ಆನ್‍ಲೈನ್‍ನಲ್ಲಿ ಪರಿಸರ ಪ್ರಮಾಣಪತ್ರ

ಮಾಲಿನ್ಯ ಹಾಗೂ ಅದರ ನಿಯಂತ್ರಣ ಚರ್ಚೆಯ ವಿಷಯಗಳಾಗುತ್ತಿರುವಂತೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಟೆಕ್ ಆಗುತ್ತಿದೆ. ವಿಶ್ವದರ್ಜೆಯ ಪ್ರಯೋಗಾಲಯವನ್ನು ಹೊಂದುವ ಜೊತೆಗೆ...
ಆನ್‍ಲೈನ್ ಮೂಲಕ ಪರಿಸರ ಪ್ರಮಾಣಪತ್ರ ವಿತರಿಸುವ ಎಕ್ಸ್ ಜೆನ್ ತಂತ್ರಾಂಶವನ್ನು ಪರಿಸರ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಆನ್‍ಲೈನ್ ಮೂಲಕ ಪರಿಸರ ಪ್ರಮಾಣಪತ್ರ ವಿತರಿಸುವ ಎಕ್ಸ್ ಜೆನ್ ತಂತ್ರಾಂಶವನ್ನು ಪರಿಸರ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

ಬೆಂಗಳೂರು: ಮಾಲಿನ್ಯ ಹಾಗೂ ಅದರ ನಿಯಂತ್ರಣ ಚರ್ಚೆಯ ವಿಷಯಗಳಾಗುತ್ತಿರುವಂತೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಟೆಕ್ ಆಗುತ್ತಿದೆ. ವಿಶ್ವದರ್ಜೆಯ ಪ್ರಯೋಗಾಲಯವನ್ನು  ಹೊಂದುವ ಜೊತೆಗೆ, ಹಸಿರು ಮತ್ತು ಕಿತ್ತಳೆ ವಲಯದ ಕೈಗಾರಿಕೆಗಳಿಗೆ ಆನ್‍ಲೈನ್ ಮೂಲಕವೇ ಪ್ರಮಾಣಪತ್ರ ನೀಡಲು ಪ್ರಾರಂಭಿಸಿದೆ.

ಐಎಸ್‍ಒ/ಐಇಸಿ, ಎನ್‍ಎಬಿಎಲ್, ಐಎಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ದರ್ಜೆಯ ಮಾನದಂಡಗಳನ್ನು ಅಳವಡಿಸಿಕೊಂಡ ಅತ್ಯಾಧು ನಿಕ ಪ್ರಯೋಗಾಲಯಕ್ಕೆ ಪರಿಸರ ಸಚಿವ ಬಿ  ರಮಾನಾಥ ರೈ ಬುಧವಾರ ನಿಸರ್ಗ ಭವನದಲ್ಲಿ ಚಾಲನೆ ನೀಡಿದರು.

ಐಎಸ್‍ಒ/ಐಇಸಿ 17025: 2005 ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣೆ ವ್ಯವಸ್ಥೆಯೊಂದಿಗೆ ತಾಂತ್ರಿಕ ಸಮರ್ಥತೆಯನ್ನು ಹೊಂದಿರುವ ಪ್ರಮಾಣಪತ್ರ ನೀಡುವ ಅರ್ಹತೆಗಳಿಸಿದೆ. ಪರೀಕ್ಷೆ  ಮತ್ತು ಮಾಪನಾಂಕ ಪ್ರಯೋಗಾಲಯಗಳಿಗೆ ಪ್ರಮಾಣಪತ್ರ ನೀಡುವ ರಾಷ್ಟ್ರೀಯ ಅಧಿಕಾರ ಮಂಡಳಿ (ಎನ್‍ಎಬಿಎಲ್) ಈ ಪ್ರಯೋ ಗಾಲಯಕ್ಕೆ ಮಾನ್ಯತೆ ನೀಡಿದ್ದು ನೀರಿಗೆ ಸಂಬಂಧಿಸಿದ 29  ಹಾಗೂ ತ್ಯಾಜ್ಯ ನೀರಿನ 33 ಗುಣಮಾನಕಗಳ ಪರೀಕ್ಷೆ ನಡೆಸಲು ಅನುಮತಿ ದೊರೆತಿದೆ.

