ಎಟಿಎಂಗೆ ತುಂಬಬೇಕಿದ್ದ ರೂ 50 ಲಕ್ಷ ಎಗರಿಸಿ ಪರಾರಿಯಾದ!

ಇಂಡಸ್ ಇಂಡ್ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ನೇಮಕಗೊಂಡಿದ್ದ ಸಿಬ್ಬಂದಿಯೇ ಹಣ ದೋಚಿ ಪರಾರಿಯಾಗಿದ್ದಾನೆ.
ಇಂಡಸ್ ಇಂಡ್ ಬ್ಯಾಂಕ್ ಗೆ ಸೇರಿದ 50 ಲಕ್ಷ ರೂ ಕಳ್ಳತನ
ಇಂಡಸ್ ಇಂಡ್ ಬ್ಯಾಂಕ್ ಗೆ ಸೇರಿದ 50 ಲಕ್ಷ ರೂ ಕಳ್ಳತನ
Updated on

ಬೆಂಗಳೂರು: ಇಂಡಸ್ ಇಂಡ್ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ನೇಮಕಗೊಂಡಿದ್ದ ಸಿಬ್ಬಂದಿಯೇ ಹಣ ದೋಚಿ ಪರಾರಿಯಾಗಿದ್ದಾನೆ.
ನಗರದ ಎಂಜಿ ರಸ್ತೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಹಣ ತುಂಬಲು ಬಂದಿದ್ದ ಸಹಾಯಕ ಸಿಬ್ಬಂದಿ ಮಹೇಶ್(21) ಎಂಬಾತನೇ ಈ ಕೃತ್ಯ ಎಸಗಿದಾಟ. ಎಟಿಎಂ ಗೆ ತುಂಬಲು ರೂ 1 ಕೋಟಿ ಹಣ ತರಲಾಗಿತ್ತು. ಅದರಲ್ಲಿ ಆರೋಪಿ ಮಹೇಶ್ ರೂ.50 ಲಕ್ಷ ದೋಚಿದ್ದು ಇನ್ನೂ ಅರ್ಧ ಹಣವನ್ನು ಹಾಗೆ ಬಿಟ್ಟು ಹೋಗಿದ್ದಾನೆ.
ಅಂದ್ರಳ್ಳಿ ಮೂಲದ ಆಟೋ ಚಾಲಕನ ಪುತ್ರ ನಂದಿನಿ ಲೇಔಟ್ ನಿವಾಸಿ ಮಹೇಶ್ ಕಳೆದ ಮೂರು ದಿನಗಳ ಹಿಂದೆ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಹಣ ಹಾಕಲು ಸಹಾಯಕನಾಗಿ ಸೇರಿಕೊಂಡಿದ್ದ. ಬುಧವಾರ ಎಟಿಎಂ ಗೆ ಹಣ ತುಂಬಲು ಹೋಗಬೇಕಿತ್ತು. ಈ ವೇಳೆ ಬ್ಯಾಂಕ್ ಒಳಗಿನಿಂದ ಹಣ ತೆಗೆದುಕೊಂಡು ಬಂದ ಮಹೇಶ್ ವಾಹನದಲ್ಲಿಡುವ ಬದಲು ಅದರಲ್ಲಿದ್ದ 5 ಹಣದ ಬಾಕ್ಸ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅಲ್ಲದೇ ಪರಾರಿಯಾಗುವ ಮೊದಲೇ ಹಣದ ವ್ಯಾನ್ ಭದ್ರತಾ ಸಿಬ್ಬಂದಿ ಮತ್ತು ಚಾಲಕನಿಗೆ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com