ಸ್ವಚ್ಛತೆಗೆ ಪೌರ ಕಾರ್ಮಿಕರೇ ರಾಯಭಾರಿಗಳು

ನಗರದ ಸ್ವಚ್ಛತೆಗೆ ಪೌರಕಾರ್ಮಿಕರೇ ರಾಯಭಾರಿಗಳು. ನಗರವನ್ನು ಸ್ವಚ್ಛ ಗೊಳಿಸುವ ನೀವೇ ವೈದ್ಯರಿದ್ದಂತೆ, ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಪ್ರತಿ ವಾರ್ಡ್‍ನಲ್ಲೂ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸುತ್ತೇವೆ ಎಂದು ಮೇಯರ್ ತಿಳಿಸಿದರು...
ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ (ಸಂಗ್ರಹ ಚಿತ್ರ)
ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಗರದ ಸ್ವಚ್ಛತೆಗೆ ಪೌರಕಾರ್ಮಿಕರೇ ರಾಯಭಾರಿಗಳು. ನಗರವನ್ನು ಸ್ವಚ್ಛ ಗೊಳಿಸುವ ನೀವೇ ವೈದ್ಯರಿದ್ದಂತೆ, ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಪ್ರತಿ ವಾರ್ಡ್‍ನಲ್ಲೂ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸುತ್ತೇವೆ ಎಂದು ಮೇಯರ್ ತಿಳಿಸಿದರು.

ಬಿಬಿಎಂಪಿ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸವರ್ಷ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೊಸವರ್ಷ ವನ್ನು ಕಸಮುಕ್ತ ನಗರವನ್ನಾಗಿಸಲು ನಾವು ನಿಮ್ಮೊಂದಿಗಿದ್ದೇವೆ. ಬೆಂಗಳೂರಿನಲ್ಲಿ ಇಂದು ಕಸ ವಿಲೇವಾರಿ ಸವಾಲಿನ ಸಂಗತಿಯಾಗಿದೆ. ಸ್ವಚ್ಛ ಹಾಗೂ ಆರೋಗ್ಯಪೂರ್ಣ ಬೆಂಗಳೂರು ನಿರ್ಮಾಣಕ್ಕೆ ಪ್ರತಿಯೊಬ್ಬರ
ಸಹಕಾ ರವೂ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕಿದೆ. ದಿನ ನಿತ್ಯ ನಗರದ ಸ್ವಚ್ಛತೆಯಲ್ಲಿ ತೊಡಗುವ ಪೌರಕಾರ್ಮಿಕರ ಸೇವೆ ಶ್ಲಾಘನೀಯವಾದುದು ಎಂದರು.

ಆಡಳಿತ ಪಕ್ಷದ ನಾಯಕ ಸತ್ಯ ನಾರಾಯಣ ಮಾತನಾಡಿ, ಕೆಲ ಸಂಘ ಸಂಸ್ಥೆಗಳು, ವ್ಯಕ್ತಿಗಳು ಕಸ ವಿಂಗಡಣೆ ಮಾಡದೆ, ನಿಮ್ಮ ಮೇಲೆ ದೌರ್ಜನ್ಯ ನಡೆಸಿರುವುದು ಗಮನಕ್ಕೆ
ಬಂದಿದೆ. ಇದರ ಬಗ್ಗೆ ನಿಗಾ ವಹಿಸದೆ ಸ್ವಚ್ಛತೆಗೆ ಗಮನ ಕೊಡಿ. ನಗರದಲ್ಲಿ ಕಸ ತೊಲಗಿಸಿ ಎಂಬ ಆಂದೋಲನ ನಡೆದಿದೆ. ಇದರಿಂದ ನಗರ ಶುಚಿತ್ವವಾಗಲಿದೆ ಎಂಬ ಆಶಯ
ಎಲ್ಲರದ್ದಾಗಿದೆ. ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಕಾನ್ವೆಂಟ್‍ನಂತಹ ಶಾಲೆಗಳಿಗೆ ಸೇರಿಸಬೇಕು ಎಂಬ ಬಯಕೆ ಸಹಜ. ಅಂತಹ ವೇಳೆ ನಾವು ನಿಮಗೆ ಸಹಕಾರ ನೀಡುತ್ತೇವೆ
ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಪೌರ ಕಾರ್ಮಿಕರಿಗೆ ಗುಲಾಬಿ ಹೂ ನೀಡಿ ವರ್ಷಾಚರಣೆ ಮಾಡುತ್ತಿರುವುದು ದೇಶದ¯್ಲÉೀ ಮೊದಲನೆಯದು ಎಂದರು. ಪ್ರತಿ ವಾರ್ಡ್ ನಲ್ಲೂ ಆರೋಗ್ಯ ಶಿಬಿರಗಳನ್ನು ನಡೆಸಬೇಕು ಎಂದು ಮೇಯರ್‍ಗೆ ಸಲಹೆ ನೀಡಿದರು. ನಗರವನ್ನು ಸ್ವಚ್ಛಗೊಳಿಸಲು ನಾವು ಸಿದಟಛಿರಿದ್ದೇವೆ ಎನ್ನುವ ಮೂಲಕ ಪೌರ ಕಾರ್ಮಿಕರು ಸ್ವಚ್ಛತೆ ಬಗ್ಗೆ ಹೊಸ ಭರವಸೆ ಮೂಡಿಸಿದರು.

2016ನೇ ವರ್ಷವನ್ನು ಕಸಮುಕ್ತ ನಗರವನ್ನಾಗಿಸಲು ಶ್ರಮಿಸೋಣ ಎನ್ನುವ ಮೂಲಕ ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ ಗುಲಾಬಿ ಹೂ
ನೀಡಿ ಹೊಸವರ್ಷವನ್ನು ಬರಮಾಡಿಕೊಂಡಿದೆ. ನಗರದ ಸ್ವಾತಂತ್ರ ್ಯ ಉದ್ಯಾನದಲ್ಲಿ ನಡೆದ ಶಿಷ್ಟ, ನೂತನ ಸಮಾರಂಭದಲ್ಲಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ, ಉಪ
ಮೇಯರ್ ಹೇಮಲತಾ, ಆಡಳಿತ ಪಕ್ಷದ ನಾಯಕರಾದ ಆರ್.ಎಸ್. ಸತ್ಯನಾರಾಯಣ, ವಿರೋಧ ಪಕ್ಷದ ನಾಯಕರಾದ ಪದ್ಮನಾಭ ರೆಡ್ಡಿ, ಆಯುಕ್ತರಾದ ಕುಮಾರ್ ನಾಯಕ್
ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com