿ ಚಂದ್ರಶೇಖರ ಪಾಟೀಲ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಜನತಾ ಪರಿವಾರದ ನಾಯಕರು ದೇಶದ ಹಿತದೃಷ್ಟಿಯಿಂದ ಮತ್ತೆ ಒಗ್ಗೂಡುವ ಅಗತ್ಯವಿದೆ ಎಂದು ಹಿರಿಯ  ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಭಾರತ ಯಾತ್ರಾ ಕೇಂದ್ರ ಮತ್ತು ಲೋಕನಾಯಕ ಜೆ.ಪಿ. ವಿಚಾರ ವೇದಿ ಕೆಯಿಂದನಗರದ ಫ್ರೀಡಂ ಪಾರ್ಕ್‍ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ `ಲೋಕನಾಯಕ ಜಯ  ಪ್ರಕಾಶ ನಾರಾಯಣ್ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ನೆಹರು ಪರಿವಾರ, ಸಂಘ ಪರಿವಾರ ಮತ್ತು ಜನತಾ ಪರಿವಾರ ಎಂಬ ಮೂರು ವಿಭಾಗಗಳು ರಾಜಕೀಯದಲ್ಲಿ ಸಕ್ರಿಯವಾಗಿವೆ. ಕೋಮುವಾದದ ನೆಲೆಯಿಂದ ಬಂದಿರುವ ಸಂಘ ಪರಿವಾರ ಆಡಳಿತ ನಡೆಸುತ್ತಿದ್ದು, ಪರ್ಯಾಯವಾಗಿ ಜನತಾ ಪರಿವಾರ ಒಂದಾಗುವ ಅವಶ್ಯಕತೆ ಇದೆ ಎಂದರು.

ಜನತಾ ಪರಿವಾರ ಮೂಲ ಆಶಯ ಜಾತ್ಯತೀತ ನಿಲುವುಗಳನ್ನು ಪ್ರತಿಷ್ಠಾಪಿಸುವುದು. ರೈತರ ಹಿತ ಕಾಪಾಡುವುದರೊಂದಿಗೆ ಜನರ ಆಶಯಗಳಿಗೆ ಸ್ಪಂದಿಸುವ ಗುಣ ಈ ವರ್ಗದ್ದಾಗಿದೆ. ದೇಶದಲ್ಲಿ  ತುರ್ತು ಪರಿಸ್ಥಿತಿ ಹೇರಿದಾಗ ಜಯಪ್ರಕಾಶ್ ನಾರಾಯಣ್ ಅವರು ಹೋರಾಟ ಆರಂಭಿಸಿದರು. ಅವರ ಗರಡಿಯಲ್ಲಿ ಬೆಳೆದ ಜನತಾ ಪರಿವಾರದ ನಾಯಕರು ಇಂದು ಬೇರೆ ಬೇರೆ ಕಾರಣಕ್ಕೆ ವಿವಿಧ  ಪಕ್ಷದಲ್ಲಿದ್ದಾರೆ.

ಅವರು ಎಲ್ಲೆ ಇದ್ದರೂ ಆಶಯ ಮಾತ್ರ ಒಂದೇ ಆಗಿದೆ. ಜನರ ಮತ್ತು ದೇಶದ ಹಿತದೃಷ್ಟಿಯಿಂದ ಜನತಾ ಪರಿವಾರ ಒಗ್ಗೂಡಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು. ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ದೇಶದಲ್ಲಿ ಪರ್ಯಾಯ ರಾಜಕಾರಣ ಹಿನ್ನೆಲೆಯಲ್ಲಿ ಚಂಪಾ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ಯುವ ಸಮೂಹ ಸಮಾಜವಾದ ಬಗ್ಗೆ ಹಿತಚಿಂತನೆ ಬೆಳೆಸಿಕೊಂಡರೇ ಹಿಡಿದ ಕಾರ್ಯ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ಜನತಾ ಪರಿವಾರ ಒಗ್ಗೂಡುವ ನಿಟ್ಟಿನಲ್ಲಿ ಪ್ರಯತ್ನಗಳು ಈಗಿನಿಂದಲೇ ನಡೆಯಲಿದೆ ಎಂದು ಆಶಿಸಿದರು.

ಮಾಜಿ ಸಚಿವ ಡಾ.ಎಂ.ಪಿ.ನಾಡ ಗೌಡ, ಭಾರತ ಯಾತ್ರಾ ಕೇಂದ್ರದ ಪ್ರಧಾನ ಕಾರ್ಯದರ್ಸಿ. ಕೆ.ವಿ. ನಾಗರಾಜಮೂತಿರ್ , ಲೋಕನಾಯಕ ಜೆ.ಪಿ.ವಿಚಾರವೇದಿಕೆಯ ಆರ್. ದಯಾನಂದ್, ಜಗದೀಶ್‍ಜಾಲ, ಕೆ.ಎಸ್. ನಾಗರಾಜ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com