
ಬೆಂಗಳೂರು: ನಕಲಿ ವೀಸಾ ಮತ್ತು ದಾಖಲೆಗಳನ್ನು ಹೊಂದಿದ್ದ 9 ಮಂದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ 9 ಮಂದಿಯನ್ನು ಉದ್ಯೋಗ ಅರಸಿ ಬಹರೇನ್‌ಗೆ ಹೊರಟಿದ್ದವರ ಪಾಸ್ ಪೋರ್ಟ್ ನಿಲ್ದಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದ್ದು ಈ ವೇಳೆ ಎಲ್ಲರ ವೀಸಾ ಮತ್ತು ಇತರ ದಾಖಲೆಗಳು ನಕಲಿ ಎಂಬುದು ತಿಳಿದಿದ್ದು ಅವರನ್ನು ಬಂಧಿಸಲಾಗಿದೆ.
ಬಂಧಿತರು ಇಷಾಕ್ ಮೊಹಮ್ಮದ್ ಆಶಿಕ್ (21), ಸಾಧಿಕ್ ಪಾಷಾ (25), ಎಜಾಜ್ ದಸ್ತಗೀರ್ (24), ಇರ್ಫಾನ್ (24) ಮೊಹಮದ್ ಶೋಯಬ್ (22), ಸಲೀಂ ಪಾಷಾ (21), ಇಷಾಬುದ್ದೀನ್ (38), ಸನಾವುಲ್ಲ (22) ಹಾಗೂ ಅಜಂನನ್ನು (28) ಎಂದು ತಿಳಿದುಬಂದಿದೆ.
ಅನುಮಾನಗೊಂಡ ಸಿಬ್ಬಂದಿ ಕೂಡಲೇ ಠಾಣೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ತೆರಳಿ ಎಲ್ಲರನ್ನು ಬಂಧಿಸಲಾಯಿತು. ಪಿಯುಸಿ ಮತ್ತು ಡಿಪ್ಲೊಮಾ ಮುಗಿಸಿರುವ ಇವರಿಗೆ, ಭದ್ರಾವತಿಯ ಟ್ರಾವೆಲ್ ಏಜೆಂಟ್ ಬಷೀರ್ ಎಂಬಾತ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ಅದಕ್ಕಾಗಿ ಎಲ್ಲರಿಂದ ತಲಾ ರು. 1.2 ಲಕ್ಷ ಪಡೆದು, ನಕಲಿ ವೀಸಾ, ದಾಖಲೆಗಳನ್ನು ಸೃಷ್ಟಿಸಿದ್ದ.
Advertisement