

ಬೆಂಗಳೂರು: ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದ ಅರಮನೆ ಮೈದಾನದಲ್ಲಿ ಯಾವುದೇ ಅನುಮತಿ ಇಲ್ಲದೆ, ಹಾರಾಡುತ್ತಿದ್ಡ ಡ್ರೋಣ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳ್ಳಂಬೆಳಗ್ಗೆ ಅರಮನೆ ಮೈದಾನದ ಆವರಣದಲ್ಲಿ ಡ್ರೋಣ್ ಹಾರಾಡುತ್ತಿದ್ದದ್ದು ಕಂಡುಬಂದರೂ ಪೊಲೀಸರು ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸದೆ ಡ್ರೋಣ್ ವೀಕ್ಷಣೆಯಲ್ಲಿ ತೊಡಗಿದ್ದರು.ಡ್ರೋಣ್ ಹಾರಾಟ ಡಿಸಿಪಿ ಸಂದೀಪ್ ಪಾಟೀಲ್ ಗಮನಕ್ಕೆ ಬರುತ್ತಿದ್ದಂತೆ, ದ್ರೋಣ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು.
ಡ್ರೋಣ್ ಹಾರಿಸಿದ್ದು ಯಾರು ಎಂದು ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಯಾರೂ ಕೂಡ ಪೊಲೀಸರಿಂದ ಅನುಮಪತಿ ಪಡೆಯದ ಕಾರಣ ಡ್ರೋಣ್ ಹಾರಾಟ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.