ರೊಟ್ಟಿ ಹಿಡಿದು ಹೋರಾಟ

ನರಗುಂದದಲ್ಲಿ ಕಳೆದ 52 ದಿನಗಳಿಂದಲೂ ಕಳಸಾಬಂಡೂರಿ ಯೋಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ರಾಜಧಾನಿಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನ ಕೂಡ ಸಾಥ್ ನೀಡಿದ್ದಾರೆ...
ಟೌನ್ ಹಾಲ್ ಬಳಿ ರೊಟ್ಟಿ ಹಿಡಿದು ಪ್ರತಿಭಟನೆ ನಡೆಸಿದ ಉತ್ತರ ಕರ್ನಾಟಕದ ಜನತೆ
ಟೌನ್ ಹಾಲ್ ಬಳಿ ರೊಟ್ಟಿ ಹಿಡಿದು ಪ್ರತಿಭಟನೆ ನಡೆಸಿದ ಉತ್ತರ ಕರ್ನಾಟಕದ ಜನತೆ

ಬೆಂಗಳೂರು: ನರಗುಂದದಲ್ಲಿ ಕಳೆದ 52 ದಿನಗಳಿಂದಲೂ ಕಳಸಾಬಂಡೂರಿ ಯೋಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ರಾಜಧಾನಿಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನ  ಕೂಡ ಸಾಥ್ ನೀಡಿದ್ದಾರೆ.

ಭಾನುವಾರ ಪುರಭವನದ ಮುಂದೆ ರೊಟ್ಟಿ ಹಾಗೂ ಖಾಲಿ ಬಿಂದಿಗೆ ಹಿಡಿದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಈ  ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಹಣವಂತರಾಯ ಬಿರಾದಾರ ಅವರು ಧಾರವಾಡ, ಹುಬ್ಬಳ್ಳಿ, ಗದಗ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಕಳಸಾ  ಬಂಡೂರಿ ನಾಲಾ ಯೋಜನೆ ರೂಪಿಸಲಾಗಿದೆ.

ಯೋಜನೆ ಜಾರಿಗೆ 40 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಇದುವರೆಗೆ ಅನುಷ್ಠಾನಗೊಂಡಿಲ್ಲ. ಮಳೆಯ ಕೊರತೆ ಎದುರಿಸುತ್ತಿರುವ ಈ ಭಾಗದ ಜನ ಕುಡಿಯುವ ನೀರಿಲ್ಲದೆ  ಕಂಗೆಟ್ಟಿದ್ದಾರೆ. ಮುಂದಿನ ಬೇಸಿಗೆಯೊಳಗೆ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಯೋಜನೆ ಜಾರಿಗೆ ಒತ್ತಾಯಿಸಿ ಆ ಭಾಗದ ರೈತರು, ವ್ಯಾಪಾರಿಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು ಕಳೆದ 52 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಆದ್ದರಿಂದ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿ ಒತ್ತಡ ಹೇರಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಹೋರಾಟಗಾರ ಜಗನ್ ನಂದಿ, ನ್ಯಾಯವಾದಿ ತೇಜಸ್ವಿ ಸೂರ್ಯ ಮಾತನಾಡಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com