ರಾಜ್ಯದಲ್ಲಿ 145 ವಿಶಿಷ್ಟ ಶೈಕ್ಷಣಿಕ ಕ್ಯಾಂಪಸ್

ಕೃಷಿ, ವೈದ್ಯಕೀಯ, ಶಿಕ್ಷಣ ಸೌಲಭ್ಯಗಳನ್ನು ಒಳಗೊಂಡ 145 ವಿನೂತನ ಶೈಕ್ಷಣಿಕ ಕ್ಯಾಂಪಸ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಮಾಜಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆಂದು ರಾಜ್ಯಾದ್ಯಂತ ವಸತಿ ಶಾಲೆ ನಿರ್ಮಾಣ ಮಾಡುತ್ತಿದೆ...
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ

ಬೆಂಗಳೂರು: ಕೃಷಿ, ವೈದ್ಯಕೀಯ, ಶಿಕ್ಷಣ ಸೌಲಭ್ಯಗಳನ್ನು ಒಳಗೊಂಡ 145 ವಿನೂತನ ಶೈಕ್ಷಣಿಕ ಕ್ಯಾಂಪಸ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಮಾಜಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆಂದು ರಾಜ್ಯಾದ್ಯಂತ ವಸತಿ ಶಾಲೆ ನಿರ್ಮಾಣ ಮಾಡುತ್ತಿದೆ.

ಈ ಶೈಕ್ಷಣಿಕ ಕ್ಯಾಂಪಸ್‍ಗಳಲ್ಲಿ ವಸತಿ, ಹೈನುಗಾರಿಕೆ ಸೇರಿದಂತೆ ಇತರ ಚಟುವಟಿಕೆಗಳನ್ನೂ ಉತ್ತೇಜಿಸುವ ಯೋಜನೆ ರೂಪಿಸಲಾಗುತ್ತಿದೆ. ಇದು ದೇಶದಲ್ಲೇ ಪ್ರಥಮ ಪ್ರಯೋಗ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ವಸತಿ ಸೌಲಭ್ಯ, ಕೃಷಿ ಚಟುವಟಿಕೆ, ವೈದ್ಯಕೀಯ ಸೌಲಭ್ಯ ಹಾಗೂ ತಂತ್ರಜ್ಞಾನ ಅನುಕೂಲಗಳು ಒಂದೇ ತಾಣದಲ್ಲಿರುವಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಇದರಿಂದ ವಿವಿದೊದ್ಧೇಶ ಅನುಕೂಲವಿದೆ ಎಂದರು. ಒಂದು ಕ್ಯಾಂಪಸ್ ನಿರ್ಮಾಣಕ್ಕೆರು.15ಕೋಟಿ ವೆಚ್ಚವಾಗಲಿದ್ದು, ಅದರಂತೆ 145 ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಇವು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಒಂದು ಕ್ಯಾಂಪಸ್‍ಗೆ 10 ಎಕರೆ ಜಮೀನು ನೀಡುತ್ತಿದ್ದು, ಅದರಲ್ಲಿ 4 ಎಕರೆಯಲ್ಲಿ ವಸತಿ ಮತ್ತು ಶಿಕ್ಷಣ ಸಂಸ್ಥೆ ಇರುತ್ತದೆ.

ಇನ್ನುಳಿದ 6 ಎಕರೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಗ್ರಂಥಾಲಯ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬಹುದು. ಹಾಗೆಯೇ ಸುಮಾರು 1 ಎಕರೆ ಜಾಗದಲ್ಲಿ ಕೈ ತೋಟ ಮಾಡಬೇಕಿದ್ದು, ಅಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಕ್ಯಾಂಪಸ್‍ಗೆ ಅಗತ್ಯ ತರಕಾರಿ ಮತ್ತು ಇತರ ಸಣ್ಣ ಬೆಳೆಗಳನ್ನು ಬೆಳೆಯಬೇಕು. ಈ ಮೂಲಕ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬೇಕು ಎಂದು ಆಂಜನೇಯ ವಿವರಿಸಿದರು.

6ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಈ ವಸತಿ ಶಾಲೆಗಳಲ್ಲಿ ಇರುತ್ತಾರೆ. ಎಲ್ಲಾ ಶಾಲೆಗಳಿಗೂ ಸೇರಿ 1595 ಶಿಕ್ಷಕರು ಹಾಗೂ 2320 ಶಿಕ್ಷಕೇತರರನ್ನು ನೇಮಿಸಲಾಗುತ್ತದೆ. ಈ ಕ್ಯಾಂಪಸ್‍ಗಳನ್ನು ನಿರ್ಮಿಸಲು ಸದ್ಯ ಸರ್ಕಾರಿ ಜಾಗಗಳನ್ನು ಪಡೆಯಲಾಗುತ್ತಿದ್ದು, ಅಗತ್ಯಬಿದ್ದರೆ ಖಾಸಗಿ ಜಮೀನುಗಳನ್ನೂ ಖರೀದಿಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ರಾಜ್ಯದಲ್ಲಿ 200 ಮೆಟ್ರಿಕ್ ನಂತರದ ಹಾಸ್ಟೆಲ್‍ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿರು.300ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‍ನಲ್ಲಿ ಶೇ.75ರಷ್ಟು ಪರಿಶಿಷ್ಜಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ವಿರುತ್ತದೆ.

ಶೇ.25ರಷ್ಟು ಹಿಂದುಳಿದವರಿಗೆ ಪ್ರವೇಶ ನಿಗದಿ ಮಾಡಲಾಗುತ್ತದೆ. ಅದೇ ರೀತಿ ಮೆಟ್ರಿಕ್ ನಂತರದ ಬಾಲಕಿಯ ಶಾಲೆಯಲ್ಲಿ ಶೇ.75ರಷ್ಟು ಪ್ರವೇಶ ಹಿಂದುಳಿದ ವರ್ಗದವರಿಗೆ ಮೀಸಲಿರುತ್ತದೆ. ಉಳಿದ ಶೇ.25ರಷ್ಟು ಪರಿಶಿಷ್ಟಜಾತಿ, ವರ್ಗಕ್ಕೆ ಸಿಗುತ್ತದೆ ಎಂದು ಆಂಜನೇಯ ವಿವರಣೆ ನೀಡಿದರು. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಹಾಸ್ಟೆಲ್ ನಿರ್ಮಾಣ ಮತ್ತು ಸಿಬ್ಬಂದಿ ನೇಮಕಕ್ಕಾಗಿಯೇ ಸುಮಾರು ರು.2340ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com