ಲಾಲ್ ಬಾಗ್ ನಲ್ಲಿ ಶುರುವಾಯ್ತು ಹೂವುಗಳ ಚಿತ್ತಾರ

ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಶನಿವಾರ ಚಾಲನೆ ನೀಡಿದರು...
ಲಾಲ್ ಬಾಗ್ ನಲ್ಲಿ ಶುರುವಾಯ್ತು ಹೂವುಗಳ ಚಿತ್ತಾರ
ಲಾಲ್ ಬಾಗ್ ನಲ್ಲಿ ಶುರುವಾಯ್ತು ಹೂವುಗಳ ಚಿತ್ತಾರ

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಶನಿವಾರ ಚಾಲನೆ ನೀಡಿದರು.

ರಾಜ್ಯ ತೋಟಗಾರಿಗೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘಗಳ ಸಹಯೋಗದೊಂದಿಗೆ ಪ್ರದರ್ಶನ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಪಾಟೆಡ್ ಪ್ಲಾಂಡ್ (ಕುಂಡದಲ್ಲಿ ಬೆಳೆಸಿದ ಹೂವಿನ ಗಿಡಗಳು)ಗಳ ಮೂಲಕ ಗಾಜಿನ ಮನೆಯಲ್ಲಿ ಮುಖ್ಯ ವಿನ್ಯಾಸಗಳನ್ನು ನಿರ್ಮಿಸಿದ್ದು, ನೋಡುಗರನ್ನು ಸೆಳೆಯುತ್ತಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ವಿಶಿಷ್ಟ ನಮೂನೆಯ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯ ತೋಟಗಾರಿಕೆಗೆ ಶ್ರಮಿಸಿದ ಜಿ.ಎಚ್.ಕೃಂಬಿಗಲ್ ಅವರ 150ನೇ ವರ್ಷಾಚರಣೆ ಅಂಗವಾಗಿ ಜರ್ಮನಿಯ ಲೋಮನ್ ನಲ್ಲಿರುವ ಅವರ ಮನೆಯ ಮಾದರಿಯನ್ನು 2 ಲಕ್ಷಕ್ಕೂ ಹೆಚ್ಚಿನ ಹೂಗಳನ್ನು ಬಳಸಿ ಸುಮಾರು 480 ಚದರಪ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವುದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಮೈಸೂರು ಉದ್ಯಾನ ಕಲಾ ಸಂಘ ಪ್ರತಿ ವರ್ಷ ಆಯೋಜಿಸುವ ಈ ಫಲಪುಷ್ಪ ಪ್ರದರ್ಶನ ರಾಷ್ಟ್ರದಲ್ಲೇ ಖ್ಯಾತಿ ಪಡೆದಿದೆ.

ಈ ಬಾರಿಯೂ ಆರ್ಕಿಡ್, ಗುಲಾಬಿ ಸೇರಿದಂತೆ ಇನ್ನಿತರ ಹೆಸರಾಂತ ಪುಷ್ಪಗಳು ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಸೌಂದರ್ಯ ಸ್ಪರ್ಧೆಗೆ ಸಜ್ಜಾಗಿರುವಂತೆ ಎಲ್ಲರನ್ನೂ ಆಕರ್ಷಿಸುತ್ತಿವೆ.
ಬಗೆಬಗೆಯ ಬಣ್ಣದ 17 ಅಡಿ ಎತ್ತರದ ನಾಲ್ಕು ಪುಷ್ಪ ವೃಕ್ಷಗಳು ಉದ್ಯಾನದಲ್ಲಿ ನೋಡುಗರ ಮನ ಸೆಳೆಯುತ್ತಿವೆ. ಅದಲ್ಲದೆ 13 ರಿಂದ 15 ಅಡಿ ಎತ್ತರದವರೆಗೆ ಮೂರು ಪುಷ್ಪ ಹೃದಯದ ಪ್ರತಿರೂಪಗಳನ್ನು ಕುಂಡದಲ್ಲಿ ಬೆಳೆದ 50 ಸಾವಿರಕ್ಕೂ ಹೆಚ್ಚು ಪೆಟೋನಿಯಾ ಗಿಡಗಳಿಂದ ಅಲಂಕರಿಸಲಾಗಿದೆ.

ಇದಲ್ಲದೆ ನಾನಾ ವರ್ಣದ 3 ಸಾವಿರಕ್ಕೂ ಹೆಚ್ಚು ಪಾಯಿನ್ ಸಿಟಿಯಾ ಹೂವಿನ ಗಿಡಗಳು ಆಕರ್ಷಿಸುತ್ತಿವೆ. ಎಂದಿನಂತೆ ಈ ಬಾರಿಯೂ ಲಾಲ್ಬಾಗ್ ಒಳಗೆ ಸಾರ್ವಜನಿಕ ವಾಹನಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಶಾಲಾಕಾಲೇಜುಗಳಿಂದ ಬರುವ ವಾಹನಗಳ ನ್ನು ಡಬಲ್ರೋಡ್ ಗೇಟಿನಿಂದ ಬಿಟ್ಟು, ಅದೇ ಹಾದಿಯಲ್ಲಿ ಹೊರ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಸಾರ್ವಜ ನಿಕರು ತಮ್ಮ ವಾಹನಗಳನ್ನು ಶಾಂತಿನಗರ ಬಸ್ ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣದಲ್ಲಿ ಹಾಗೂ ಜೆ.ಸಿ. ರಸ್ತೆಯ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲು ಗಡೆಗೆ ಅನುವು ಮಾಡಿಕೊಡಲಾಗಿದೆ. ಜತೆಗೆ ಹಾಪ್ಕಾಮ್ಸ್ ನ ಪ್ರಧಾನ ಕಚೇರಿ ಆವರಣ ದಲ್ಲಿ ಹಾಗೂ ದ್ವಿಚಕ್ರ ವಾಹನಗಳನ್ನು ಅಲ್ ಅಮೀನ್ ಕಾಲೇಜಿನ ಮೈದಾನದಲ್ಲಿ ನಿಲು ಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನಗಳು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಸಚಿವರು ಕ್ರಮಕೈಗೊಳ್ಳಲಿ. ಫಲಪುಷ್ಪ ಪ್ರದರ್ಶನ ಮನಮೋಹಕವಾಗಿದೆ. ಇಂತಹ ಪ್ರದರ್ಶನಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಇತರ ಭಾಗಗಳ ಜನರಿಗೂ ತಲುಪುವಂತಾಗಬೇಕು.
ಕೇಂದ್ರ ಸಚಿವ, ಅನಂತಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com