(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ರು.1.18 ಕೋಟಿ ಪೀಕಿಸಿದ್ದ ಪ್ರೇಮಾ

ಒಂದೂವರೆ ವರ್ಷಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಮಾಜಿ ಸಚಿವ ರಾಮದಾಸ್ `ಪ್ರೇಮ ಪುರಾಣ'ಕ್ಕೆ ಈಗ ಹೊಸ ತಿರುವು ಸಿಕ್ಕಿದೆ....

ಮೈಸೂರು: ಒಂದೂವರೆ ವರ್ಷಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಮಾಜಿ ಸಚಿವ ರಾಮದಾಸ್ `ಪ್ರೇಮ ಪುರಾಣ'ಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ರಾಮದಾಸ್‍ರಿಂದ ತನಗೆ ಅನ್ಯಾಯವಾಗಿದೆ ಎಂದು ಮಾಧ್ಯಮದ ಮುಂದೆ ಅವಲತ್ತುಕೊಂಡಿದ್ದ ಮೈಸೂರಿನ ಪ್ರೇಮಕುಮಾರಿ ರಾಮದಾಸ್‍ರನ್ನು ಬ್ಲ್ಯಾಕ್ ಮೇಲ್ ಮಾಡಿ ರು.1.18 ಕೋಟಿ ವಸೂಲಿ ಮಾಡಿದ್ದಾಳೆ. ಪ್ರೇಮಕುಮಾರಿ ಮಾಜಿ ಸಚಿವ ರಾಮದಾಸ್ ರಿಗೆ ಬ್ಲ್ಯಾಕ್‍ಮೇಲ್ ಮಾಡಿದ್ದಾಳೆ ಎಂದು ಸಿಐಡಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ಮತ್ತು ವಂಚನೆ ಪ್ರಕರಣ ಸಂಬಂಧಿಸಿದಂತೆ ಈಗ ಪ್ರೇಮಕುಮಾರಿ ವಿರುದ್ಧ ಸಿಐಡಿ ಪೊಲೀಸರು ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರೇಮ ಕುಮಾರಿ ಪ್ರೇಮ ಪುರಾಣ ಬೆಳಕಿಗೆ ಬರುವ ಆತಂಕದಲ್ಲಿ ರಾಮದಾಸ್ 2014, ಫೆಬ್ರವರಿ ಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.
 
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಆತ್ಮಹತ್ಯೆ ಯತ್ನಕ್ಕೆ ಪ್ರೇಮಕುಮಾರಿ, ಆಕೆಯ ತಾಯಿ ಮತ್ತು ಸಹೋದರ ಕಾರಣ. ಅಲ್ಲದೆ, ರು.1.10 ಕೋಟಿ ಹಣವನ್ನು ತಮ್ಮ ಬಳಿ ಪಡೆದು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಆಗ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ, ರಾಮದಾಸ್ ಅವರ ರಾಜಕೀಯ ಭವಿಷ್ಯಕ್ಕೇ ಕೊಳ್ಳಿ ಇಟ್ಟ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಅದರಂತೆ ಈಗ ದೋಷಾರೋಪ ಪಟ್ಟಿ ಸಲ್ಲಿಸಿರುವ ಪೊಲೀಸರು, ರಾಮದಾಸ್ ಸಹೋದರ ಬಳಿ ಪ್ರೇಮಕುಮಾರಿ ರು.1.10 ಕೋಟಿ ಬೇಡಿಕೆ ಇರಿಸಿದ್ದಕ್ಕೆ ಸಾಕ್ಷ್ಯ ಸಿಕ್ಕಿದೆ.

ಅಲ್ಲದೇ, ಆ ಹಣದಲ್ಲಿ ಪ್ರೇಮಕುಮಾರಿ ನಿವೇಶನ ಹಾಗೂ ಕಾರನ್ನು ಖರೀದಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈಗ ಆ ನಿವೇಶನ ಮತ್ತು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಇದೇ ವೇಳೆ, ರಾಮದಾಸ್ ಅವರ ಸುಲಿಗೆಗೆ ಪ್ರೇಮ ಕುಮಾರಿಗೆ ಇಬ್ಬರು ವಕೀಲರೂ ನೆರವು ನೀಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಏನಾಗಿತ್ತು?: ರಾಮದಾಸ್ ಮದುವೆ ಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪ್ರೇಮ ಕುಮಾರಿ ಆರೋಪಿಸಿದ್ದರು. ಲೋಕಸಭಾ ಚುನಾವಣೆಗೂ ಮುನ್ನ `ಪ್ರೇಮ ಪುರಾಣ' ಬಹಿರಂಗವಾದ ಹಿನ್ನೆಲೆಯಲ್ಲಿ ಆಗ ರಾಮದಾಸ್ ಆತ್ಮಹತ್ಯೆಗೂ ಯತ್ನಿಸಿದ್ದರು. ನಂತರ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರು ಪ್ರೇಮಕುಮಾರಿ ವಿರುದ್ಧ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದರು. ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com