ಅನಧಿಕೃತ ಜಾಹೀರಾತುದಾರರ ವಿರುದ್ಧ ಬಿಎಂಟಿಎಫ್ ತನಿಖೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿರುವ ಸಂಬಂಧಪಟ್ಟವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್) ತನಿಖೆ ಕೈಗೊಂಡಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿರುವ ಸಂಬಂಧಪಟ್ಟವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್) ತನಿಖೆ ಕೈಗೊಂಡಿದೆ ಎಂದು ಬಿಎಂಟಿಎಫ್ ಮುಖ್ಯಸ್ಥ ಸುನೀಲ್ ಕುಮಾರ್
ತಿಳಿಸಿದರು.

ಬಿಬಿಎಂಪಿ ಜಾಹೀರಾತು ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜ.2ರಂದು ಕಾರ್ಯಾಚರಣೆ ನಡೆಸಿದ ಬಿಎಂಟಿಎಫ್, ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿತ್ತು.
ಇವುಗಳಲ್ಲಿ ಸೋಚ್, ಫೇವರೇಟ್ ಶಾಪ್, ಯೂನಿಯನ್ ಬ್ಯಾಂಕ್, ಓಹ್ ಮತ್ತು ರಿಪ್ಪಲ್, ಐಡಿ ಹೋಮ್ ಪ್ರಾಡೆಕ್ಸ್,ಮೇ ವಾಟೇಜ್, ಜಿಆರ್‍ಬಿ ಗೀ, ಶೋ ಆಪ್, ಮಲಬಾರ್ ಗೋಲ್ಡ್ ಜ್ಯೂವೆಲರ್ಸ್, ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್, ಬಾಸ್ಕಿನ್ ರಾಬಿನ್ಸ್ ಐಸ್ ಕ್ರೀಮ್, ಬರ್ಗರ್ ಕಿಂಗ್, ಕಲ್ಯಾಣ ಜ್ಯೂವೆಲರ್್ಸ, ಪಾರ್ಲೆ ಪ್ರಾಡಕ್ಟ್ಸ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಜಾಹೀರಾತುದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

ಜಾಹೀರಾತುಗಳನ್ನು ತೆರವುಗೊಳಿಸಿರುವ ಬಿಎಂಟಿಎಫ್, ತನಿಖೆ ನಡೆಸಿದ ಬಳಿಕ ಕಂಪನಿ ಅಥವಾ ಜಾಹೀರಾತು ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಬಿಎಂಟಿಎಫ್ನಲ್ಲಿ ಅನೇಕ ದೂರುಗಳು ದಾಖಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ. ಒತ್ತುವರಿಯಾದ ಸರ್ಕಾರಿ, ಬಿಡಿಎ, ಬಿಬಿಎಂಪಿ ಆಸ್ತಿಯನ್ನು ತೆರವುಗೊಳಿಸಿಕೊಳ್ಳಲಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಟಿಡಿಆರ್ ಪ್ರಕ್ರಿಯೆಗಳಿಗೆ ಸಂಬಂಧಿಸಿ ದಂತೆ ದಾಖಲಾದ ದೂರುಗಳ ಪೈಕಿ, ವಿಚಾರಣೆ ನಡೆಯುತ್ತಿದೆ. ಒತ್ತುವರಿಯಾಗಿದ್ದ ಸುಮಾರು 38 ರಾಜ ಕಾಲುವೆ ಹಾಗೂ ಕೆರೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು. ಚಾಮುಂಡಿನಗರ ಕೊಳಚೆ ಪ್ರದೇಶದ ವಸತಿ ಸಂಕೀರ್ಣದಲ್ಲಿ ಅನಧಿಕೃತವಾಗಿ ವಾಸವಿದ್ದವರನ್ನು ತೆರವುಗೊಳಿಸಿ ಸುಮಾರು ರು.4 ಕೋಟಿ ಮೌಲ್ಯದ ಜಾಗವನ್ನು ಕೊಳಚೆ ಅಭಿವೃದ್ಧಿ ಮತ್ತು ನಿರ್ಮೂಲನೆ ಮಂಡಳಿಗೆ ನೀಡಲಾಗಿದೆ.

