ನಕಲಿ ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ!

ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21), ಬ್ರಿಂಕ್ಸ್ ಆರ್ಯ ಕಂಪನಿಗೆ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21), ಬ್ರಿಂಕ್ಸ್ ಆರ್ಯ ಕಂಪನಿಗೆ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಬುಧವಾರ (ಅ.21) ಬೆಳಗ್ಗೆ 11.30ಕ್ಕೆ ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ಬಳಿ ಇರುವ ಎಟಿಎಂಗೆ ಬ್ರಿಂಕ್ಸ್ ಆರ್ಯ ಕಂಪನಿಯ ಮೇಲ್ವಿಚಾರಕ ಮಂಜುನಾಥ್, ಮಹೇಶ್, ಕಾರು ಚಾಲಕ ಪ್ರಭು ಮತ್ತು ಸೆಕ್ಯುರಿಟಿ ಗಾರ್ಡ್ ಮುತ್ತಣ್ಣ ಟಾಟಾ ಸುಮೋದಲ್ಲಿ ರು.1 ಕೋಟಿ ತಂದಿದ್ದರು. ಈ ವೇಳೆ ಮೂವರನ್ನು ಯಾಮಾರಿಸಿದ್ದ ಆರೋಪಿ ಮಹೇಶ್ ರು.50 ಲಕ್ಷ ದೋಚಿ ಪರಾರಿಯಾಗಿದ್ದ.

ಆತ ಕಂಪನಿಗೆ ನೀಡಿದ್ದ ದಾಖಲೆಗಳನ್ನು ಹಿಡಿದುಕೊಂಡು ಪೊಲೀಸರು ಆತನ ಮನೆ ಹುಡುಕಿಕೊಂಡು ಹೋಗಿದ್ದರು. ಆದರೆ, ಆ ವಿಳಾಸದಲ್ಲಿ ಮಹೇಶ್ ಹೆಸರಿನ ವ್ಯಕ್ತಿಯೇ ಇರಲಿಲ್ಲ. ಹೀಗಾಗಿ, ಆರೋಪಿಯ ಹೆಸರು ಮಹೇಶ ಎನ್ನುವುದು ಸುಳ್ಳಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com