ಸಂಕ್ರಾಂತಿ ಸಡಗರಕ್ಕೆ ಸರಗಳ್ಳರ ಶಾಕ್!

ಸಂಕ್ರಾಂತಿ ಸಡಗರದಲ್ಲಿದ್ದ ಜನತೆಯು ಸರಗಳ್ಳರು ನಡಗುವಂತೆ ಮಾಡಿದ್ದಾರೆ. ಅಚ್ಚರಿಯೆಂದರೆ ಕೇವಲ 2.15 ಗಂಟೆಗಳಲ್ಲೇ ನಗರದ ನಾಲ್ಕು ಕಡೆ, ಬೇರೆ ಪ್ರದೇಶಗಳಲ್ಲಿ ಸರಗಳ್ಳತನವಾಗಿರುವ ಘಟನೆಗಳು ವರದಿಯಾಗಿವೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಸಂಕ್ರಾಂತಿ ಸಡಗರದಲ್ಲಿದ್ದ ಜನತೆಯು ಸರಗಳ್ಳರು ನಡಗುವಂತೆ ಮಾಡಿದ್ದಾರೆ. ಅಚ್ಚರಿಯೆಂದರೆ ಕೇವಲ 2.15 ಗಂಟೆಗಳಲ್ಲೇ ನಗರದ ನಾಲ್ಕು ಕಡೆ, ಬೇರೆ ಪ್ರದೇಶಗಳಲ್ಲಿ ಸರಗಳ್ಳತನವಾಗಿರುವ ಘಟನೆಗಳು ವರದಿಯಾಗಿವೆ.

ಬೆಳ್ಳಂಬೆಳ್ಳಗೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಪಶ್ಚಿಮ ವಿಭಾಗದ ಕಾಮಾಕ್ಷಿ ಪಾಳ್ಯ, ಚಂದ್ರಾಲೇಔಟï, ವಿಜಯನಗರ ಮತ್ತು ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ
ಬೈಕ್‍ನಲ್ಲಿ ಬಂದ ಒಂದೇ ಗ್ಯಾಂಗ್‍ನ ದುಷ್ಕರ್ಮಿಗಳು 2.15 ಗಂಟೆಗಳ ಅವಧಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ನಾಲ್ವರು ಮಹಿಳೆಯರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್‍ವಿಆರ್ ಲೇಔಟ್‍ನ ಮನೆ ಆವರಣದಲ್ಲಿ ರಂಗೋಲಿ ಹಾಕುತ್ತಿದ್ದ ನಾಗರತ್ನ (52) ಎಂಬುವರನ್ನು ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ.

ಈ ವೇಳೆ ಹಿಂದಿ ಭಾಷೆ ಅರ್ಥವಾಗದ ಕಾರಣ ನನಗೆ ಗೊತ್ತಿಲ್ಲ ಎಂದು ನಾಗರತ್ನ ಹೇಳಿದ್ದಾರೆ. ಈ ವೇಳೆ 60 ಗ್ರಾಂ ತೂಕದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಪ್ರಕರಣ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದೆ. ವಿಜಯನಗರದ ಎಸ್‍ವಿಜಿ ನಗರದ ಮೂಡಲಪಾಳ್ಯದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಲು ಖರೀದಿಸಿ ಮನೆಗೆ ಹೋಗುತ್ತಿದ್ದ ಲಕ್ಷ್ಮಮ್ಮ (62) ಎಂಬುವರನ್ನು ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರು ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು 70 ಗ್ರಾಂ ತೂಕದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರಾಲೇಔಟ್‍ನ ಸಿದಟಛಿಗಂಗಾ ಶಾಲೆ ಬಳಿ ತೆನ್‍ಮೌಳಿ (49) ಎಂಬುವವರು ಬೆಳಗ್ಗೆ 7.45ರ ಸುಮಾರಿಗೆ ಮನೆ ಮುಂದೆ ರಂಗೋಲಿ ಹಾಕುವಾಗ ಓರ್ವ ಯುವಕ ಹಿಂದಿಯಲ್ಲಿ ವಿಳಾಸ ಕೇಳಿದ್ದಾನೆ. ವಿಳಾಸ ಗೊತ್ತಿಲ್ಲ ಎಂದು ಮತ್ತೆ ರಂಗೋಲಿ ಹಾಕಲು ತೆನ್‍ಮೌಳಿ ಮುಂದಾಗಿದ್ದಾರೆ.

ಈ ವೇಳೆ 55 ಗ್ರಾಂ ತೂಕದ ಸರ ಕಿತ್ತುಕೊಂಡು ಓರ್ವ ಯುವಕ ಓಡಿದ್ದು, ಅದೇ ಸಮಯದಲ್ಲಿ ಹಿಂದಿನಿಂದ ಬೈಕ್‍ನಲ್ಲಿ ಬಂದ ಮತ್ತೊಬ್ಬ ಆತನನ್ನು ಕರೆದುಕೊಂಡು ರಿಂಗ್ ರೋಡ್ ಕಡೆ ಪರಾರಿಯಾಗಿದ್ದಾರೆ ಎಂದು ಮಹಿಳೆ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಜ್ಞಾನಜ್ಯೋತಿ ನಗರದ ನಿವಾಸಿ ಉಮಾ ಎಂಬುವರು ಬೆಳಗ್ಗೆ 8.15ರ ಸುಮಾರಿನಲ್ಲಿ ಮನೆಯ ಮುಂದೆ ರಂಗೋಲಿ ಹಾಕುತ್ತಿರುವಾಗ ಬೈಕ್‍ನಲ್ಲಿ ಬಂದ ಇಬ್ಬರು ಹಿಂದಿಯಲ್ಲಿ ವಿಳಾಸ ಕೇಳಿದ್ದಾರೆ. ಆಗ `ಗೊತ್ತಿಲ್ಲ ಮುಂದೆ ಹೋಗಿ ಕೇಳಪ್ಪ' ಎಂದು ಉಮಾ ಹೇಳಿದ್ದಾರೆ. ಈ ವೇಳೆ 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com