
ಬೆಂಗಳೂರು: ಗಾಂಧಿನಗರದ ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ನಲ್ಲಿ ವಜ್ರದ ಹರಳುಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 5ಲಕ್ಷ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಸರುಘಟ್ಟದ ಶ್ರೀಕಾಂತ್(32) ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಆ.12ರಂದು ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ಗೆ ಬಂದ ಆರೋಪಿಯು ವಜ್ರಾಭರಣಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ನೋಡುತ್ತಾ ಅಂಗಡಿಯವರ ಕಣ್ತಪ್ಪಿಸಿ 4.70ಕ್ಯಾರೆಟ್ ವಜ್ರದ ಹರಳುಗಳನ್ನು ಕಳವುಮಾಡಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳವು ಕೃತ್ಯವನ್ನು ಅವಲೋಕಿಸಿ ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement