ಪ್ರತಿಭಟಿಸಿದರೆ ಪರ್ಯಾಯ ಕ್ರಮ

ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ಹೂಡಿದರೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ...
ಆರೋಗ್ಯ ಸಚಿವ ಯುಟಿ ಖಾದರ್ (ಸಂಗ್ರಹ ಚಿತ್ರ)
ಆರೋಗ್ಯ ಸಚಿವ ಯುಟಿ ಖಾದರ್ (ಸಂಗ್ರಹ ಚಿತ್ರ)

ಮಂಗಳೂರು: ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ಹೂಡಿದರೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಹೆಚ್ಚುವರಿ ಸೇವೆಗೆ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ, ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸುತ್ತಾರೆ ಎಂದು  ತಿಳಿದುಬಂದಿದೆ. ಹೆಚ್ಚುವರಿ ಸೇವೆಗೆ ವೇತನ ಪಾವತಿಸುವುದಾಗಿ ಅಸೋಸಿಯೇ ಶನ್‍ಗೆ ತಿಳಿಸಿದ್ದೇವೆ. ಆದಾಗ್ಯೂ ಮುಷ್ಕರಕ್ಕೆ ಮುಂದಾದರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com