ಕೆಸಿಡಿಸಿ ಕಂಡು ಸಿಎಂ ಸಿದ್ದರಾಮಯ್ಯ ಕಸಿವಿಸಿ

‘ವಾರ್ಡ್ ಮಟ್ಟದಲ್ಲೇ ಕಸ ಸಂಗ್ರಹಣೆ ಮಾಡಿ, ವಿಂಗಡಣೆ ಮಾಡದೆ ನಗರದ ಕಸ ಇಲ್ಲಿ ತಂದು ಹಾಕುವುದು ಬೇಡ. ಇದರಿಂದ ಪಕ್ಕದ ಕೆರೆಯ ನೀರು ಕಲುಷಿತವಾಗುತ್ತಿದೆ...
ನಗರ ಪ್ರದಕ್ಷಿಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(ಫೋಟೋ ಕೃಪೆ: ಕೆಪಿಎನ್)
ನಗರ ಪ್ರದಕ್ಷಿಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(ಫೋಟೋ ಕೃಪೆ: ಕೆಪಿಎನ್)

ಬೆಂಗಳೂರು: ‘ವಾರ್ಡ್ ಮಟ್ಟದಲ್ಲೇ ಕಸ ಸಂಗ್ರಹಣೆ ಮಾಡಿ, ವಿಂಗಡಣೆ ಮಾಡದೆ ನಗರದ ಕಸ ಇಲ್ಲಿ ತಂದು ಹಾಕುವುದು ಬೇಡ. ಇದರಿಂದ ಪಕ್ಕದ ಕೆರೆಯ ನೀರು ಕಲುಷಿತವಾಗುತ್ತಿದೆ’

ನಗರ ವೀಕ್ಷಣೆ ಅಂಗವಾಗಿ ಶನಿವಾರ ಕೂಡ್ಲುವಿನ ಕೆಸಿಡಿಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದಾಗ ಸ್ಥಳೀಯರು ಹೀಗೆಂದು ಗೋಳು ತೋಡಿಕೊಂಡರು.

ಕೆಸಿಡಿಸಿ ಘಟಕದ ಮುಂದೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಬರುತ್ತಿದ್ದಂತೆ ಸ್ಥಳೀಯರು ಫಲಕ ಪ್ರದರ್ಶಿಸಿ ಪ್ರತಿಭಟನೆಯ ಸ್ವಾಗತ ನೀಡಿದರು. ಘಟಕ ಪರಿಶೀಲಿಸಿದ ಬಳಿಕ ಮತ್ತೆ ಬಂದಾಗ, ‘ತ್ಯಾಜ್ಯ  ಫಟಕ ಪರಿಶೀಲಿಸಿದ ಬಳಿಕ ಮತ್ತೆ ಬಂದಾಗ, ತ್ಯಾಜ್ಯ ಘಟಕದಿಂದ ಬರುವ ಲಿಚೆಟ್ ನಿಂದ ಸೋಮಸುಂದರ ಪಾಳ್ಯ ಕೆರೆ ಮಲಿನಗೊಳ್ಳುತ್ತಿದೆ. ಸ್ಥಳೀಯರು ನಿತ್ಯ ಕಸದ ದುರ್ವಾಸನೆ ಸಹಿಸಬೇಕಾಗಿದೆ. ಸುಮಾರು 15 ಪ್ರಕರಣಗಳಲ್ಲಿ ಮಕ್ಕಳು ಗಂಭೀರ ಕಾಯಿಲೆಗೆ ಒಳಗಾಗಿದ್ದಾರೆ. ಕಸ ವಿಂಗಡಣೆ ಮಾಡದೆ ತರುವುದರಿಂದ ದುರ್ವಾಸನೆ ಹೆಚ್ಚುತ್ತಿದೆ. ಹೀಗಾಗಿ ಘಟಕ ಕೂಡಲೇ ಮುಚ್ಚಿ, ವಾರ್ಡ್ಧಿನಲ್ಲೇ ಕಸ ನಿರ್ವಹಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಲಮಂಡಳಿ ಅಧ್ಯಕ್ಷ ವಿಜಯಭಾಸ್ಕರ್ ಹಾಗೂ ಬಿಡಿಎ ಆಯುಕ್ತ ಶ್ಯಾಮ ಭಟ್ ಅವರ ಜೊತೆ ಸ್ಥಳದಲ್ಲೇ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೆರೆಯ ಅಭಿವೃದ್ಧಿ ಬಿಡಿಎ ಮಾಡಬೇಕು. ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಿಸಿ ಕೆರೆ ರಕ್ಷಿಸಬೇಕು’ ಎಂದು ಸೂಚನೆ ನೀಡಿದರು. ಬಿಬಿಎಂಪಿಗೆ ಘಟಕ:ಇದಕ್ಕೂ ಮುನ್ನ ಘಟಕ ಪರಿಶೀಲಿಸಿದ ಮುಖ್ಯಮಂತ್ರಿಗಳಿಗೆ ಅಧಿಕಾರಿ ಗಳು ಮಾಹಿತಿ ನೀಡಿದರು. 40 ವರ್ಷ ಹಿಂದೆ ಆರಂಭವಾದ ಘಟಕದಲ್ಲಿ ಈಗ ದಿನಕ್ಕೆ 400 ಟನ್ ಕಸ ಹಾಕುತ್ತಿದ್ದು, 200 ಟನ್ ಕಸ ಸಂಸ್ಕರಿಸಿ ಗೊಬ್ಬರ ಮಾಡಲಾಗುತ್ತಿದೆ. ಪ್ರತಿ ಕ್ವಿಂಟಾಲ್ ಗೊಬ್ಬರಕ್ಕೆ ರು.3, 800 ದರವಿದೆ.

