ನಾಡಗೀತೆ ವೈಚಾರಿಕತೆಯ ಸಂಕೇತ

ನಾಡಗೀತೆ ಎನ್ನುವುದು ನಮ್ಮ ವೈಚಾರಿಕತೆ ಮತ್ತು ಸಂಪ್ರದಾಯದ ಸಂಕೇತ. ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ...
ಕನ್ನಡ ಸಂಘರ್ಷ ಸಮಿತಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಅನಿಕೇತನ-ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಎ.ಆರ್.ನಾರಾಯಣಘಟ್ಟ, ಕವಯಿತ್ರ
ಕನ್ನಡ ಸಂಘರ್ಷ ಸಮಿತಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಅನಿಕೇತನ-ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಎ.ಆರ್.ನಾರಾಯಣಘಟ್ಟ, ಕವಯಿತ್ರ

ಬೆಂಗಳೂರು: ನಾಡಗೀತೆ ಎನ್ನುವುದು ನಮ್ಮ ವೈಚಾರಿಕತೆ ಮತ್ತು ಸಂಪ್ರದಾಯದ ಸಂಕೇತ. ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಂಘರ್ಷ ಸಮಿತಿಯ ಅನಿಕೇತ ನ ಮತ್ತು ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಾಡಗೀತೆ ದೊಡ್ಡದಿದೆ ಎಂಬ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ. ಕುವೆಂಪು ರಚಿಸಿರುವ ಈ ಗೀತೆ ಸರ್ಕಾರದ ಮತ್ತು ಜನರ ಮನ್ನಣೆಗಳಿಸಿದೆ. ಅಲ್ಲದೆ, ದೇಶದ ಭೌಗೋಳಿಕ, ವೈಚಾರಿಕ, ಧಾರ್ಮಿಕ ವಿಚಾರಗಳನ್ನೊಳಗೊಂಡಿರುವ ನಾಡಗೀತೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದು ನಿಲ್ಲಬೇಕು.ಕುವೆಂಪು ಅವರು ಶ್ರೇಷ್ಠ ಸಾಹಿತಿ ಯಾಗಿದ್ದು, ನಾಡಿನ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಿದೆ. ರಾಜ್ಯ ಸರ್ಕಾರ ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ದೇವರು ಮನುಷ್ಯ ಜಾತಿಯನ್ನು ಸೃಷ್ಟಿಸಿದ್ದಾನೆ. ಆದರೆ, ಆ ಮನುಷ್ಯ ಹಲವು ಮತಗಳನ್ನು ಸೃಷ್ಟಿಸಿ ತಮ್ಮೊಳಗೆ ಜಗಳವಾಡುತ್ತಿದ್ದಾರೆ. ಧರ್ಮವನ್ನು ಒಂದುಗೂಡಿಸಲು ಸರ್ವಧರ್ಮ ಸಮ್ಮೇಳನಗಳ ನ್ನು ನಡೆಸಲಾಗುತ್ತಿದೆ. ಆದರೆ, ಆ ಶಬ್ದವೇ ಸರಿಯಲ್ಲ. ಪ್ರತಿಯೊಬ್ಬರ ಸಾಧನೆಗೆ ತಕ್ಕಂತೆ ಅವರ ವ್ಯಕ್ತಿತ್ವ ಮತ್ತು ಅವರು ಬೇರೆಯವರಿಗೆ ಆದರ್ಶವಾಗುತ್ತಾ ರೆ. ಪ್ರತಿಯೊಬ್ಬರು ತಮ್ಮ ಒಳ್ಳೆಯತನ ದಿಂದ ಆದರ್ಶಪ್ರಾಯರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಎ.ಆರ್.ನಾರಾಯಣಘಟ್ಟ ಅವರಿಗೆ ಅನಿಕೇತನ ಮತ್ತು ಕವಯತ್ರಿ ಆರ್.ಮಾನಸಾ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ, ಸಮಿತಿ ಅಧ್ಯಕ್ಷ ಗಾಯತ್ರಿ ರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com