ರೈಲು ಹಳಿ ಬಳಿ ಯುವತಿ ಪತ್ತೆ, ಅತ್ಯಾಚಾರ ಶಂಕೆ

ಪುತ್ತೂರಿನ ಹಾರಾಡಿ ರೈಲ್ವೆ ಸೇತುವೆ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆದರೆ, ರೈಲಿನಲ್ಲಿ ಪೊಲೀಸರಿಂದ ತನ್ನ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಪುತ್ತೂರಿನ ಹಾರಾಡಿ ರೈಲ್ವೆ ಸೇತುವೆ ಬಳಿ ಗಾಯಗೊಂಡ ಸ್ಥಿತಿಯಲ್ಲಿ  ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆದರೆ, ರೈಲಿನಲ್ಲಿ ಪೊಲೀಸರಿಂದ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆಕೆ ಆರೋಪಿಸಿದ್ದು, ವಿಚಾರಣೆಗೆ ಪೊಲೀಸರು ಆಗಮಿಸುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ.

ಸದ್ಯ ಶೋಧ ಕಾರ್ಯ ನಡೆದಿದ್ದು ಯುವತಿ ಸಿಕ್ಕ ಬಳಿಕವಷ್ಟೇ ಸತ್ಯ ಹೊರಬರಬೇಕಿದೆ. ತಾನು ಹರಿಯಾಣದವಳೆಂದು ಯುವತಿ ಹೇಳಿಕೊಂಡಿದ್ದು, ``ತನಗೆ 18 ವರ್ಷವಾಗಿದ್ದು, ಹರಿಯಾಣದ ಸೋನೆಪಥ್ ಕಾಲಿಪುರದ ನಿವಾಸಿ ರಾಜೇಂದ್ರ ಎಂಬುವರ ಪುತ್ರಿ'' ಎಂದು ಹೇಳಿಕೊಂಡಿದ್ದಾಳೆ. ರೈಲು ಹಳಿ ಬಳಿ ಗಾಯಗೊಂಡ ಸ್ಥಿತಿಯಲ್ಲಿದ್ದ ಈಕೆ-ಯನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಆಕೆ ಚಿಕಿತ್ಸೆ ಪಡೆಯಲು ಸಹಕರಿಸದೇ ಇದ್ದುದರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಲು ನಿರಾಕರಿಸಿದ್ದು, ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲಿ ಮಾತನಾಡಿದ ಯುವತಿಯು, ``ನನ್ನನ್ನು ತಂದೆ, ತಾಯಿ ಪಯ್ಯನ್ನೂರಿನ ಆಶ್ರಮಕ್ಕೆ ಸೇರಿಸಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು ರೈಲಿನಲ್ಲಿ ಬರುತ್ತಿದ್ದಾಗ ಅಲ್ಲಿನ ಪೊಲೀಸರು ಗ್ಯಾಂಗ್‍ರೇಪ್ ಮಾಡಿದ್ದಾರೆ'' ಎಂದು ಆರೋಪಿಸಿದ್ದಾಳೆ. ಯುವತಿಯ ಈ ಹೇಳಿಕೆಯನ್ನು ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ದಾಖಲಿಸಿಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹಾಗೂ ಮಂಗಳೂರಿನ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಮುನ್ನವೇ ಆಕೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com