ರಾಜಕೀಯ ಪಕ್ಷಗಳು ವೆಚ್ಚದ ಲೆಕ್ಕ ಕೊಡಲಿ: ಎಚ್.ಎಸ್.ದೊರೆಸ್ವಾಮಿ

ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅವು ಮಾಡುತ್ತಿರುವ ವೆಚ್ಚಗಳ ಬಗ್ಗೆ ಜನರಿಗೆ ಲೆಕ್ಕ ಕೊಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ಹೇಳಿದ್ದಾರೆ.
ಹೆಚ್ ಎಸ್ ದೊರೆಸ್ವಾಮಿ (ಸಂಗ್ರಹ ಚಿತ್ರ)
ಹೆಚ್ ಎಸ್ ದೊರೆಸ್ವಾಮಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅವು ಮಾಡುತ್ತಿರುವ ವೆಚ್ಚಗಳ ಬಗ್ಗೆ ಜನರಿಗೆ ಲೆಕ್ಕ ಕೊಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.  ಎಸ್.ದೊರೆಸ್ವಾಮಿ ಹೇಳಿದ್ದಾರೆ.

ವಾಲ್ಮೀಕಿ ಎಜುಕೇಷನ್ ಮತ್ತು ಸ್ಕಾಲರ್ ಶಿಪ್ ಟ್ರಸ್ಟ್ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜಕೀಯ ಪಕ್ಷಗಳು ನಾನಾ  ಕಾರಣಗಳಿಗೆ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಾಗೆಯೇ ತಿಯಲ್ಲಿ ದುರ್ಬಳಕೆಯಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತದೆ. ಹೇಗೆ ವೆಚ್ಚವಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಜನರಿಗೆ ಲೆಕ್ಕ ಕೊಡಬೇಕು ಎಂದು ಅವರು ಒತ್ತಾಯಿಸಿದರು. ರಾಜಕೀಯ ಪಕ್ಷಗಳಿಂದ ಯಾವುದೇ ಕ್ರಾಂತಿ ಸಾಧ್ಯವಿಲ್ಲ. ಅದೇನಾದರೂ  ಮಾಡ ಬೇಕಿದ್ದರೆ ಜನರೇ ಮಾಡಬೇಕು. ಏಕೆಂದರೆ ಯಾವುದೇ ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಲ್ಲ ಪರಸ್ಪರ ಬೈದಾಡುವುದೇ ಆಗಿದೆ.

ಒಂದು ಪಕ್ಷ ನೀನು ಎಂದರೆ ಮತ್ತೊಂದು ನಿಮ್ಮಪ್ಪ ಎನ್ನುತ್ತಿದೆ. ಹೀಗೆ ಬೈದಾಡಿಕೊಂಡು ಯಾವ ಪಕ್ಷಗಳೂ ಸರಿಯಾಗಿ ವಿಧಾನಸಭೆ ಮತ್ತು ಸಂಸತ್‍ನಲ್ಲಿ ಸದನ ನಡೆಸುತ್ತಿಲ್ಲ ಎಂದರು. ಪಕ್ಷಗಳಿಗೆ ನಿಜಕ್ಕೂ ಜನಪರ ವಿಚಾರದಲ್ಲಿ ಹೋರಾಟ ಮಾಡುವ ಮನಸ್ಸಿದ್ದರೆ, ಸದನದ ಹೊರಗೆ ಹೋರಾಟ ನಡೆಸಲಿ. ಆದರೆ ಸದನದ ಒಳಗೆ ಹೋರಾಟ ಮಾಡಿ, ವಾಕ್ ಔಟ್‍ನಂಥ ಹುಚ್ಚಾಟ  ಬೇಡ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿದ್ಯಾರ್ಥಿಗಳು ಮುಂದೆ ದೊಡ್ಡ ಸ್ಥಾನಗಳನ್ನು ಅಲಂಕರಿಸಬಹುದು. ಆಗ ಹುಟ್ಟೂರು ಮತ್ತು ನಾಡನ್ನು ಮರೆಯಬಾರದು ಎಂದರು.

ರೆಡ್ಡಿಗಳು ಹೆಚ್ಚಾಗಿದ್ದಾರೆ
ಸಮಾಜ ಕುಲಗೆಟ್ಟಿದ್ದು, ಬರೀ ಜನಾರ್ದನ ರೆಡ್ಡಿ ಅಂಥವರೇ ಹೆಚ್ಚಾಗಿದ್ದಾರೆ ಎಂದು ಸ್ವಾತಂತ್ರ್ಯಹೋರಾಟಗಾರ ಎಚ್. ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಎಷ್ಟೇ ಮೀಸಲಾತಿ  ನೀಡಿದರೂ ಕೆಲವರಿಗೆ ಅದು ತಲುಪುವುದಿಲ್ಲ. ಕಾರಣ ತಿಂದವರೇ ಹೆಗ್ಗಣದಂತೆ ತಿನ್ನುವವರು ಹೆಚ್ಚಾಗಿದ್ದಾರೆ. ಅದರಲ್ಲೂ ಜನಾರ್ದನ ರೆಡ್ಡಿ ಅಂಥವರು ಹತ್ತಾರು ಸಾವಿರ ಮಂದಿ ಇದ್ದಾರೆ.  ಆದ್ದರಿಂದ ವಿದ್ಯಾರ್ಥಿಗಳು ಇದೆಲ್ಲವನ್ನೂ ನೋಡಿ ಸಮಾಜವನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಜನರೂ ಕೂಡ ಎಲ್ಲಾ ಚಾಳಿಯನ್ನು ಬಿಟ್ಟು ಇನ್ನುಮುಂದಾದರೂ ನಮಗಿಂತ ದೇಶ ದೊಡ್ಡದು  ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.\

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com