ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ; ರಾಜ್ಯಕ್ಕೆ ಪ್ರಧಾನಿ ಕಚೇರಿ ತಾಕೀತು

ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಕಡೆಗಣಿಸಲ್ಪಡುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರ್‍ಗಳು ದೇಶದ ಪ್ರಧಾನಿಗಳು ಮತ್ತು ರಾಜ್ಯಪಾಲರಿಗೆ ದೂರು ಮುಟ್ಟಿಸಿದ್ದಾರೆ...
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)

ಬೆಂಗಳೂರು: ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಕಡೆಗಣಿಸಲ್ಪಡುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರ್‍ಗಳು ದೇಶದ ಪ್ರಧಾನಿಗಳು ಮತ್ತು ರಾಜ್ಯಪಾಲರಿಗೆ ದೂರು ಮುಟ್ಟಿಸಿದ್ದಾರೆ.

ಈ ಮಧ್ಯೆಯೇ ದೂರಿಗೆ ಸ್ಪಂದಿಸಿರುವ ಪ್ರಧಾನಿ ಕಚೇರಿ ಮತ್ತು ರಾಜಭವನವು ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ನೀಡಿದೆ.  ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಸಿವಿಲ್ ಎಂಜಿನಿಯರ್‍ಗಳ ನೇರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳು  ಸುಲಭವಾಗಿ ಕೆಲಸ ಗಿಟ್ಟಿಸುತ್ತಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರು ಅರ್ಹತೆ ಪಡೆಯಲು ವಿಫಲರಾಗುತ್ತಿದ್ದಾರೆ.

ಕಳೆದ ವರ್ಷ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಗಳಿಗೆ ನೇರ ನೇಮ ಕಾತಿ ನಡೆದಾಗ ಈ ಸಮಸ್ಯೆ ಎದುರಿಸಿದರು. ಇದೀಗ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಇಲಾಖೆಯ ನೇಮಕಾತಿಯಲ್ಲೂ ಅದೇ ರೀತಿ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಸರ್ಕಾರದಿಂದ ಯಾವುದೇ ರೀತಿಯ  ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಎಡ ತಾಕಿದ್ದರು. ಪರಿಸ್ಥಿತಿ ಅರಿತ ವಿಟಿಯು ಕುಲಪತಿಯವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ವಿವಿಯಿಂದ  ಹೊರಬರುತ್ತಿರುವ ಸಿವಿಲ್ ಎಂಜಿನಿಯರ್‍ಗಳಿಗೆ ನಷ್ಟವಾಗುವುದರ ಬಗ್ಗೆ ಗಮನ ಸೆಳೆದಿದ್ದರು. ಆದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿಟಿಯು ಸಿವಿಎಲ್ ಎಂಜಿನಿಯರ್  ಪದವೀಧರರು ನೇರವಾಗಿ ರಾಜಭವನ ಮತ್ತು ಪ್ರಧಾನಿಯವರಿಗೆ ಪತ್ರ ಬರೆದು ನ್ಯಾಯ ಕೋರಿದ್ದರು.

ಗೊಂದಲವೇನು?: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ 148 ಎಂಜಿನಿಯರಿಂಗ್ ಕಾಲೇಜು ಮತ್ತು ರಾಜ್ಯದಲ್ಲಿ 16 ಸ್ವಾಯತ್ತ ಕಾಲೇಜುಗಳಲ್ಲಿ ಸಿವಿಎಲ್ ಇಂಜಿನಿಯರಿಂಗ್ ಶಿಕ್ಷಣ  ಲಭ್ಯವಾಗುತ್ತಿದೆ. ಸ್ವಾಯತ್ತ ಕಾಲೇಜುಗಳಿಂದ ಹೊರಬರುವ ಸಿವಿಲ್ ಎಂಜಿನಿಯರು ಗಳು ಗ್ರೇಡಿಂಗ್ ಆಧಾರದಲ್ಲಿ ಫಲಿತಾಂಶ ಪಡೆದುಕೊಂಡಿದ್ದಾರೆ. ವಿಟಿಯುನಿಂದ ಹೊರಬರುವ  ವಿದ್ಯಾರ್ಥಿಗಳು ಶೇಕಡವಾರು ಫಲಿತಾಂಶ ಪಡೆದಿರುತ್ತಾರೆ. ಇದೀಗ ಸರ್ಕಾರ ವಿವಿಧ ಇಲಾಖೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ನೇಮಕಾತಿ ವೇಳೆಯಲ್ಲಿ ಗ್ರೇಡಿಂಗ್  ಫಲಿತಾಂಶವನ್ನು ಫಲಿತಾಂಶಕ್ಕೆ ಸಮೀಕರಣ ಬಳಸಿ ಬದಲಿಸಿಕೊಳ್ಳುತ್ತದೆ.

ಹೀಗೆ ಬದಲಿಸಿಕೊಳ್ಳುವಾಗ ಗ್ರೇಡಿಂಗ್ ವಿದ್ಯಾರ್ಥಿಗಳಿಗೆ ಸರಾಸರಿ ಶೇ.7ರಿಂದ 8ರಷ್ಟು ಅಂಕಗಳು ಹೆಚ್ಚಾಗುತ್ತದೆ. ವಿಟಿಯು ಪದವೀಧರ ಅಭ್ಯರ್ಥಿಗಳಿಗೆ ವಾಸ್ತವ ಫಲಿತಾಂಶವಿರುತ್ತದೆ. ಹೀಗಾಗಿ ಸಹಜವಾಗಿ ಸ್ವಾಯತ್ತ ಕಾಲೇಜುಗಳ ಸಿವಿಲ್ ಎಂಜಿನಿಯರ್‍ಗಳಿಗೆ ಮೊದಲ ಆದ್ಯತೆ ಸಿಗುತ್ತಿದೆ. ಕಳೆದ ವರ್ಷ ಸರ್ಕಾರದ ಮೂರು ಇಲಾಖೆಗಳಲ್ಲಿ ನಡೆದ ನೇಮಕಾತಿಯಲ್ಲಿ ಈ ಬೆಳವಣಿಗೆ  ಸ್ಪಷ್ಟವಾಗಿ ಗೋಚರವಾಗಿ ದೆ. ಶೇ.70ರಷ್ಟು ಸ್ವಾಯತ್ತ ಕಾಲೇಜು ವಿದ್ಯಾರ್ಥಿಗಳೇ ಕೆಲಸಕ್ಕೆ ಅರ್ಹತೆ ಪಡೆಯುತ್ತಿದ್ದಾರೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಬಡ ವಿದ್ಯಾರ್ಥಿಗಳಂತೂ  ಅರ್ಹತೆ ಪಡೆ ಯುವುದು ದೂರದ ಮಾತೇ ಎಂಬಂತಾಗಿದೆ ಎಂಬುದು ವಿಟಿಯು ಸಿವಿಲ್ ಎಂಜಿನಿಯರ್‍ಗಳ ಅಳಲು.

ಅಭ್ಯರ್ಥಿಗಳ ವಾದವೇನು?
ನೇರ ನೇಮಕಾತಿ ಸಂದರ್ಭದಲ್ಲಿ ಪ್ರತ್ಯೇಕವಾಗಿ ಒಂದು ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಿ ಎಂಬುದು ವಿಟಿಯು ವಿದ್ಯಾರ್ಥಿಗಳ ವಾದ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿಯವರು  ಸರ್ಕಾರಕ್ಕೆ ಬರೆದಿರುವ ಪತ್ರದಲ್ಲೂ ಈ ಸಂಗತಿ ಉಲ್ಲೇಖಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಈ ಸಂಗತಿಯನ್ನು ತಲೆಗೆ ಹಾಕಿಕೊಳ್ಳಲೇ ಇಲ್ಲ. ಮೂರಕ್ಕೂ ಹೆಚ್ಚು ಇಲಾಖೆ ನೇಮಕಾತಿ ವೇಳೆ  ರಾಜ್ಯ ಸರ್ಕಾರದಲ್ಲಿ ತಮ್ಮ ಅಹವಾಲು ಸಲ್ಲಿಸುತ್ತಾ ಬಂದಿದ್ದರು. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿವಿಲ್ ಎಂಜಿನಯರ್ ಹುದ್ದೆಗೂ ಇದೇ ರೀತಿ ಮಾನದಂಡ ಅನುಸರಿಸಿದಾಗ ಎಚ್ಚೆತ್ತ ವಿದ್ಯಾರ್ಥಿಗಳು ರಾಜ್ಯಪಾಲರಿಗೆ, ಪ್ರಧಾನಿಯವರಿಗೆ ಪತ್ರ ಬರೆದು ಅನ್ಯಾಯ ಸರಿಪಡಿಸುವಂತೆ ಕೋರಿದ್ದಾರೆ.

ಸರ್ಕಾರಕ್ಕೆ ನಿರ್ದೇಶನ
ಪೂರಕ ದಾಖಲೆಗಳೊಂದಿಗೆ ವಿಟಿಯು ಅಭ್ಯರ್ಥಿಗಳಿಂದ ಬಂದ ದೂರನ್ನು ಗಮನಿಸಿದ ರಾಜಭವನ ಮತ್ತು ಪ್ರಧಾನಿ ಕಚೇರಿಗಳು, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದು ನಿಯಮಗಳ   ಪ್ರಕಾರ ನಡೆದುಕೊಳ್ಳುವಂತೆ ಮತ್ತು ವಿಟಿಯು ಅಭ್ಯರ್ಥಿಗಳಿಗಾಗುತ್ತಿರುವ ತೊಂದರೆ ಬಗ್ಗೆ ಗಮನಿಸುವಂತೆ ಸೂಚಿಸಿದೆ. ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಈ ಸಂಬಂಧ ಪತ್ರ  ತಲುಪಿದ್ದು, ಮಾಧ್ಯಮಗಳಿಗೆ ದಾಖಲೆ ಲಭ್ಯವಾಗಿದೆ.

ರಾಜ್ಯಸರ್ಕಾರಕ್ಕೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಪ್ರಧಾನಿ ಮತ್ತು ರಾಹುಲ್ ಗಾಂ„ಯವರಿಗೂ ದೂರು ಸಲ್ಲಿಸಿದ್ದೆವು.
-ಧರಣೇಶ್, ಗೋಪಾಲಕೃಷ್ಣ,
ವಿಜಯಕುಮಾರ್, ವಿಟಿಯು ಸಿವಿಲ್ ಎಂಜಿನಿಯರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com