ಆನ್‍ಲೈನ್‍ನಲ್ಲಿ ಪರಿಸರ ಪ್ರಮಾಣ ಪತ್ರ: ನಂತರ, ಪರಿಸರ ಭವನದಲ್ಲಿ ನಡೆದ ಸಮಾರಂಭದಲ್ಲಿ, ಆನ್‍ಲೈನ್ ಮೂಲಕ ಪರಿಸರ ಪ್ರಮಾಣಪತ್ರ ವಿತರಿಸುವ ಎಕ್ಸ್ ಜೆನ್ ತಂತ್ರಾಂಶವನ್ನು  ಸಚಿವರು ಉದ್ಘಾಟಿಸಿದರು. ಇದರಿಂದಾಗಿ ಹಸಿರು ಮತ್ತು ಕಿತ್ತಳೆ ವಲಯದಲ್ಲಿರುವ ಕೈಗಾರಿಕೆಗಳು, ರಾಜ್ಯದ ಯಾವುದೇ ಭಾಗದಲ್ಲಿದ್ದರೂ, ಆನ್‍ಲೈನ್ ಮೂಲಕವೇ ಜಲ ಕಾಯ್ದೆ, ವಾಯು ಕಾಯ್ದೆ,  ಅಪಾಯಕಾರಿ ತ್ಯಾಜ್ಯವಸ್ತುಗಳ ನಿರ್ವಹಣೆ ನಿಯಮ ಮತ್ತು ಮುನಿಸಿಪಲ್ ಘನತ್ಯಾಜ್ಯ ವಸ್ತುಗಳ ನಿಯಮಗಳ ಅಡಿಯಲ್ಲಿ ಪರವಾನಗಿ ಪತ್ರವನ್ನು ಪಡೆಯಲು ಸಾಧ್ಯ. ಅಷ್ಟೇ ಅಲ್ಲ, ಅರ್ಜಿಯ  ವಿವಿಧ ಹಂತದ ಸ್ಥಿತಿ, ಮಾಲಿನ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸಲ್ಲಿಸಬೇಕಾದ ವರದಿಗಳು, ಪರಿವೀಕ್ಷಣಾ ವರದಿಗಳು, ಮಾಪನ ಫಲಿತಾಂಶಗಳು, ಬಾಕಿ ಶುಲ್ಕ ಇತ್ಯಾದಿ ವಿವರಗಳನ್ನೂ  ಆನ್‍ಲೈನ್‍ನಲ್ಲಿ ಪಡೆಯುವ ಅವಕಾಶ ಲಭ್ಯವಾಗಿದೆ. ಕೆಂಪು ವಲಯದಲ್ಲಿ ಬರುವ ಕೈಗಾರಿಕೆಗಳಿಗೆ ಆನ್‍ಲೈನ್ ಪ್ರಮಾಣಪತ್ರ ಒದಗಿಸುವ ವ್ಯವಸ್ಥೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ಬರಲಿದೆ  ಎಂದು ಸಚಿವ ರಮಾನಾಥ ರೈ ವಿವರಿಸಿದರು.

ನಗರಗಳಲ್ಲೂ ಘಟಕ: ಮಂಡಳಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಮೈಸೂರಿನಲ್ಲಿ ಶಬ್ದ ಮಟ್ಟ ಧ್ಯಯನ, ಹುಬ್ಬಳ್ಳಿಧಾರವಾಡ, ಮಂಗಳೂರು, ಬಳ್ಳಾರಿ ಹಾಗೂ ಕಲಬುರಗಿ ನಗರಗಳಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಸಿಮೆಂಟ್, ಉಕ್ಕು, ಡಿಸ್ಟಿಲರಿ, ಸಕ್ಕರೆ, ಔಷಧದಂಥ ಒಟ್ಟು 17 ಕೈಗಾರಿಕೆ ಗಳಿಗೆ ನಿರಂತರ ಜಲ ಮತ್ತು ವಾಯು  ಮಾಲಿನ್ಯ ಅಳೆಯುವ ಉಪಕರಣಗಳನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದರು. ಮಂಡಳಿಯ ಮಾಜಿ ಅಧ್ಯಕ್ಷ ವಾಮ ನಾಚಾರ್ಯ, ಪದಾಧಿಕಾರಿಗಳಾದ ಮೋಹನ ಕುಮಾರ್ ಕೊಂಡಜ್ಜಿ, ಡಾ. ಜೈಪ್ರಕಾಶ್ ಆಳ್ವ, ಜೆ.ಜಿ. ಕಾವೇರಿಯಪ್ಪ, ಎಸ್. ಶಾಂತಪ್ಪ ಇದ್ದರು.

ಐವತ್ತಕ್ಕಿಂತ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಹೊಂದುವುದು ಕಡ್ಡಾಯವಾಗಲಿದೆ.
-ಬಿ ರಮಾನಾಥ ರೈ

ಪರಿಸರ ಸಚಿವ ಮಾಲಿನ್ಯ ನಿಯಂತ್ರಣ ರ್ಯಾಂಕಿಂಗ್ ನಲ್ಲಿ ನಮ್ಮ ಸ್ಥಾನ 9ರಲ್ಲಿದ್ದು, ಇದನ್ನು ಉತ್ತಮಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು.
- ರಾಮಚಂದ್ರ ಅಧ್ಯಕ್ಷರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com