
ಬೆಂಗಳೂರು: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕರೆಯ ಮೇರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು, ಹಳೆ ತಲೆಮಾರಿನ ಖಾಸಗಿ ಬ್ಯಾಂಕುಗಳು ಮತ್ತು ದೇಶಿ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಭಾರತೀಯ ಸ್ಟೇಟ್ ಬ್ಯಾಂಕಿನವರ ದ್ವಿಪಕ್ಷೀಯ ಒಪ್ಪಂದಕ್ಕೆ ವಿರೋಧಿಸಿ ಜ.8ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಕುರಿತು ಮಾತನಾಡಿದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ಎನ್.ವೇಣು ಗೋಪಾಲ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಅಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಮತ್ತು ಬಿಕನೇರ್ ಮತ್ತು ಜಯಪುರಗಳಲ್ಲಿ ನೌಕರರ ಸೇವಾ ನಿಯಮಗಳನ್ನು ಏಕಪಕ್ಷೀಯವಾಗಿ ಬದಲಾಯಿಸಿ ಜಾರಿಗೊಳಿಸಲು ನಿರ್ಧರಿಸುತ್ತಿರುವ ಸ್ಟೇಟ್ ಬ್ಯಾಂಕ್ ನ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ 2015ರ ಮೇ ತಿಂಗಳಲ್ಲಿ ಭಾರತೀಯ ಬ್ಯಾಂಕುಗಳ ಸಂಘದ ವ್ಯವಸ್ಥಾಪಕ ಮಂಡಳಿ ಮತ್ತು ಅಖಿಲ ಭಾರತ ಬ್ಯಾಂಕುಗಳ ಸಂಘದ ಪ್ರತಿನಿಧಿಗಳು ಸಾಮಾನ್ಯ ಒಪ್ಪಂದವೊಂದಕ್ಕೆ ಸಹಿ ಮಾಡಿವೆ. ಈ ಒಪ್ಪಂದದಲ್ಲಿ ಬ್ಯಾಂಕ್ ಗಳಲ್ಲಿರುವ ನೌಕರರ ಹುದ್ದೆಗಳಿಗನುಸಾರವಾಗಿ ನಿಯಮಗಳು ಮತ್ತು ವೇತನ ನಿರ್ಧರಿಸಲಾಗಿದೆ. ಐದು ಸಹವರ್ತಿ ಬ್ಯಾಂಕುಗಳು ಈ ಒಪ್ಪಂದ ಒಪ್ಪಿಕೊಂಡು ಸಹಿ ಮಾಡಿರುವ ನೀತಿ ನಿಯಮಗಳು ಹಾಗೂ ವೇತನಗಳಿಗೆ ಬದಟಛಿವಾಗಿರುತ್ತವೆ ಎಂದರು.
ಆದರೆ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ಅದರ ನೌಕರರು ಸಂಘದ ಜತೆ ಆಂತರಿಕವಾಗಿ ಪೂರಕ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಖಂಡಿತವಾಗಿಯೂ ಇತರ ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ. ಆದರೆ ಭಾರತೀಯ ಸ್ಟೇಟ್ ಬ್ಯಾಂಕಿನ ಆಡಳಿತ ವರ್ಗದವರು ಅವರ ಪ್ರತ್ಯೇಕ ನೀತಿ ನಿಯಮ ವೇತನಗಳನ್ನು ಸಹವರ್ತಿ ಬ್ಯಾಂಕುಗಳಲ್ಲಿ ಏಕಪಕ್ಷೀಯವಾಗಿ ನಿರ್ಧರಿಸಿ ಜಾರಿಗೊಳಿಸುವ ಹುನ್ನಾರ ನಡೆಸುತ್ತಿz್ದÁರೆ ಎಂದ ಅವರು, ಮುಷ್ಕರದಿಂದ ಅಖಿಲ ಭಾರತ ಮಟ್ಟದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement