ನಕಲಿ ಪಾಸ್‌ಪೋರ್ಟ್‌‌‌‌ ಪಡೆಯಲು ಸಹಾಯ: ಪೊಲೀಸ್ ಪೇದೆ ಪೋಸ್ಟ್‌ಮ್ಯಾನ್‌ ಸೆರೆ

ಅಪರಾಧ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಸುಳ್ಳು ದಾಖಲೆ ನೀಡಿ ಪಾಸ್‍ಫೋರ್ಟ್ ಪಡೆಯಲು ನೆರವಾಗಿದ್ದ ಆರೋಪದ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಸುಳ್ಳು ದಾಖಲೆ ನೀಡಿ ಪಾಸ್‍ಫೋರ್ಟ್ ಪಡೆಯಲು ನೆರವಾಗಿದ್ದ ಆರೋಪದ ಮೇಲೆ ಪೊಲೀಸ್ ಪೇದೆ ಹಾಗೂ ಅಂಚೆ ಸಿಬ್ಬಂದಿಯೊಬ್ಬರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಮೈಕೋ ಲೇಔಟ್ ಠಾಣೆ ಪೇದ ಯಲ್ಲಪ್ಪ ಬಣಜೆ ಹಾಗೂ ಬಿಟಿಎಂ ಲೇಔಟ್ ಪೋಸ್ಟ್ ಮ್ಯಾನ್ ದಿನೇಶ್ ಬಂಧಿತರು. ಕಳೆದ ತಿಂಗಳು ರೆಸಿಡೆನ್ಸಿ ರಸ್ತೆ ಟೈಮ್ಸ್ ಬಾರ್‍ನಲ್ಲಿ ನಡೆದ ಶೂಟೌಟ್ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಶೂಟೌಟ್ ಆರೋಪಿ ಅನ್ವರ್ ಹಸನ್‍ನಿಂದ ಸಂಗ್ರಹಿಸಿದ ಮಾಹಿತಿ ಆಧಾರಿಸಿ ಈ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ಅನ್ವರ್ ಹಸನ್ ವಿರುದ್ಧ ಮಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ವಿದೇಶಕ್ಕೆ ತೆರಳಲು ಆತನಿಗೆ ಪಾಸ್‍ಫೋರ್ಟ್ ಪಡೆದುಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ, ಆರೋಪಿ ಬೆಂಗಳೂರಿನ ಮೈಕೋ ಬಡಾವಣೆ ವಿಳಾಸದ ಹೆಸರಿನಲ್ಲಿ ಪಾಸ್‍ಫೋರ್ಟ್ ಪಡೆದುಕೊಂಡಿದ್ದ.

ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕ್ರಿಮಿನಲ್ ಆರೋಪಿ ಅನ್ವರ್ ಹಸನ್‍ಗೆ ಪಾಸ್‍ಫೋರ್ಟ್‍ಗೆ ಸಿಕ್ಕ ಬಗ್ಗೆ ಅನುಮಾನ ಕಾಡಿತ್ತು. ವಿಚಾರಣೆ ನಡೆಸಿದಾಗ ಅನ್ವರ್ ನಕಲಿ ದಾಖಲೆ ನೀಡಿ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪಾಸ್ ಫೋರ್ಟ್ ಪಡೆದಿದ್ದ ಎಂಬುದು ಗೊತ್ತಾಗಿತ್ತು.

ಈ ಹಿನ್ನೆಲೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿಗೆ ಸಹಕರಿಸಿದ ಆರೋಪದಲ್ಲಿ ಇತ್ತೀಚೆಗೆ ಬೆಂಗಳೂರು ಒನ್‍ನ ಇಬ್ಬರು ಉದ್ಯೋಗಿಗಳು ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಸುಳ್ಳು ವಿಳಾಸ ದಾಖಲೆ ನೀಡಿದರೆ ಪಾಸ್‍ಫೋರ್ಟ್ ಅರ್ಜಿದಾರರಿಗೆ ತಲುಪುವುದಿಲ್ಲ. ಹೀಗಾಗಿ, ಇದರಲ್ಲಿ ಪೊಲೀಸರ ಕೈವಾಡ ಇರುವ ಶಂಕೆ ಇತ್ತು.

ಈ ಬಗ್ಗೆ ಪರಿಶೀಲಿಸಿದಾಗ ಮೈಕೋ ಲೇಔಟ್ ಠಾಣೆಯಲ್ಲಿ ಪಾಸ್‍ಫೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆ ಯಲ್ಲಪ್ಪನ ಕೈವಾಡ ಇರುವುದು ಗೊತ್ತಾಗಿದೆ. ಪಾಸ್‍ಫೋರ್ಟ್‍ಗೆ ಅರ್ಜಿ ಸಲ್ಲಿಸಿದವರು ನೀಡಿರುವ ವಿಳಾಸದ ಬಗ್ಗೆ ಪರಿಶೀಲನೆ ನಡೆಸಬೇಕಿರುವುದು ಪೊಲೀಸರ ಕರ್ತವ್ಯ. ಆದರೆ, ಅರ್ಜಿ ಸಲ್ಲಿಸಿದವರು ನೀಡಿದ ವಿಳಾಸದಲ್ಲಿ ಇಲ್ಲದೇ ಇದ್ದರೂ ಅವರು ವಿಳಾಸದಲ್ಲಿ ಇದ್ದಾರೆ ಎಂದು ಪಾಸ್ ಫೋರ್ಟ್ ಇಲಾಖೆಗೆ ಯಲ್ಲಪ್ಪ ಸುಳ್ಳು ಮಾಹಿತಿ ನೀಡಿದ್ದರು.

ಈ ಮೂಲಕ ಅನ್ವರ್ ಹಸನ್ ಪಾಸ್ ಫೋರ್ಟ್ ಪಡೆಯಲು ಯಲ್ಲಪ್ಪ ನೆರವಾಗಿದ್ದರು. ಯಲ್ಲಪ್ಪ ಇದುವರೆಗೂ ಸುಮಾರು 25 ಪಾಸ್ ಫೋರ್ಟ್ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪರಾಧಿಗಳ ಕೈಗೆ ಪಾಸ್ ಫೋರ್ಟ್: ಅರ್ಜಿ ಸಲ್ಲಿಸಿದವರ ವಿಳಾಸಕ್ಕೆ ಪಾಸ್‍ಫೋರ್ಟ್ ತಲುಪಬೇಕು. ಒಂದು ವೇಳೆ ವಿಳಾಸದಲ್ಲಿ ಸಂಬಂಧಪಟ್ಟ ವ್ಯಕ್ತಿ ಇಲ್ಲದಿದ್ದರೆ ಅದು ಪೊಸ್ಟ್ ಆಫೀಸ್‍ಗೆ ಮರಳುತ್ತದೆ.

ಆದರೆ, ಮೈಕೋ ಲೇಔಟ್ ಫೋಸ್ಟ್ ಆಫೀಸಿನ ಪೋಸ್ಟ್ ಮ್ಯಾನ್ದಿನೇಶ್, ವಿಳಾಸದಲ್ಲಿ ಸಂಬಂಧಪಟ್ಟವರೂ ಇಲ್ಲದಿದ್ದರೂ ಅದನ್ನು ತಲುಪಿಸು ತ್ತಿದ್ದರು. ಏಕೆಂದರೆ, ಪಾಸ್‍ಫೋರ್ಟ್ ಪಡೆಯುವವರು ಹಾಗೂ ಪೋಸ್ಟ್ ಮ್ಯಾನ್ ನಡುವೆ ಮೊದಲಿನಿಂದಲೇ ಸಂಪರ್ಕ ಇರುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com