ಕೆ.ಆರ್.ಮಾರುಕಟ್ಟೆಗೆ ಮೇಯರ್ ಭೇಟಿ, ತಪಾಸಣೆ

ಸಮಸ್ಯೆಗಳ ಆಗರವಾಗಿರುವ ಸಿಟಿ ಕೆ.ಆರ್.ಮಾರುಕಟ್ಟೆಗೆ ಮೇಯರ್ ಮಂಜುನಾಥ ರೆಡ್ಡಿ ಅವರು ಮಂಗಳವಾರ ಭೇಟಿ ನೀಡಿದ್ದು, ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ...
ಮೇಯರ್ ಮಂಜುನಾಥ ರೆಡ್ಡಿ (ಸಂಗ್ರಹ ಚಿತ್ರ)
ಮೇಯರ್ ಮಂಜುನಾಥ ರೆಡ್ಡಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಸಮಸ್ಯೆಗಳ ಆಗರವಾಗಿರುವ ಸಿಟಿ ಕೆ.ಆರ್.ಮಾರುಕಟ್ಟೆಗೆ ಮೇಯರ್ ಮಂಜುನಾಥ ರೆಡ್ಡಿ ಅವರು ಮಂಗಳವಾರ ಭೇಟಿ ನೀಡಿದ್ದು, ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದು ಬೆಳಿಗ್ಗೆ ಮಾರುಕಟ್ಟೆಗೆ ಆಗಮಿಸಿದ ಮೇಯರ್ ಮಂಜುನಾಥ ರೆಡ್ಡಿ ಅವರು, ಮಾರುಕಟ್ಟೆಯ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮೇಯರ್ ಜೊತೆ ಮಾತುಕತೆಗಿಳಿದ ಸ್ಥಳೀಯರು ಕಸದ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ರಸ್ತೆಗಳತ್ತ ಗಮನ ಹರಿಸಿದ ಮೇಯರ್ ರಸ್ತೆಗಳ ಬಳಿ ಬಿದ್ದಿರುವ ಮರಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ರಸ್ತೆಗಳಲ್ಲಿ ಮಾಡುವ ಮೂತ್ರ ವಿಸರ್ಜನೆ ತಡೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com