ಜೀವ ಉಳಿಸುವ ಸಿಪಿಆರ್

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರು ಫೋರ್ಟಿಸ್ ಆಸ್ಪತ್ರೆ ಬೆಳ್ಳಿ ಹಬ್ಬ ಆಚರಿಸುತ್ತಿರುವುದರ ಅಂಗವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಸುಮಾರು 11 ಸಾವಿರ ಜನರಿಗೆ ತುರ್ತು ಸಂದರ್ಭದಲ್ಲಿ ಹೃದ್ರೋಗಿಗಳ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರು ಫೋರ್ಟಿಸ್ ಆಸ್ಪತ್ರೆ ಬೆಳ್ಳಿ ಹಬ್ಬ ಆಚರಿಸುತ್ತಿರುವುದರ ಅಂಗವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಸುಮಾರು 11 ಸಾವಿರ ಜನರಿಗೆ ತುರ್ತು ಸಂದರ್ಭದಲ್ಲಿ ಹೃದ್ರೋಗಿಗಳ ಜೀವ ಉಳಿಸಲು ಸಹಾಯ ಮಾಡಬಲ್ಲ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸ್ಸಸಿಟೇಷನ್) ತರಬೇತಿ ನೀಡಲಾಗಿದೆ ಎಂದು ಫೋರ್ಟಿಸ್ ಅಸ್ಪತ್ರೆಯವಲಯ ನಿರ್ದೇಶಕ ಡಾ.ಮನೀಶ್ ಮಟ್ಟು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಿಗೆ ವೈದ್ಯರಾದ ದಿನಕರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡ ಹೃದ್ರೋಗಿಗಳ ಜೀವ ಉಳಿಸಲು ತುರ್ತು ಸಂದರ್ಭದಲ್ಲಿ ಮಾಡಬೇಕಾದ ಕ್ರಮಗಳು ಹಾಗೂ ಸಿಪಿಆರ್ ವಿಧಾನದ ಕುರಿತು ಮಾಹಿತಿ ನೀಡಿದರು. ನಂತರ ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸಿದವರ ಹೆಸರು ನೋಂದಾಯಿಸಿಕೊಂಡು ಆಸ್ಪತ್ರೆಯಲ್ಲಿ ಅವರಿಗೆ ಸಿಪಿಆರ್ ಹಾಗೂ ಹೃದಯಾಘಾತ ಸಂಭವಿಸಿದಾಗ ನೀಡಬೇಕಾದ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಹಮ್ಮಿಕೊಂಡಿತ್ತು ಎಂದರು.

ಸಿಪಿಆರ್ ತರಬೇತಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಪ್ರೊತ್ಸಹ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು, ಯುವಕರು, ಚಾಲಕರು, ಹಿರಿಯ ನಾಗರಿಕರು, ಕಾರ್ಪೊರೇಟರ್ ಗಳು ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು. ಇವರೊಂದಿಗೆ ಸಿಬಿಐ, ಪೊಲೀಸ್, ಸಿಪಿಆರ್ ಮತ್ತು ಗಡಿ ರಕ್ಷಣಾ ದಳಕ್ಕೆ ಈ ಸಿಪಿಆರ್ ತರಬೇತಿ ನೀಡಲಾಗಿದೆ. ಸಿಪಿಆರ್ ವಿಧಾನದ ಕುರಿತು ದೇಶದ ಶೇ.50 ರಷ್ಟು ಮಂದಿಗೆ ಮಾತ್ರ ತಿಳಿಸಿದ್ದು, ಎಲ್ಲರಿಗೂ ಈ ವಿಧಾನ ಕುರಿತು ತಿಳಿಸುವುದು ಅಗತ್ಯವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com