ಪ್ರತಿ ಫ್ಲ್ಯಾಟ್ ಗೆ ಒಂದು ನಾಯಿ, ಮನೆಗೆ ಮೂರು ನಾಯಿ!

ಇನ್ನು ಮುಂದೆ ನಾಯಿ ಸಾಕಲೂ ಬೆಂಗಳೂರು ನಗರದ ನಾಗರಿಕರು ಲೈಸೆನ್ಸ್ ಮಾಡಿಸಬೇಕು. ನಗರದಲ್ಲಿ ಮಿತಿಮೀರಿ ಬೆಳೆಯುತ್ತಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಮುಂದೆ ನಾಯಿ ಸಾಕಲೂ ಬೆಂಗಳೂರು ನಗರದ ನಾಗರಿಕರಿಗೆ ಲೈಸೆನ್ಸ್ ಬೇಕು. ನಗರದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಶ್ವಾನಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಬಿಬಿಎಂಪಿ ಈ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ.
ಫ್ಲ್ಯಾಟ್ ಗಳಲ್ಲಿ ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ. ಪ್ರತ್ಯೇಕ ಮನೆಗಳಲ್ಲಾದರೆ ಮೂರು ನಾಯಿಗಳನ್ನು ಸಾಕಬಹುದು.

ಈ ಸಂಬಂಧ ಕರಡು ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಕಳುಹಿಸಿದೆ. ಇದಕ್ಕೆ ಸಾಕು ಶ್ವಾನಗಳ ಪರವಾನಗಿ ತಿದ್ದುಪಡಿ ಕಾನೂನು ಎಂದು ಹೆಸರಿಡಲಾಗಿದೆ. ಕರಡು ಅಧಿಸೂಚನೆಯಲ್ಲಿ ಸೆಕ್ಷನ್ 1.2ರಲ್ಲಿ ಈ ಕುರಿತ ವಿವರ ಹೀಗಿದೆ. '' ಫ್ಲ್ಯಾಟ್ ಗಳಲ್ಲಿ ಉತ್ತಮ ತಳಿಯ ಒಂದು ನಾಯಿ ಸಾಕಬಹುದು. ಮನೆಗಳಲ್ಲಿ ಮೂರು ನಾಯಿಗಳನ್ನು ಸಾಕಬಹುದು.

ಆರು ವರ್ಷಗಳ ಹಿಂದೆಯೇ ಈ ಪ್ರಸ್ತಾವನೆಯನ್ನು ರೂಪಿಸಲಾಗಿತ್ತು. ಅದು ಈಗ ಜಾರಿಗೆ ಬರುವ ಲಕ್ಷಣ ಕಾಣುತ್ತಿದೆ. ನಾಯಿ ಸಾಕುವವರು ಬಿಬಿಎಂಪಿ ಪಶುವೈದ್ಯರಿಗೆ 250 ರೂಪಾಯಿ ಶುಲ್ಕ ಕಟ್ಟಿ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿಯನ್ನು ಪ್ರತಿವರ್ಷ ನವೀಕರಿಸಬೇಕು. ಅಲ್ಲದೆ ನಾಯಿಗಳನ್ನು ವೀಕ್ಷಿಸಲು ಬಂದರೆ ಬಿಬಿಎಂಪಿ ಅಥವಾ ಸರ್ಕಾರಿ ಪಶುವೈದ್ಯಾಧಿಕಾರಿಗೆ ಅವಕಾಶ ಕಲ್ಪಿಸಬೇಕು ಎಂದು ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷ ನಾಯಿಗಳಿವೆ. ಪಾಲಿಕೆಯ ಉದ್ದೇಶಿತ ಕಾನೂನು ಸಾಕು ನಾಯಿ ಮಾಲೀಕರಲ್ಲಿ ಅಸಮಾಧಾನ ತಂದಿದೆ. ಆದರೆ ಹೊಸ ಕಾನೂನಿನಿಂದ ಫ್ಲ್ಯಾಟ್ ಗಳಲ್ಲಿ ನಾಯಿ ಸಾಕಿಕೊಳ್ಳಲು ಅವಕಾಶ ಕಲ್ಪಿಸುವುದ ಹಾಗೂ ಮಾರಾಟ ಉದ್ದೇಶದಿಂದ ಭಾರೀ ಪ್ರಮಾಣದಲ್ಲಿ ನಾಯಿ ಮರಿ ಬ್ರೀಡಿಂಗ್ ಮಾಡುವುದನ್ನು ತಪ್ಪಿಸಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಸಮಜಾಯಿಷಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com