
ಬೆಂಗಳೂರು: ಜ್ಯೋತಿಷಿ ಆನಂದ್ ಗುರೂಜಿ ಮನೆ ಮುಂದೆ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿದ್ದು, ಅದರಲ್ಲಿ ಗುರೂಜಿಗೆ ಬೆದರಿಕೆ ಹಾಕಿರುವ ಪತ್ರ ದೊರೆತಿದೆ. ಇದರಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮನೆ ಬಳಿ ಅನುಮಾನಾಸ್ಪದ ಬಾಕ್ಸ್ ಕಂಡು ಗುರೂಜಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಶ್ವಾನದಳ ಸಿಬಿಬಂದಿ ಬಾಕ್ಸ್ ಅನ್ನು ಪರಿಶೀಲಿಸಿದ್ದು, ಗುರೂಜಿ ಅವರಿಗೆ ಬೆದರಿಕೆ ಹಾಕಲು ಪಟಾಕಿಗಳನ್ನು ಇಟ್ಟಿದ್ದರು ಎಂದು ತಿಳಿಸಿದ್ದಾರೆ.
ಹಸುಗಳ ಬಗ್ಗೆ ಮಾತನಾಡಬಾರದು, ಮಾತನಾಡಿದರೆ ಹಸುಗಳನ್ನು ಬಲಿ ನೀಡುವುದಾಗಿ ಗುರೂಜಿಗೆ ಬರೆದ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ.
Advertisement