ಪ್ರಾಣ ಉಳಿಸುವ ಶಿರಸ್ತ್ರಾಣಕ್ಕೇಕೆ ಹಿಂದೇಟು?

ರಾಜ್ಯವ್ಯಾಪಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಹಿನ್ನೆಲೆಯಲ್ಲಿ ಸವಾರರು ದಂಡ ತಪ್ಪಿಸಿಕೊಳ್ಳಲು ಕಡಿಮೆ ಗುಣಮಟ್ಟದ ಶಿರಸ್ತ್ರಾ ಖರೀದಿಗೆಮುಂದಾಗುತ್ತಿದ್ದಾರೆ. ಆದರೆ, ಪ್ರಾಣ ಉಳಿಸುವ ಶಿರಸ್ತ್ರಾ ದೊಡ್ಡದಲ್ಲವೇ ಎನ್ನುವುದು ಜನತೆ ಅರ್ಥ ಮಾಡಿಕೊಳ್ಳಬೇಕಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯವ್ಯಾಪಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಹಿನ್ನೆಲೆಯಲ್ಲಿ ಸವಾರರು ದಂಡ ತಪ್ಪಿಸಿಕೊಳ್ಳಲು ಕಡಿಮೆ ಗುಣಮಟ್ಟದ ಶಿರಸ್ತ್ರಾ ಖರೀದಿಗೆ
ಮುಂದಾಗುತ್ತಿದ್ದಾರೆ. ಆದರೆ, ಪ್ರಾಣ ಉಳಿಸುವ ಶಿರಸ್ತ್ರಾ ದೊಡ್ಡದಲ್ಲವೇ ಎನ್ನುವುದು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.

ಇದಕ್ಕೆ ಎರಡು ಕಾರಣಗಳನ್ನು ನೀಡುತ್ತಿದ್ದಾರೆ. ಮೊದಲನೇಯದ್ದು ಯಾವಾಗಲೂ ಹಿಂಬದಿ ಸವಾರರು ಕೂರುವುದಿಲ್ಲ. ಮತ್ತೊಂದು ಹೆಲ್ಮೆಟ್ ಕ್ಯಾರಿ ಮಾಡಲು ಸುಲಭವಾಗಬೇಕು ಎಂಬುದು. ಹಾಗೆಯೇ ಎರಡೂ ಹೆಲ್ಮೆಟ್‍ಗಳ ಗುಣಮಟ್ಟ ಕಾಪಾಡಲು ಹೆಚ್ಚಿನ ಹಣ ತೆರಬೇಕಾಗಿರುವುದು ಎಂಬುದೂ ಮೂಲ ಕಾರಣವಾಗಿದೆ. ಸರ್ಕಾರದ ಕಡ್ಡಾಯ ಆದೇಶದಿಂದ ಹೆಲ್ಮೆಟ್ ಖರೀದಿ ಅನಿವಾರ್ಯವಾಗಿದೆ. ಇದು ಬೈಕ್ ಸವಾರರಿಗೆ ಉಭಯ ಸಂಕಟ ತಂದಿದೆ. ಒಂದೆಡೆ ಸ್ನೇಹಕ್ಕಾಗಿ ಡ್ರಾಪ್ ಕೊಡುವವರೆಲ್ಲರೂ ಕೈಯಲ್ಲಿ ಹೆಲ್ಮೆಟ್ ಇದೆಯೇ ಎಂದು ನೋಡುವಂತಾಗಿದೆ.

ಈ ಕಾನೂನಿನಿಂದ ಗ್ರಾಹಕರು ಎಚ್ಚೆತ್ತುಕೊಳ್ಳುತ್ತಿದ್ದು, ಶೇ.5ರಷ್ಟು ಮಾರಾಟ ಪ್ರಮಾಣ ಜಾಸ್ತಿಯಾಗಿದೆ. ಆದರೆ ಪರಿಣಾಮಕಾರಿ ಬದಲಾವಣೆಯೇನೂ ಆಗಿಲ್ಲ, ಪೊಲೀಸ್ ಇಲಾಖೆ ಕಡ್ಡಾಯವಾಗಿ ದಂಡ ವಿಧಿಸಲು ಮುಂದಾದಾಗ ಮಾತ್ರ ಜನ ಹೆಲ್ಮೆಟ್ ಧರಿಸಲಿದ್ದಾರೆ. ಜನರಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಜಾರಿಯಾಗುವುದೇ ಎಂಬ ಅನುಮಾನವಿದ್ದು, ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ವೇಳೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಲ್ಲ ಏನು ಮಾಡುವುದು? ಎಂಬ ಆಲೋಚನೆಯಲ್ಲಿದ್ದಾರೆ. `ಮುಂದಿನ ಒಂದು ತಿಂಗಳು ಏನನ್ನೂ ಹೇಳಲಾಗುವು ದಿಲ್ಲ' ಎನ್ನುತ್ತಾರೆ ಗ್ಲೋಬಲ್ ಹೆಲ್ಮೆಟ್ ಮಳಿಗೆ ಮಾಲೀಕ ರಮೇಶ್ ನಾಯ್ಡು. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಹೆಲ್ಮೆಟ್ ಬೇಕಾಗಿದ್ದು, ಕಂಪನಿಗಳು ಸಿದ್ಧವಾಗುತ್ತಿವೆ. ದಿಢೀರ್ ಬೆಳವಣಿಗೆಯಿಂದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. `ಹೆಲ್ಮೆಟ್ ಖರೀದಿಸಲು ಬೈಕ್ ಸವಾರರು ಮುಂದಾಗಬೇಕಿದೆ' ಎನ್ನತ್ತಾರೆ ಬಾಲಾಜಿ ಎಂಟರ್ ಪ್ರೈಸಸ್‍ನ ಹೆಲ್ಮೆಟ್ ಮಾರಾಟಗಾರ ನಾಗರಾಜು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com