ಜರಗನಹಳ್ಳಿ ಗ್ರಾಮದ ಸರ್ವೆ ನಂ.7, ಪುಟ್ಟೇನಹಳ್ಳಿ ಗ್ರಾಮದ ಸರ್ವೆ ನ.7, ಸಾರಕ್ಕಿಯ ಸರ್ವೆ ನಂ.7, ಬಾಣಸವಾಡಿ ಸರ್ವೆ ನಂ.211ರಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಕಂದಾಯ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಿದರು. ಡಿ.ವೆಂಕಟೇಶ್ ಮೂರ್ತಿ ಮತ್ತು ಕೆ.ಪ್ರಭಾ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಪದ್ಮನಾಭನಗರದ 2ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿರುವ 12 ಸಾವಿರ ಚದರ ಅಡಿ ಬಿಡಿಎ ಸಿಎ ನಿವೇಶನವನ್ನು ಒತ್ತುವರಿ ಮಾಡಿಕೊಂಡಿರುವ ಸಂಬಂಧ ನ್ಯಾಯÁಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಕೋಡಿಹಳ್ಳಿ ಎಚ್ ಎಎಲ್ 2ನೇ ಹಂತ, 5ನೇ ಎ ಮುಖ್ಯ ರಸ್ತೆಯಲ್ಲಿರುವ ಬಿಡಿಎ ನಿವೇಶನವನ್ನು ಹೋಟೆಲ್ ಲೀಲಾ ವೆಂಚರ್ಸ್ ಅವರು ಒತ್ತುವರಿ ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಕೋಲಾರ ಜಿಲ್ಲೆಗೆ ನೀರು ಪೂರೈಸುವ ಯೋಜನೆಗೆ ಮೀಸಲಿಟ್ಟಿ ದ್ದ ವರ್ತೂರು ಹೋಬಳಿ ಬೆಳ್ಳಂದೂರು ಅಮಾನಿಖಾನೆ ಗ್ರಾಮದ ಸರ್ವೆ ನಂ.286/1 ಮತ್ತು 186/2ರಲ್ಲಿ ಅನ„ಕೃತವಾಗಿ ನಿರ್ಮಿಸಿದ್ದ 150ಕ್ಕೂ ಹೆಚ್ಚು ಶೆಡ್‍ಗಳನ್ನು ತೆರವುಗೊಳಿಸಲಾಗಿದ್ದು, ಸುಮಾರು ರು.15 ಕೋಟಿ ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು. ಮಲ್ಲೇಶ್ವರಂನ 11ನೇ ಮುಖ್ಯ ರಸ್ತೆಯ ನಿವೇಶನ ವೆಸೋಮ ಕಟ್ಟಡಕ್ಕೆ ಬಿಬಿಎಂಪಿ ಆರ್‍ಆರ್‍ನಗರ ವಿಭಾಗದಿಂದ ನಕಲಿ ಸ್ವಾಧೀನಾನುಭವ ಪತ್ರ ಮತ್ತು ಹಣ ಸಂದಾಯ ರಶೀದಿ ಸೃಷ್ಟಿಸಿದ್ದ ಆರೋಪಿ ಗಂಗಾಧರ ಮತ್ತು ಶ್ರೀನಿವಾಸ್ ಹಾಗೂ ರೆಡಿಯಂಟ್ ಕಾರ್ಲೆ ಎಂಬ ಸಂಕೀರ್ಣದಲ್ಲಿ ನಕಲಿ ಸ್ವಾಧೀನ ಪತ್ರ ಸೃಷ್ಟಿಸಿ, ಮಾಲೀಕರಿಗೆ ನಷ್ಟ ಉಂಟು ಮಾಡುತ್ತಿದ್ದ ಆರ್‍ಆರ್‍ನಗರ ಜಂಟಿ ಆಯುಕ್ತ ಕಚೇರಿಯ ಅಧಿಕಾರಿ ಹನುಮಂತಪ್ಪ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com