ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಳ್ಳರಿಗೆ ದಕ್ಕಲಿಲ್ಲ ಕದ್ದ ಐಷಾರಾಮಿ ಕಾರು

ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರನ್ನು ಕಳ್ಳರು ಕದ್ದು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿರುವ ಘಟನೆ...
Published on

ಬೆಂಗಳೂರು: ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರನ್ನು ಕಳ್ಳರು ಕದ್ದು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿರುವ ಘಟನೆ ಯಶವಂತಪುರ ಮೇಲ್ಸೆತುವೆಯಲ್ಲಿ ನಡೆದಿದೆ. ಶಿವಾಜಿನಗರ ಸೆಂಟ್ ಮಾರ್ಕ್ಸ್ ರಸ್ತೆ ನಿವಾಸಿ ರಾಜ್ ಪಾಟೇಲ್ ಎಂಬುವರಿಗೆ ಸೇರಿದ ಹುಂಡೈ ಕ್ರೇಟಾ ಕಾರು ಕಳವಾಗಿ ಬಳಿಕ ಅಪಘಾತಕ್ಕೀಡಾಗಿದೆ.

ಸೆ.25ರಂದು ರಾತ್ರಿ ರಾಜ್ ಪಾಟೇಲ್ ಅವರು ತಮ್ಮ ಮನೆಯ ಮುಂದೆ ಕಾರನ್ನು ಪಾರ್ಕಿಂಗ್ ಮಾಡಿದ್ದರು ಆದರೆ, ಬೆಳಗ್ಗೆ ನೋಡಿದಾಗ ಕಾರು
ಇರಲಿಲ್ಲ. ಕೆಲವೇ ಹೊತ್ತಿನಲ್ಲಿ ಮಾಲೀಕರಿಗೆ ನಿಮ್ಮ ಕಾರು ಅಪಘಾತವಾಗಿದೆ ಎಂಬ ಆಘಾತಕಾರಿ ವಿಷಯವನ್ನು ಯಶವಂತಪುರ ಸಂಚಾರ ಪೊಲೀಸರು ತಿಳಿಸಿದ್ದರು. ಅಸಲಿಗೆ ವಿಶೇಷ ಭದ್ರತಾ ಸೌಲಭ್ಯ ಅಳವಡಿಸಿರುವ ಈ ಕಾರನ್ನು ಸಾಮಾನ್ಯ ಕೀಗಳನ್ನು ಬಳಸಿ ಬಾಗಿಲು ತೆಗೆಯಲಾಗದು. ಬಾಗಿಲು ತೆಗೆಯಲು ಮಾತ್ರ ರಿಮೋಟ್ ಇದ್ದು  ಎಂಜಿನ್ ಸ್ಟಾರ್ಟ್ ಮಾಡಲು ಕೋಡ್ ವ್ಯವಸ್ಥೆ ಇದೆ. ಹೀಗಾಗಿ, ಕಾರಿನ ಬಗ್ಗೆ ತಿಳಿದುಕೊಂಡವರೇ ಅದನ್ನು ಕದ್ದಿರಬಹುದು. ಹೀಗಾಗಿ, ಕುಟುಂಬದ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳೇ ಕಳ್ಳತನ ಮಾಡಿರಬಹುದು ಎಂದು ಶಿವಾಜಿ ನಗರ ಪೊಲೀಸರು ಶಂಕಿಸಿದ್ದಾರೆ. ಮಾಲೀಕರಾದ  ಪಟೇಲ್ ಅವರು ತಮ್ಮ ಕಾರು ಕಳವು ಆಗಿದೆ ಎಂದು ಠಾಣೆಗೆ ಹೋಗುವ ಮೊದಲೇ ಯಶವಂತಪುರ  ಸಂಚಾರ ಪೊಲೀಸರು ಅಪಘಾತ ಸ್ಥಳ ಪರಿಶೀಲಿಸುತ್ತಿದ್ದರು.ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಪ್ರಮಾಣದಲ್ಲಿ ಜಖಂಗೊಂಡಿದೆ. ಕಾರಿನ ಏರ್‍ಬ್ಯಾಗ್ ಕೂಡಾ ತೆರೆದುಕೊಂಡಿದೆ. ಹೀಗಾಗಿ, ಕಾರು ಚಲಾಯಿಸುತ್ತಿದ್ದವರು ಹಾಗೂ ಒಳಗಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ದ್ದಿರಬಹುದು. ಹೀಗಾಗಿಯೇ, ಕಳ್ಳರು ಕಾರನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com