ಮಹಿಳೆಯರ ಮೇಲೆ ಹಲ್ಲೆ: ಸಿಪಿಐ ಅಮಾನತು

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಮಹಿಳೆಯರನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆಗೆ ಸಂಬಂಧಿಸಿ ಖಡೇಬಜಾರ ಠಾಣೆ ಸಿಪಿಐ ಯು.ಎಚ್.ಸಾತೇನಹಳ್ಳಿ ಹಾಗೂ ಓರ್ವ ಎಎಸ್‍ಐ...
ಪೊಲೀಸರಿಂದ ಮಹಿಳೆಯರ ಮೇಲೆ ಥಳಿತ (ಸಂಗ್ರಹ ಚಿತ್ರ)
ಪೊಲೀಸರಿಂದ ಮಹಿಳೆಯರ ಮೇಲೆ ಥಳಿತ (ಸಂಗ್ರಹ ಚಿತ್ರ)

ಬೆಳಗಾವಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಮಹಿಳೆಯರನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆಗೆ ಸಂಬಂಧಿಸಿ ಖಡೇಬಜಾರ ಠಾಣೆ ಸಿಪಿಐ ಯು.ಎಚ್.ಸಾತೇನಹಳ್ಳಿ ಹಾಗೂ ಓರ್ವ ಎಎಸ್‍ಐ, ಇಬ್ಬರು ಮಹಿಳಾ ಪೇದೆಗಳನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ರವಿ ಎಸ್ ಶನಿವಾರ ರಾತ್ರಿ ಆದೇಶಿಸಿದ್ದಾರೆ.

ಇಲ್ಲಿಯವರೆಗೆ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಏಳಕ್ಕೇರಿದೆ. ಎಎಸ್‍ಐ ಎಂ.ಎಸ್.ಖನಗಾಂವಕರ, ಮಹಿಳಾ ಪೇದೆಗಳಾದ ಭಾರತಿ ಚಿಕ್ಕೋಡಿ, ಸುಮಂಗಲಾ   ಡೊಂಬರ ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ನಗರದ ಗಣಪತಿ ಗಲ್ಲಿ, ಖಡೇಬಜಾರ, ಮುಂತಾದೆಡೆ ವೇಶ್ಯಾವಾಟಿಕೆ, ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ  ವೇಶ್ಯಾವಾಟಿಕೆ ನಡೆಸುತ್ತಾರೆಂಬ ಗುಮಾನಿ ಇದ್ದ ಕೆಲ ಮಹಿಳೆಯರನ್ನು ಬಂಧಿಸುವ ಸಂದರ್ಭದಲ್ಲಿ ಶುಕ್ರವಾರ ಸಂಜೆ ಮೂವರು ಪೇದೆಗಳು ಮಹಿಳೆಯರನ್ನು ಬಹಿರಂಗವಾಗಿ ಹಿಗ್ಗಾಮುಗ್ಗಾ  ಥಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com