
ಬೆಂಗಳೂರು: ಬಹುನಿರೀಕ್ಷಿತ ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಹೊರಡಿಸಬೇಕಿದ್ದ ಅಧಿಸೂಚನೆಯನ್ನು ನ.1 ರ ರಾಜ್ಯೋತ್ಸವ ದಿನಕ್ಕೆ ಮುಂದೂಡಲಾಗಿದೆ.
ಇದಕ್ಕೂ ಮುನ್ನ ಅ.19 ರಂದು ಅಧಿಸೂಚನೆ ಹೊರಡಿಸಲು ತಯಾರಿ ನಡೆದಿತ್ತು. ಆದರೆ ರಾಜ್ಯೋತ್ಸವದ ವಿಶೇಷ ದಿನದಂದು ನಗರದ ಜನತೆಗೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಅಧಿಸೂಚನೆ ದಿನಾಂಕವನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಲಾಗಿದೆ. ಇದರಿಂದಾಗಿ ಅರ್ಜಿ ಸಲ್ಲಿಸಲು ತುದಿಗಾಲಲ್ಲಿದ್ದವರು ನಿರಾಸೆಗೊಳಗಾಗಿದ್ದಾರೆ. ಅರ್ಜಿ ಸಲ್ಲಿಸಲು ಮತ್ತಷ್ಟು ದಿನಗಳ ಕಾಲ ಕಾಯಬೇಕಿದೆ. ಸರಣಿ ರಜಾದಿನಗಳು ಇರುವುದರಿಂದ ಅಧಿಸೂಚನೆ ಹೊರಡಿಸಿದರೆ ಮುಂದಿನ ಪ್ರಕ್ರಿಯೆಗಳಿಗೆ ಅಡಚಣೆಯಾಗಬಹುದು ಎಂಬ ಚರ್ಚೆಯೂ ನಡೆದಿದೆ.
ಉಂಟು ಮೀಸಲಾತಿ ಫಲ : 20/30 ನಿವೇಶನದ ರು.5 ಲಕ್ಷ ದರ ದಿಂದ ಆರಂಭವಾಗಿ 50/80 ವಿಸ್ತೀರ್ಣದ ರು.96 ಲಕ್ಷದ ನಿವೇಶನದವರೆಗೆ ದರವಿದೆ. ಸದ್ಯಕ್ಕೆ 5 ಸಾವಿರ ನಿವೇಶನ
ಹಂಚಲಾಗುತ್ತಿದೆ. ನಿವೇಶನ ಹಂಚಿಕೆಯ ಜೊತೆಗೆ ವಿವಿಧ ವರ್ಗಗಗಳಿಗೆ ಮೀಸಲಿನ ಲಾಭವೂ ದೊರೆತಿದೆ. ಇದರಲ್ಲಿ ಹಿಂದುಳಿದ ವರ್ಗ ಕ್ಕೆ ಪ್ರತ್ಯೇಕವಾದ ಶೇ.10 ರಷ್ಟು ಮೀಸಲು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದ `2ಎ' ಹಾಗೂ ` 2ಬಿ' ವರ್ಗಕ್ಕೆ ಒಟ್ಟು ಶೇ.10 ಪ್ರತ್ಯೇಕ ಮೀಸಲು ನೀಡಲಾಗಿದೆ.
ಕಳೆದ ಬಾರಿ ನಿವೇಶನಕ್ಕೆ ಅರ್ಜಿ ಕರೆದಿದ್ದಾಗ ಹಿಂದುಳಿದ ವರ್ಗಕ್ಕೆ ಮೀಸಲು ನೀಡರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿ ದ ವರ್ಗಕ್ಕೆ ಮೀಸಲು ಕಲ್ಪಿಸಿದ್ದಾರೆ. ಪ.ಪಂಗಡಕ್ಕೆ ಶೇ.3, ಪ.ಜಾತಿಗೆ ಶೇ.15, ಪ್ರವರ್ಗ1ಕ್ಕೆ ಶೇ.2, ಮಾಜಿ ಸೈನಿಕರಿಗೆ ಶೇ.5, ರಾಜ್ಯ ಸರ್ಕಾರಿ ನೌಕರರಿಗೆ ಶೇ.10, ಕೇಂದ್ರ ಸರ್ಕಾರಿ ನೌಕರರಿಗೆ ಶೇ.2, ವಿಕಲಚೇತನರಿಗೆ ಶೇ.2, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಶೇ.2 ರಷ್ಟು ಮೀಸಲು ನೀಡಲಾಗಿದೆ.
Advertisement