ಪೊಲೀಸರ ಸೋಗಿನಲ್ಲಿ ರು.1.35 ಕೋಟಿ ಲೂಟಿ

ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಹಲವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ರು.1.35 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಹಲವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ರು.1.35 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಕೇರಳದ ಪಾಲಕ್ಕಾಡ್ ನ ಲತೀಫ್ (29) ಹಣ ಕಳೆದುಕೊಂಡವರು. ನಾಲ್ಕು ದಿನದ ಹಿಂದೆ ಕೇರಳದಿಂದ ನಗರಕ್ಕೆ ಬಂದಿರುವ ಈತ ಕಲಾಸಿಪಾಳ್ಯದ ವಸತಿಗೃಹವೊಂದರಲ್ಲಿ ಕೊಠಡಿ ಪಡೆದು ಉಳಿದುಕೊಂಡಿದ್ದ. ಹವಾಲ ದಂಧೆಯಲ್ಲಿ ಮಧ್ಯವರ್ತಿಯಾಗಿರುವ ಲತೀಫ್, ನಾಲ್ಕು ದಿನಗಳಲ್ಲಿ ನಗರದ ಕೆಲ ವ್ಯಕ್ತಿಗಳಿಂದ ಸಂಗ್ರಹಿಸಿದ್್ದ ಹಣವನ್ನು ಬ್ಯಾಗ್ ನಲ್ಲಿ ಹಾಕಿ ವಸತಿ ಗೃಹದ ತನ್ನ ಕೊಠಡಿಯಲ್ಲಿ ಸುರಕ್ಷಿತವಾಗಿಟ್ಟಿದ್ದ. ಆದರೆ, ಶನಿವಾರ ನಗರ ಉದ್ಯಮಿಯೊಬ್ಬರಿಂದ ರು.85 ಲಕ್ಷ ಪಡೆದು ಸಂಜೆ 6.30ರ ಸುಮಾರಿಗೆ ವಸತಿಗೃಹದತ್ತ ಹೆಜ್ಜೆ ಹಾಕಿದ್ದ.

ಕಲಾಸಿಪಾಳ್ಯದ ಮುಖ್ಯರಸ್ತೆಯಲ್ಲಿ ಬರುವಾಗ ಏಕಾಏಕಿ ಮೂರು ಮಂದಿ ಎದುರಾಗಿ ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲತೀಫ್ ಕೈಯಲ್ಲಿದ್ದ ಹಣದ ಬ್ಯಾಗ್ ಕಿತ್ತಿಕೊಂಡಿದ್ದಾರೆ. ಈ ವೇಳೆ ಲತೀಫ್ ನ ಗದರಿಸಿರುವ ದುಷ್ಕರ್ಮಿಗಳು ಆತ ತಂಗಿದ್ದ ವಸತಿಗೃಹಕ್ಕೆ ಕರೆದೊಯ್ದಿದ್ದಾರೆ. ಬಳಿಕ ಕೊಠಡಿ ಶೋಧಿಸಿದಾಗ ಸಿಕ್ಕ ರು.50 ಲಕ್ಷ ಹಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com