ನೈಜಿರಿಯಾ ಪ್ರಜೆಯ ಹೊಟ್ಟೆಯಲ್ಲಿದ್ದ 1 ಕೆಜಿ ಕೊಕೇನ್ ವಶ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಮಂಗಳವಾರ ಭಾರಿ ಕಾರ್ಯಾಚರಣೆಯನ್ನು ನಡೆಸಿದ್ದು, ತನ್ನ ದೇಹದಲ್ಲಿ ಸುಮಾರು 5ಕೋಟಿ ಬೆಲೆ ಬಾಳುವ 1 ಕೆಜಿ ತೂಕ..
ಕೊಕೇನ್ ಕಳ್ಳಸಾಗಣೆ (ಸಂಗ್ರಹ ಚಿತ್ರ)
ಕೊಕೇನ್ ಕಳ್ಳಸಾಗಣೆ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಮಂಗಳವಾರ ಭಾರಿ ಕಾರ್ಯಾಚರಣೆಯನ್ನು ನಡೆಸಿದ್ದು, ತನ್ನ ದೇಹದಲ್ಲಿ ಸುಮಾರು 5ಕೋಟಿ ಬೆಲೆ ಬಾಳುವ  1 ಕೆಜಿ ತೂಕದ ಕೊಕೇನ್ ಕಳ್ಳ ಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಸ್ಮಗ್ಲರ್ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 70 ಕಾಂಡೋಮ್ ಗಳಲ್ಲಿ ಹುದುಗಿಸಿಟ್ಟಿದ್ದ 1 ಕೆಜಿಯಷ್ಟು ಕೊಕೇನ್ ಅನ್ನು ನುರಿತ ವೈದ್ಯರು ಮಲ ವಿಸರ್ಜನೆ ಮಾಡಿಸುವ ಮೂಲಕ ಹೊರತೆಗೆದಿದ್ದಾರೆ. ಮೂಲಗಳ ಪ್ರಕಾರ ಈ ಕೊಕೇನ್  ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 5 ಕೋಟಿಗೂ ಅಧಿಕ ಎಂದು ತಿಳಿದುಬಂದಿದೆ. ಪ್ರಸ್ತುತ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ವಶಕ್ಕೆ ಪಡೆದಿರುವ  ಮಾದಕ ದ್ರವ್ಯ ನಿಯ೦ತ್ರಣ ದಳದ ಬೆ೦ಗಳೂರುವಲಯ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತನನ್ನು 28 ವರ್ಷದ ಇರಾನೋ ಇಮಾನ್ಯುಯಲ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸ್ ಮೂಲಗಳ  ಪ್ರಕಾರ ಇಮಾನ್ಯುಯಲ್ ಕೊಕೇನ್ ಅನ್ನು ಬೆಂಗಳೂರಿದೆ ಸಾಗಿಸುತ್ತಿರುವ ಮಾಹಿತಿ ತಿಳಿದ ಮಾದಕ ದ್ರವ್ಯ ನಿಯಂತ್ರಣ ದಳದ ಮುಂಬೈವಲಯದ ಅಧಿಕಾರಿಗಳು ಕೂಡಲೇ ಬೆಂಗಳೂರು ಶಾಖೆಗೆ  ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ನಿಲ್ದಾಣದಲ್ಲಿಯೇ ಸೋಮವಾರ ಬೆಳಗ್ಗೆ 7.30ಕ್ಕೆ ಅಬುದಾಬಿಯಿ೦ದ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ೦ದ  ಇಮಾನ್ಯುಯಲ್ ನನ್ನು ಬಂಧಿಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಬೆ೦ಗಳೂರುವಲಯ ನಾಕೋ೯ಟಿಕ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊ೦ಡಿದ್ದು, ಆರೋಪಿಗೆ ಮಲ ವಿಸಜ೯ನೆ ಮಾಡಿಸಿ ಹೊಟ್ಟೆಯಲ್ಲಿದ್ದ ಕೊಕೇನ್ ಪ್ಯಾಕೆಟ್‍ಗಳನ್ನು ಹೊರ  ತೆಗೆಯಲಾಯಿತು. ಆರೋಪಿಯ ಆರೋಗ್ಯದ ಬಗ್ಗೆ ಮ೦ಗಳವಾರ ಮಧ್ಯಾಹ್ನದ ವರೆಗೂ ನಿಗಾವಹಿಸಲಾಗಿತ್ತು. ಯಾವುದೇ ವ್ಯತ್ಯಾಸ ಕ೦ಡು ಬರಲಿಲ್ಲ. ಹೀಗಾಗಿ ಜನರಲ್ ವಾಡ್‍೯ಗೆ ಮಾಡಲಾಗಿದೆ  ಎ೦ದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com