ವಿಕಾಸಸೌಧದಲ್ಲಿ ಗರುಡ ಪಡೆ ಕ್ಷಿಪ್ರ ಕಾರ್ಯಾಚರಣೆ

ಭಯೋತ್ಪಾದಕರ ಟಾರ್ಗೆಟ್‍ನಲ್ಲಿ ಬೆಂಗಳೂರು ಇರುವ ಹಿನ್ನೆಲೆಯಲ್ಲಿ ಗರುಡ ಪಡೆ ಸೋಮವಾರ ವಿಧಾನಸೌಧ ಸೇರಿದಂತೆ ನಾನಾ ಕಡೆ ತೀವ್ರ ಕಾರ್ಯಾಚರಣೆ ನಡೆಸಿದವು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಭಯೋತ್ಪಾದಕರ ಟಾರ್ಗೆಟ್‍ನಲ್ಲಿ ಬೆಂಗಳೂರು ಇರುವ ಹಿನ್ನೆಲೆಯಲ್ಲಿ ಗರುಡ ಪಡೆ ಸೋಮವಾರ ವಿಧಾನಸೌಧ ಸೇರಿದಂತೆ ನಾನಾ ಕಡೆ ತೀವ್ರ ಕಾರ್ಯಾಚರಣೆ ನಡೆಸಿದವು.

ಪಠಾಣ್‍ಕೋಟ್ ಸೇರಿದಂತೆ ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಮೇಲೂ ಉಗ್ರರು ಕಣ್ಣಿಟ್ಟಿರುವ ಶಂಕೆ ಇದೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ `ಗರುಡ ಪಡೆ' ಎಂಬ ವಿಶೇಷ ರಕ್ಷಣಾ ಪಡೆ ಸೋಮವಾರ ಶಕ್ತಿಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧ ಸೇರಿದಂತೆ ಮಹತ್ವದ ಕಟ್ಟಡಗಳಲ್ಲಿ ಕಾರ್ಯಾಚರಣೆ ನಡೆಸಿತು. ಅಲ್ಲದೇ, ಸಂಭಾವ್ಯ ಪರಿಸ್ಥಿತಿಗಳಲ್ಲಿ ವಿಶೇಷ ಪಡೆ ಯೋಧರು ಹೇಗೆ ಕಾರ್ಯಾಚರಣೆ ನಡೆಸುವ ಸಾಮಥ್ರ್ಯ ಹೊಂದಿದ್ದಾರೆ ಎನ್ನುವದನ್ನೂ ಪರಿಶೀಲಿಸಲಾಯಿತು.

ಅಣುಕು ಕಾರ್ಯಾಚರಣೆಯಂತೆ ಇದು ಕಂಡುಬಂದರೂ ಸಹ ಗರುಡ ಪಡೆ ಯೋಧರು ವಿಕಾಸಸೌಧದ ಮೂಲೆ ಮೂಲೆಗಳನ್ನೂ ತಪಾಸಣೆ ಮಾಡಿದಾಗ ಜನರೂ ಸಹ ಒಮ್ಮೆ ಆತಂಕಕ್ಕೆ ಒಳಗಾದರು. ವಿಧಾನಸೌಧ ಮತ್ತು ವಿಕಾಸಸೌಧದ ಸಾವಿರಾರು ಸಿಬ್ಬಂದಿ ನಡುವೆಯೇ ಈ ಕಾರ್ಯಾಚರಣೆ ನಡೆಯಿತು. ಒಂದೊಮ್ಮೆ ಉಗ್ರರು ದಾಳಿ ನಡೆಸಿದರೆ ಹೇಗೆಲ್ಲಾ ಏನು ಮಾಡಬೇಕು. ಯಾವ ರೀತಿ ಆಪರೇಷನ್ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಯೋಧರು ಹೆಜ್ಜೆಗಳನ್ನು ಇಡುತ್ತಿದ್ದರು. ದಾಳಿ ನಡೆದಾಗ ಯಾವ ದಿಕ್ಕಿನಲ್ಲಿ ಯಾವ ಕೊಠಡಿ ಹಾಗೂ ಕಟ್ಟಡಗಳು ಕಾರ್ಯಾಚರಣೆಗೆ ಅನುಕೂಲವಾಗುತ್ತವೆ. ಹೇಗೆಲ್ಲಾ ಪ್ರತಿ ದಾಳಿ ನಡೆಸಬಹದು ಎನ್ನುವುದನ್ನು ಕಾರ್ಯಾಚರಣೆ ಮೂಲಕವೇ ಪರಿಶೀಲನೆ ನಡೆಸಲಾಯಿತು.
ಗರುಡ ಸಿಬ್ಬಂದಿ ಅಲ್ಲಲ್ಲಿ ರೋಪ್‍ಗಳನ್ನು ಹಾಕಿಕೊಂಡು ಮಹಡಿಯಿಂದ ಮಹಡಿಗೆ ಜಿಗಿದರು. ಉಗ್ರರು ಅಥವಾ ದಾಳಿಕೋರರು ದಾಳಿ ನಡೆಸಿದರೆ ಯಾವ ರೀತಿ ಕಟ್ಟಡದೊಳಗೆ ಪ್ರವೇಶಿಸಬೇಕು.

