ಬೌದ್ಧರಿಗೆ ದೇವರಿಲ್ಲವಂತೆ..!

ಧಾರ್ಮಿಕತೆ ಕುರಿತಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಹಿತಿ ಕೆಎಸ್ ಭಗವಾನ್ ಅವರ ಹೇಳಿಕೆಗಳ ಸರಣಿ ಸೋಮವಾರವೂ ಮುಂದುವರೆದಿದ್ದು. ಈ ಬಾರಿ ಬೌದ್ಧ ಧರ್ಮದತ್ತ ಭಗವಾನ್ ತಮ್ಮ ಚಿತ್ತ ಹರಿಸಿದ್ದಾರೆ...
ಸಾಹಿತಿ ಕೆಎಸ್ ಭಗವಾನ್ (ಸಂಗ್ರಹ ಚಿತ್ರ)
ಸಾಹಿತಿ ಕೆಎಸ್ ಭಗವಾನ್ (ಸಂಗ್ರಹ ಚಿತ್ರ)

ಬೆಂಗಳೂರು: ಧಾರ್ಮಿಕತೆ ಕುರಿತಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಹಿತಿ ಕೆಎಸ್ ಭಗವಾನ್ ಅವರ ಹೇಳಿಕೆಗಳ ಸರಣಿ ಸೋಮವಾರವೂ  ಮುಂದುವರೆದಿದ್ದು. ಈ ಬಾರಿ ಬೌದ್ಧ ಧರ್ಮದತ್ತ ಭಗವಾನ್ ತಮ್ಮ ಚಿತ್ತ ಹರಿಸಿದ್ದಾರೆ.

ಹೋರಾಟಗಾರ ಭಗತ್‌ಸಿಂಗ್‌ ಜನ್ಮದಿನದ ಅಂಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ “ಭಗತ್‌‌ಸಿಂಗ್ ಕನಸಿನ ಭಾರತ” ವಿಚಾರಸಂಕೀರ್ಣ  ಉದ್ಘಾಟಿಸಿ ಮಾತನಾಡಿದ ಭಗವಾನ್, ಬೌದ್ಧ ಧರ್ಮದಲ್ಲಿ ದೇವರೇ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. "ಎಲ್ಲ ಧರ್ಮದಲ್ಲಿ ದೇವರಿದ್ದಾನೆ. ಆದರೆ ಬೌದ್ಧ ಧರ್ಮದಲ್ಲಿ ದೇವರಿಲ್ಲ.  ದೇವರನ್ನು ಒಪ್ಪಿಕೊಂಡ ಕೂಡಲೇ ಪೂಜಾರಿ ವ್ಯವಸ್ಥೆ ಬರುತ್ತದೆ. ಅದು ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಸಲು ಮುಂದಾಗುತ್ತದೆ. ಹೀಗಾಗಿ ಬುದ್ಧನನ್ನು ನಿರೀಶ್ವರವಾದಿ ಎಂದು  ಹೇಳುತ್ತಾರೆ ಎಂದು ಭಗವಾನ್ ಹೇಳಿದ್ದಾರೆ.

ಇನ್ನು ಬುದ್ಧನ ವಿಚಾರಧಾರೆಗಳನ್ನು ಕ್ರೈಸ್ಥ ಧರ್ಮಕ್ಕೆ ಹೋಲಿಸಿದ ಭಗವಾನ್ "ಬುದ್ಧನ ವಿಚಾರಗಳನ್ನು ಕ್ರೈಸ್ತಧರ್ಮದ ಏಸು ಕೂಡ ಹೇಳೋದಿಲ್ಲ" ಎಂದು ಹೇಳಿದ್ದಾರೆ. "ಬುದ್ಧನ ನಂತರ  ಅತ್ಯದ್ಭುತ ಕ್ರಾಂತಿ ನಡೆದಿದ್ದು, 12ನೇ ಶತಮಾನದ ಬಸವಣ್ಣನ ಕಾಲದಲ್ಲಿ. ಆಗ ಜಾತಿ ವ್ಯವಸ್ಥೆ ವಿರುದ್ಧ ತೀವ್ರ ಹೋರಾಟ ನಡೆಯಿತು. ಬಿಜ್ಜಳನ ಕಾಲದಲ್ಲಿ ಬಸವಣ್ಣನವರು ಬ್ರಾಹ್ಮಣ  ಸಮುದಾಯದ ಯುವತಿಯನ್ನು ದಲಿತನಿಗೆ ಕೊಟ್ಟು ಮದುವೆ ಮಾಡಿದ ನಂತರ ಎಲ್ಲ ವಚನಕಾರರ ಮೇಲೆ ಹಲ್ಲೆ ನಡೆಸಿ ಕೊಚ್ಚಿ ಹಾಕಲಾಯಿತು ಎಂದು ಅವರು ತಮ್ಮ ವಾದ  ಮಂಡಿಸಿದರು.

ಇದೇ ವೇಳೆ ದೇವರ ಹುಟ್ಟಿನ ಬಗ್ಗೆ ಮಾತನಾಡಿದ ಭಗವಾನ್, "ದೇವರು ಹುಟ್ಟಿದ್ದು ಭಯದಿಂದ. ಭಯವೇ ಧರ್ಮದ ಮೂಲವಯ್ಯ. ಹುಟ್ಟಿದ ಮೇಲೆ ಸಾವು ನಿಶ್ಚಿತ. ಭಯವನ್ನು ಬಿಟ್ಟು  ಎಲ್ಲರೂ ಬದುಕುವಂತಾಗಬೇಕು ಎಂದು ಹೇಳಿದರು.

ಭಗತ್ ಸಿಂಗ್ ಬದುಕಿದ್ದರೆ ಭರತಖಂಡದ ನೇತೃತ್ವ

ಇದೇ ವೇಳೆ ದೇಶಭಕ್ತ ಭಗತ್‌ಸಿಂಗ್ ಕುರಿತು ಮಾತನಾಡಿದ ಭಗವಾನ್, "ಭಗತ್‌ಸಿಂಗ್ ಅಪ್ರತಿಮ ದೇಶಭಕ್ತ, ಪ್ರಾಣಕ್ಕೆ ಎಂದೂ ಅಂಜಿದವನಲ್ಲ. ಭಗತ್ ಸಿಂಗ್ ಬದುಕಿದ್ದು ಕೇವಲ 23  ವರ್ಷ. ಆ ಅವಧಿಯಲ್ಲಿ ಆತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ. ಭಗತ್ ಸಿಂಗ್ ಮಹಾತ್ಮಾ ಗಾಂಧಿಯಷ್ಟೇ ಪ್ರಸಿದ್ಧರಾಗಿದ್ದರು. ಅವರು ಬದುಕಿದ್ದರೆ ಇಡೀ ಭರತಖಂಡದ ನೇತೃತ್ವ ಭಗತ್  ಕೈಯಲ್ಲಿರುತ್ತಿತ್ತು. ಆಗ ಇಡೀ ದೇಶದ ಸ್ವರೂಪವೇ ಬದಲಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com