ಕೆಂಪೇಗೌಡ ಬಡಾವಣೆಗೆ ತಡೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮತ್ತೊಂದು ವಿಘ್ನ ಎದುರಾಗಿದೆ...
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಸಂಗ್ರಹ ಚಿತ್ರ)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮತ್ತೊಂದು ವಿಘ್ನ ಎದುರಾಗಿದೆ.

ಪರಿಸರ ಇಲಾಖೆಯ ಅನುಮತಿ ಪಡೆಯದೆ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವ ಬಿಡಿಎ ಕ್ರಮಕ್ಕೆ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರುವ ನ್ಯಾಯಾಧಿಕರಣ ಪೀಠ ತಡೆ ನೀಡಿದೆ. ಈ ಬೆಳವಣಿಗೆಯೊಂದಿಗೆ ನಿವೇಶನ ಕೋರಿ ಅರ್ಜಿ ಸಲ್ಲಿಸಿ ಮುಂಗಡ ಹಣ ಪಾವತಿಸಿರುವ ನಿವೇಶನಾಕಾಂಕ್ಷಿಗಳಲ್ಲಿ ಆಂತಕ ಶುರುವಾಗಿದೆ.

ಕೆಂಚನಹಳ್ಳಿಯ ದಾಸೇಗೌಡ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಸಿರು ನ್ಯಾಯಪೀಠವು ಬಡಾವಣೆ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕ್ಕೆ ನೋಚಿಸ್ ಜಾರಿ ಮಾಡಿ ವಿಚಾರಣೆಯನ್ನು ಜ.28ಕ್ಕೆ ಮುಂದೂಡಿದೆ.

ಕೆಂಪೇಗೌಡ ಬಡಾವಣೆ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಕೆರೆಗಳಿದ್ದು, ಇಂತಹ ಕೆರೆ ನೀರಿನಿಂದ ಜೀವನ ನಡೆಸುತ್ತಿರುವ ಸುತ್ತಮುತ್ತಲಿನ ಸಾವಿರಾರು ರೈತರಿಗೆ ಸಂಕಷ್ಟ ಎದುರಾಗಲಿದೆ. ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಕೆರೆ ಮುಚ್ಚುವುದು ಸರಿಯಲ್ಲ. ಅಲ್ಲದೆ, ಕೆರೆಯಿಂದ ಹೊರ ಹೋಗುವ ಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಆದ್ದರಿಂದ ಬಡಾವಣೆ ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಯಶವಂತಪುರ ಕ್ಷೇತ್ರದ ಕೆಂಗೇರಿ ಹೋಬಳಿಯ 12 ಗ್ರಾಮಗಳಿಗೆ ಸಂಬಂಧಿಸಿದ 1980 ಎಕರೆ ಭೂಮಿಯನ್ನು ರೈತರಿಂದ ವಶ ಪಡಿಸಿಕೊಳ್ಳಲಾಗಿತ್ತು. ಕೆಂಪೇಗೌಡ ಬಡಾವಣೆಯಿಂದ 20, 000 ನಿವೇಶನ ಹಂಚಿಕಗೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಮೊದಲ ಹಂತದ 5,000 ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿದ್ದು ಡಿಸೆಂಬರ್ 31ರ ವೇಳೆಗೆ 11,120 ಮಂದಿ ಮುಂಗಡ ಹಣ ಸಮೇತ ಅರ್ಜಿ ಸಲ್ಲಿಸಿದ್ದಾರೆ. ವಿವಿಧ ಬ್ಯಾಂಕ್ ಗಳಿಂದ ಬಿಡಿಎ ಇದುವರೆಗೆ 90 ಸಾವಿರ ಅರ್ಜಿಗಳನ್ನು ವಿತರಿಸಿದ್ದು ಆ ಪೈಕಿ 51,169 ಅರ್ಜಿಗಳು ಮಾರಾಟವಾಗಿವೆ. ಆದರೆ ಇದುವರೆಗೆ 11,120 ಮಂದಿ ಮಾತ್ರ ಅರ್ಜಿಯೊಂದಿಗೆ ಹಣ ತುಂಬಿದ್ದಾರೆ.

ಕೆಂಪಣ್ಣ ಆಯೋಗ
ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಕೆಟಗರಿ ವಿಭಾಗದ ವಿವಿಧ ಸರ್ವೆ ನಂಬರ್ ಗಳಲ್ಲಿ 16, 22 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಟ್ಟಿರುವ ಬಗ್ಗೆ ಕೆಂಪಣ್ಣ ಆಯೋಗ ಇಲಾಖೆ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿತು.

ಇಲಾಖೆಯಿಂದ ಸಿ ಕೆಟಗರಿಗೆ ಸಂಬಂಧಿಸಿದಂತೆ ಭೂ ಸ್ವಾಧೀನದಿಂದ ಕೈಬಿಟ್ಟಿರುವ ಜಮೀನಿನ ವಿವರಗಳನ್ನು ಆಯೋಗಕ್ಕೆ ಸಲ್ಲಿಸಬೇಕು. ಜಮೀನನ್ನು ಕೈ ಬಿಟ್ಟರುವ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿರುವ ಅಂಶಗಳೇ ಬೇರೆ, ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳು ನೀಡುತ್ತಿರುವ ಮಾಹಿತಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ದೂರುದಾರರ ಪರ ವಕೀಲ ದೊರೆರಾಜು ವಿಚಾರಣೆ ವೇಳೆ ನ್ಯಾಯಮೂರ್ತಿಗಳಿಗೆ ತಿಳಿಸಿದರು.

ಬಂಡೂರು ರಾಮಸ್ವಾಮಿ ಎಂಬುವವರು 10 ರಿಂದ 12ಬಾರಿ ಡಿನೋಟಿಫಿಕೇಷನ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸುಪ್ರೀಂ ಕೋರ್ಟ್‍ನಿಂದ ಪಡೆದ ಆದೇಶದ ಹಿನ್ನೆಲೆಯಲ್ಲಿ ಸಾಕಷ್ಟು ಕಡತಗಳನ್ನು ತಿರುಚಲಾಗಿದೆ. ಪೂರ್ಣ ಮಾಹಿತಿಯುಳ್ಳ ಕಡತಗಳನ್ನು ಬಿಡಿಎ ಆಯೋಗದ ಮುಂದೆ ಸಲ್ಲಿಸಿದರೆ ಲ್ಯಾಂಡ್ ಮಾಪಿsಯಾ ಮತ್ತು ಬಿಡಿಎ ಹುಳುಕು ಬಯಲಾಗಲಿದೆ ಎಂದು ದೊರೆರಾಜು ತೀವ್ರ ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com