ನೈಟ್‍ಲೈಫ್ ಮತ್ತೆ ಶುರು?

ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಚಾಲ್ತಿಯಲ್ಲಿದ್ದ `ನೈಟ್ ಲೈಫ್' ವ್ಯವಸ್ಥೆ ಇನ್ಮುಂದೆ ವಾರದ ಏಳು ದಿನವೂ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಿವೆ...
ಬೆಂಗಳೂರು ನೈಟ್ ಲೈಫ್ (ಸಂಗ್ರಹ ಚಿತ್ರ)
ಬೆಂಗಳೂರು ನೈಟ್ ಲೈಫ್ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಚಾಲ್ತಿಯಲ್ಲಿದ್ದ `ನೈಟ್ ಲೈಫ್' ವ್ಯವಸ್ಥೆ ಇನ್ಮುಂದೆ ವಾರದ ಏಳು ದಿನವೂ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಹೊಸ ವ್ಯವಸ್ಥೆಗೆ ರಾಜ್ಯ ಸರ್ಕಾರ  ತನ್ನ ಸಮ್ಮತಿ ನೀಡಿದರೆ ರಾಜಧಾನಿ ಮಧ್ಯರಾತ್ರಿವರೆಗೂ ತನ್ನ ಜೀವಂತಿಕೆ ಉಳಿಸಿಕೊಳ್ಳಲಿದೆ. ತಡರಾತ್ರಿವರೆಗೂ ನಗರದಲ್ಲಿ ಊಟ, ತಿಂಡಿಗೆ ತೊಂದರೆ ಇಲ್ಲ. ಈ ಹಿಂದೆ ರೆಸ್ಟೋರೆಂಟ್, ಬಾರ್, ಪಬ್  ಮತ್ತು ಹೋಟೆಲ್‍ಗಳನ್ನು ಮಧ್ಯರಾತ್ರಿ 1 ಗಂಟೆವೆರೆಗೆ ವಿಸ್ತರಿಸಲು ಅನುಮತಿ ಇತ್ತು.

ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತವೆಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅದನ್ನು ಪ್ರಾಯೋಗಿಕವಾಗಿ ವಾರಾಂತ್ಯಕ್ಕೆ ಮಾತ್ರ ಸೀಮಿತಗೊಳಿಸಲಾಯಿತು. ಕಳೆದೊಂದು ವರ್ಷದಿಂದ  ಜಾರಿಯಲ್ಲಿದ್ದ ವಾರಾಂತ್ಯದ ನೈಟ್ ಲೈಫ್ ಅನ್ನು ವಾರಪೂರ್ತಿ ವಿಸ್ತರಿಸುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸದ ಕಾರಣ ಇದಕ್ಕೆ ಅನುಮತಿ ಕೊಡುವ ಬಗ್ಗೆ
ಗಂಭೀರ ಚಿಂತನೆ ನಡೆದಿದೆ. ವಾರದ ಎಲ್ಲ ದಿನಗಳಿಗೂ ನೈಟ್‍ಲೈಫ್ ವಿಸ್ತರಿಸುವ ಉದ್ದೇಶದಿಂದ, ವಾರಾಂತ್ಯದ ನೈಟ್‍ಲೈಫ್ನಿಂದ ಆಗಿರುವಂತಹ ಅಪರಾಧ ಚಟುವಟಿಕೆಗಳು, ಅಪಘಾತಗಳ ಬಗ್ಗೆ  ಪೊಲೀಸ್ ಇಲಾಖೆಯಿಂದ ವರದಿ ಕೇಳಿತ್ತು.

ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್‍ಗೆ ನೀಡಿದ್ದ ವರದಿಯಲ್ಲಿ ಸರ್ಕಾರದ ನಿರ್ಧಾರಕ್ಕೆ ನಮ್ಮ ಅಭ್ಯಂತರವಿಲ್ಲ. ವಾರಾಂತ್ಯದ ಪ್ರಯೋಗವನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ವಾರ  ಪೂರ್ತಿ ಅವಕಾಶ ಕೊಟ್ಟರೆ ನಮ್ಮ ಆಕ್ಷೇಪವಿಲ್ಲ ಎಂದು ತಿಳಿಸಿತ್ತು. ಇದೇ ವರದಿ ಆಧಾರದ ಮೇಲೆ ಸರ್ಕಾರ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ಕೊಡುವ ಸಾಧ್ಯತೆ ದಟ್ಟವಾಗಿವೆ. ಹೊಸ ವ್ಯವಸ್ಥೆಗೆ  ವಿರೋಧ ವ್ಯಕ್ತವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸರ್ಕಾರ ಬೇರೆ, ಬೇರೆ ವಲಯಗಳಿಂದ ಅಭಿಪ್ರಾಯ ಹಾಗೂ ತಜ್ಞರ ಸಲಹೆ ಪಡೆಯುತ್ತಿದೆ. ಒಂದು ವೇಳೆ ಸರ್ಕಾರದ ಪರ ಅಭಿಪ್ರಾಯ ವ್ಯಕ್ತವಾದ್ದಲ್ಲಿ  ಬೆಂಗಳೂರಿನಲ್ಲಿ ವಾರದ ಏಳು ದಿನವೂ `ಮದ್ಯ' ರಾತ್ರಿಗಳಾಗಲಿವೆ.

ಸರ್ಕಾರ ಈ ನಿರ್ಧಾರದಿಂದ ಅಬಕಾರಿ ಇಲಾಖೆಗೂ ಲಾಭವಾಗಲಿದೆ. ವಾರದ ಏಳು ದಿನಗಳವರೆಗೆ ಮದ್ಯ ಮಾರಾಟವಾಗುವುದರಿಂದ ಇಲಾಖೆ ಕೋಟಿಗಟ್ಟಲೇ ತೆರಿಗೆ ಸಂಗ್ರಹವಾಗಲಿದೆ. 2014- 15ನೇ ಸಾಲಿನಲ್ಲಿ ಇಲಾಖೆಗೆ ಸರ್ಕಾರ ರು.14,200 ಕೋಟಿ ಗುರಿ ನೀಡಿತ್ತು. ವಾರಾಂತ್ಯದ ನೈಟ್‍ಲೈಫ್ ನಿಂದ ಸುಮಾರು ರು.11 ಸಾವಿರ ಕೋಟಿ ವರೆಗೆ ತೆರಿಗೆ ಸಂಗ್ರಹವಾಗಿತ್ತು. ಇದೀಗ  (2015-16) ರು.15,200 ಕೋಟಿ ಗುರಿ ನೀಡಿರುವ ಸರ್ಕಾರ, ತೆರಿಗೆ ಸಂಗ್ರಹಿಸುವ ದಾರಿಯನ್ನು ಸರ್ಕಾರವೇ ತೋರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com