ದಾಳಿಕೋರನ ಮೇಲೆ ಹೇಗೆಲ್ಲ ಶಸ್ತ್ರಾಸ್ತ್ರ ಪ್ರಯೋಗ ಮಾಡಬೇಕು ಎನ್ನುವ ಪ್ರಯೋಗಗಳನ್ನು ಮಾಡಿದರು. ಮೊದಲಿಗೆ ವಿಧಾನಸೌಧ ಕಟ್ಟಡ ಪ್ರವೇಶ ಮಾಡಿದ ಗರುಡ ಪಡೆ, ಎರಡನೇ ಮಹಡಿಯಿಂದ ಕಾರ್ಯಾಚರಣೆ ನಡೆಸಿದರು. ಇದು ಅಸಮಂಜಸವಾದ್ದರಿಂದ ನಾಲ್ಕನೇ ಮಹಡಿಗೆ ಹೋಗಿ ಕಟ್ಟಡದ ತುಟ್ಟ ತುದಿಯಿಂದ ರೊಪ್‍ಗಳನ್ನು ಹಿಡಿದು ಇಳಿಯಲಾರಂಭಿಸಿದರು. ನೋಡುವವರಿಗೆ ಇದು ಒಂದು ರೀತಿಯ ಉಗ್ರರ ವಿರುದ್ಧದ ಕಾರ್ಯಾಚರಣೆಯಂತೆಯೇ ಭಾಸವಾಗಿತ್ತು.

ಇತ್ತೀಚೆಗೆ ಬೆಂಗಳೂರಿನಲ್ಲಿ ಅಲ್ ಖೈದಾ ಸಂಘಟನೆ ಸಂಪರ್ಕ ಹೊಂದಿದ್ದ ಖಾಸ್ಮಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಈತನ ವಿಚಾರಣೆ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಸ್ಫೋಟದ ಬಗ್ಗೆ ಮಾಹಿತಿ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿತ್ತು. ಅಲ್ಲದೇ, ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ವಹಿಸುವಂತೆಯೂ ಸಲಹೆ ನೀಡಿತ್ತು. ಬೆಂಗಳೂರಿನಲ್ಲಿ ಎನ್‍ಎಸ್‍ಜಿ ಇಲ್ಲ ಈ ಬೆಂಗಳೂರಿನಲ್ಲಿ ಎನ್‍ಎಸ್‍ಜಿ ಪಡೆಯಿಲ್ಲ. ಈ ಹಿನ್ನೆಲೆಯಲ್ಲಿ ಗರುಡ ಪಡೆಯನ್ನು ಎನ್‍ಎಸ್‍ಜಿ ಕಮಾಂಡೋಗಳಂತೆ ಸಿದ್ಧಗೊಳಿಸಲಾಗಿತ್ತು. ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆದರೆ, ಎನ್‍ಎಸ್‍ಜಿ ಸ್ಥಳಕ್ಕೆ ಬರಲು ಬಹಳ ಸಮಯ ಹಿಡಿಯುತ್ತದೆ. ಹೀಗಾಗಿ ಗರುಡ ಪಡೆಯನ್ನು ಸನ್ನದ್ಧಗೊಳಿಸಲಾಗಿದೆ. ಈ ಪಡೆ ಕೂಡ ಎನ್‍ಎಸ್‍ಜಿ ರೀತಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.

13ಕ್ಕೆ ಮತ್ತೆ ಕಾರ್ಯಾಚರಣೆ
2014ರ ನವೆಂಬರ್ 13ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲೂ ಅಣಕು ಪ್ರದರ್ಶನ ನಡೆಸಿತ್ತು ಗರುಡ ಪಡೆ. ಇದ್ದಕ್ಕಿದ್ದಂತೆ ಆಗಮಿಸಿದ ಇಬ್ಬರು ಉಗ್ರರು, ಬಿಬಿಎಂಪಿ ಕಟ್ಟದ ಹೊರಗೆ 'ಬಾಂಬï' ಸ್ಫೋಟಿಸಿ, ಕಚೇರಿ ಒಳನುಗ್ಗಿ ಹಲವರನ್ನು ಒತ್ತೆಯಾಗಿರಿಸಿಕೊಂಡಿದ್ದರು. ಕೂಡಲೇ ಆಗಮಿಸಿದ ಗರುಡ ಪಡೆ ಉಗ್ರರ ದಮನ ಮಾಡಿ, ಒಯಾಳುಗಳನ್ನು ಸುರಕ್ಷಿತವಾಗಿ ಹೊರ ಕರೆತಂದಿದ್ದರು.

ಈ ಅಣಕು ಪ್ರದರ್ಶನ ಹಲವರನ್ನು ಬೆಚ್ಚಿ ಬೀಳಿಸಿತ್ತು. 014 ನವೆಂಬರ್ 27ರಂದು ಬೆಂಗಳೂರಿನ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಅಣಕು ಪ್ರದರ್ಶನ ನಡೆಸಿದ ಗರುಡ ಪಡೆ, ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಭಯೋತ್ಪಾದಕರ ಒಂದು ತಂಡ ಮತ್ತು ಅವರ ದಮನ ಮಾಡಲು ಒಂದು ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿ ವೇಳೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದೇ ಮೊದಲ ಬಾರಿಗೆ ಜ.13ರಂದು ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಅಣುಕು ಪ್ರದರ್ಶನ ನಡೆಸಲಿದೆ. ಗರುಡ ಪಡೆಯ ಯೋಧರು ಎಲ್ಲ ರೀತಿಯ ತಂತ್ರಗಳನ್ನೊಳಗೊಂಡ ನೈಜ ಕಾರ್ಯಾಚರಣೆಯನ್ನು ಬುಧವಾರ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com