ಹೊಸದಾಗಿ ಬೃಹತ್ ಯಂತ್ರ ಅಳವಡಿಸುತ್ತಿದ್ದು, ತಿಂಗಳಿಗೆ 6 ಸಾವಿರ ಟನ್ ಕಸ ಸಂಸ್ಕರಣೆಯಾಗಿದೆ ಎಂದು ವಿವರಿಸಿದರು. ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಕೆಸಿಡಿಸಿ ನಿರ್ವಹಣೆ ಸರಿಯಾಗಿಲ್ಲ. ತ್ಯಾಜ್ಯದ ವಿಷಯುಕ್ತ ನೀರು ಪಕ್ಕದ ಕೆರೆ ಸೇರುತ್ತಿದೆ. ನಿರ್ವಹಣೆಯನ್ನು ಬಿಬಿಎಂಪಿಗೆ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ಸಿಮೆಂಟ್ ನೆಲವಿರುವುದರಿಂದ ತ್ಯಾಜ್ಯ ನೀರು ಹೊರಗೆ ಹರಿಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ನಂತರ ಘಟಕ ನಿರ್ವಹಣೆಯನ್ನು ಕೆಸಿಡಿಸಿಯಿಂದ ರದ್ದುಮಾಡಿ ಬಿಬಿಎಂಪಿಗೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದರು.

ಪರಿಶೀಲನೆ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಸಿಡಿಸಿ ಘಟಕವನ್ನು ರು.6೦ ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಬಫರ್ ಜೋನ್ ಎಂದು ಗುರುತಿಸಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂದರು. ನಗರ ವೀಕ್ಷಣೆಯ ಆರಂಭದಲ್ಲಿ ಮಿನ್ ಸ್ಕ್ವೇರ್ಧಿನ ಮೆಟ್ರೋ ಸುರಂಗಮಾರ್ಗ ಪರಿಶೀಲನೆ ನಡೆಯಿತು. ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಸುರಂಗಮಾರ್ಗದ ಬಗ್ಗೆ ವಿವರಣೆ ನೀಡಿದರು.

