ಕುಡಿದು ಜಾಲಿ ರೈಡ್ ಮಾಡುತ್ತಿದ್ದ ಟೆಕಿ ಸಾವು

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಸ್ವಯಂ ಅಪಘಾತ ಪ್ರಕರಣಗಳಲ್ಲಿ ಪಾಮನತ್ತರಾಗಿದ್ದ ಓರ್ವ ಎಂಜಿನಿಯರ್ ಮೃತಪಟ್ಟು, ಮತ್ತೊಬ್ಬ ಎಂಜಿನಿಯರ್ ಗಾಯಗೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೈಜೀರಿಯಾ ಪ್ರಜೆ ಗಾಯಗೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಸ್ವಯಂ ಅಪಘಾತ ಪ್ರಕರಣಗಳಲ್ಲಿ ಪಾಮನತ್ತರಾಗಿದ್ದ ಓರ್ವ ಎಂಜಿನಿಯರ್ ಮೃತಪಟ್ಟು, ಮತ್ತೊಬ್ಬ ಎಂಜಿನಿಯರ್ ಗಾಯಗೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೈಜೀರಿಯಾ ಪ್ರಜೆ ಗಾಯಗೊಂಡಿದ್ದಾರೆ.

ಎಂಜಿನಿಯರ್ ಸಾವು: ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಬುಲೆಟ್ ಬೈಕ್‍ನಲ್ಲಿ ಜಾಲಿ ರೈಡ್ ಹೋಗಿದ್ದ ಇಬ್ಬರು ಎಂಜಿನಿಯರ್ ಅಪಘಾತದಲ್ಲಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾರೆ.
ಕೋರಮಂಗಲದ ಟೀಚರ್ಸ್ ಕಾಲೋನಿ ನಿವಾಸಿಗಳಾದ ದಿಲೀಪ್ ಸಿಂಗ್(28) ಮೃತರು. ಆತನ ಸ್ನೇಹಿತ ಹಿಮಾಂಶು(27) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವನಹಳ್ಳಿಯ ರಾಣಿ ವೃತ್ತದ ಬಳಿ ಶನಿವಾರ ಬೆಳಕ್ಕೆ 4.30ರ ವೇಳೆಗೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬಿಹಾರ ಹಾಗೂ ಮಧ್ಯಪ್ರದೇಶ ಮೂಲದ ಈ ಇಬ್ಬರೂ ವೈಟ್‍ ಫೀಲ್ಡ್ ನಲ್ಲಿ ಪ್ರತ್ಯೇಕ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಇತರೆ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡಿದ್ದಾರೆ.

ನಂತರ ಇಬ್ಬರೂ ಬೈಕ್‍ನಲ್ಲಿ ಜಾಲಿ ರೈಡ್‍ಗೆ ತೆರಳಿದ್ದಾರೆ. ತಕ್ಷಣ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಿಲೀಪ್ ಸಿಂಗ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನೈಜೀರಿಯಾ ಪ್ರಜೆಗೆ ಗಾಯ: ಪಾಮನತ್ತನಾಗಿದ್ದ 23 ವರ್ಷದ ನೈಜೀರಿಯಾ ಪ್ರಜೆಯ ಮೇಲೆ ಪೇಪರ್ ವಿತರಕರು ಹಲ್ಲೆ ಮಾಡಿದ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಆತ ಹೋಟೆಲ್‍ವೊಂದರ ಕಾಂಪೌಂಡ್ ಡಿಕ್ಕಿ ಹೊಡೆದು, ಕಾರು ಬಿಟ್ಟು ಪರಾರಿಯಾಗಿದ್ದಾನೆ. ಕಮ್ಮನಹಳ್ಳಿ ನಿವಾಸಿ ಬೊರ್‍ಗೈ ಮೋವಿಗಾ ಅಪಘಾತ ಮಾಡಿ ಪರಾರಿಯಾಗಿದ್ದ ನೈಜೀರಿಯಾ ಪ್ರಜೆ. ಈ ಸಂಬಂಧ ಬಾಣಸವಾಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com