ಮಡಿವಾಳ ಕೆರೆ ಪರಿಶೀಲಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, 3-4 ಕೆರೆಗಳಿಂದ ಇಲ್ಲಿಗೆ ನೀರು ಬರುತ್ತಿದ್ದು, ಹಳೆಯ ಶುದಿಟಛೀಕರಣ ಘಟಕ ನವೀಕರಿಸಲು ಸೂಚಿಸಲಾಗಿದೆ. ಸಂಪುಟ ತೀರ್ಮಾನದಂತೆ ಕೆರೆ ಅಭಿವೃದ್ಧಿಯಾಗಲಿದೆ. ಕೆರೆ ಬಳಿಯ ಹೊಸೂರು ರಸ್ತೆ ರು.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

ಜಯನಗರ ಕಾಂಪ್ಲೆಕ್ಸ್:
ಜಯನಗರ 4ನೇ ಬ್ಲಾಕ್ ಬಸ್ ನಿಲ್ದಾಣ ಬಳಿ ರು.252 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಪಿಂಗ್ ಕಾಂಪ್ಲೆಕ್ಸ್ ವೀಕ್ಷಿಸಿದರು. ಇಲ್ಲಿ 4 ಬ್ಲಾಕ್ ಗಳಿದ್ದು, ಒಂದು ಬ್ಲಾಕ್ ನಿರ್ಮಾಣ ಪೂರ್ಣವಾಗಿದೆ. ಸಚಿವ ರಾಮಲಿಂಗಾರೆಡ್ಡಿ, ಶಾಸಕ ಬೈರತಿ ಬಸವರಾಜು ಹಾಜರಿದ್ದರು.

ಮತ್ತೆ ಪಟಾಕಿ:
ಚುನಾವಣೆಗೆ ಮುನ್ನ ಮುಖ್ಯಮಂತ್ರಿಗಳು ವೀಕ್ಷಣೆಗೆ ತೆರಳಿದ್ದಾಗ ಪ್ರಚಾರ ಭಾಗವಾಗಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು. ನೀರು ಸೋರಿಕೆ ತಡೆ:ಜಯನಗರದಲ್ಲಿ
ಜಲಮಂಡಳಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ನಗರದಲ್ಲಿ ಕುಡಿಯುವ ನೀರು ಶೇ.51ರಷ್ಟು ಸೋರಿಕೆಯಾಗುತ್ತಿದೆ. ಇದನ್ನು ಶೇ.16ರ ಪ್ರಮಾಣಕ್ಕೆ ಇಳಿಸಲು ಜಲಮಂಡಳಿ ಮೂರು ಕಡೆಗಳಲ್ಲಿ ಯೋಜನೆ ಜಾರಿ ಮಾಡಿದೆ.

ದಕ್ಷಿಣ ವಲಯ ಸೇರಿದಂತೆ ಒಟ್ಟು 152 ಚ.ಕಿ.ಮೀ ವ್ಯಾಪ್ತಿಯಲ್ಲಿ ಪ್ರಯೋಗ ನಡೆಯುತ್ತಿದೆ. ನೀರಿನ ಸೋರಿಕೆ ತಡೆಗಟ್ಟುವುದು, ಅನಧಿಕೃತ ಸಂಪರ್ಕಕ್ಕೆ ಕಡಿವಾಣ, ವೆಚ್ಚಕ್ಕೆ ಕಡಿವಾಣ ಹಾಗೂ ಉಳಿತಾಯದ ನೀರನ್ನು 100 ಹಳ್ಳಿಗಳಿಗೆ ಪೂರೈಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 2013ರಲ್ಲಿ ಆರಂಭವಾದ ಈ ಯೋಜನೆ ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಎಲ್ ಎನ್ಧಿಟಿ ಸಂಸ್ಥೆ ನೀಡಲಾಗಿದೆ. ಒಟ್ಟು ರು.600 ಕೋಟಿ ವೆಚ್ಚದ ಯೋಜನೆ 6 ವರ್ಷಗಳಲ್ಲಿ, ಅಂದರೆ 2019ರಲ್ಲಿ ಪೂರ್ಣಗೊಳ್ಳಲಿದೆ.

ತನಿಖೆ:
ಕಟಾರಿಯಾ ವರದಿ ಉಲ್ಲೇಖಿಸಿದ ಆಧಾರದಲ್ಲಿ ಬಿಬಿಎಂಪಿ ಹಿಂದಿನ ಹಗರಣಗಳನ್ನು ತನಿಖೆಗೆ ನೀಡಲಾಗುವುದು. ಯಾವ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಮುಂದೆ  ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಮಳೆ ನೀರು ಕೊಯ್ಲು ಕಡ್ಡಾಯ
ಡಿಸೆಂಬರ್ ಬಳಿಕ ನಗರದಲ್ಲಿ ವಸತಿ ಸಂಕೀರ್ಣ, ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಿಕೊಳ್ಳದಿದ್ದರೆ ದಂಡ ವಸೂಲಿ ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.

ಕೆಆರ್ ಎಸ್ ನಲ್ಲಿ ಕಳೆದ ವರ್ಷ 45 ಟಿಎಂಸಿ ನೀರಿದ್ದು, ಈ ಬಾರಿ 25 ಟಿಎಂಸಿ ಮಾತ್ರವಿದೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಇದಕ್ಕೆ ಪರಿಹಾರವಾಗಿ
ಬೋರ್ಧಿವೆಲ್ ದುರಸ್ತಿ, ನೀರಿನ ಸೋರಿಕೆ ತಡೆಗಟ್ಟುವಿಕೆ ಹಾಗೂ ಉದ್ಯಾನ, ನಿರ್ಮಾಣ ಕಾರ್ಯಕ್ಕೆ ಅನಗತ್ಯ ನೀರು ಬಳಸದಂತೆ ಕ್ರಮ ಕೈಗೊಳ್ಳಲಾಗುವುದು. ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಎಲ್ಲ ಕಟ್ಟಡಗಳು ಅಳವಡಿಸಿಕೊಳ್ಳಬೇಕಿದ್ದು, ಡಿಸೆಂಬರ್ ವರೆಗೆ ಕಾಲಾವಕಾಶ ನೀಡಲಾಗಿದೆ. ಇಲ್ಲದಿದ್ದರೆ ಮೊದಲ ಮೂರು ತಿಂಗಳು ವಸತಿ ಕಟ್ಟಡಗಳಿಗೆ ತಿಂಗಳ ನೀರಿನ ಶುಲ್ಕದ ಶೇ.25ರಷ್ಟು ದಂಡ ಹಾಗೂ ನಂತರ ಶೇ.೫೦ರಷ್ಟು ವಸೂಲಿ ಮಾಡಲಾಗುವುದು. ವಾಣಿಜ್ಯ ಕಟ್ಟಡಕ್ಕೆ ಮೊದಲ ಮೂರು ತಿಂಗಳು ಶುಲ್ಕದ ಶೇ.50 ಹಾಗೂ ನಂತರ ಶೇ.೧೦೦ ರಷ್ಟು ದಂಡ ಹಾಕಲಾಗುವುದು ಎಂದು ತಿಳಿಸಿದರು.

ಕೆಲಸಗಾರರ ಸಮಸ್ಯೆ ಆಲಿಸಿದ ವಿಜಯಭಾಸ್ಕರ್
ಜಲ ಮಂಡಳಿಯ ನೈರ್ಮಲ್ಯ ಕೆಲಸಗಾರರಿಗೆ ಶನಿವಾರ ಮಂಡಳಿಯ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರೊಂದಿಗೆ ಕಾಫಿ ಕುಡಿಯುವ ಜೊತೆಗೆ, ಸಮಸ್ಯೆಗಳನ್ನು ಹೈಳಿಕೊಳ್ಳುವ ಅವಕಾಶ ಸಿಕ್ಕಿತ್ತು.

ಜಲಮಂಡಳಿ ಪ್ರತಿ ಶನಿವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾರ್ಯಾಚರಣೆ ನಡೆಸುತ್ತಿದ್ದು, ಅದರಂತೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನೈರ್ಮಲ್ಯ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ನಿರ್ವಹಣಾ ಸಿಬ್ಬಂದಿ ಸಮಸ್ಯೆಗಳನ್ನು ಅರಿಯಲು ಹಾಗೂ ಕೆಲಸದ ಬಗ್ಗೆ ಉತ್ಸಾಹ ತುಂಬಲು ಕಾಫಿ ವಿತ್ ಸ್ಯಾನಿಟರಿ ವರ್ಕರ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದ ಬಗ್ಗೆ ಅಧ್ಯಕ್ಷರು ವಿಚಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com