ಬೆಂಗಳೂರು ನಗರ

ಜೈನ್ ವಿದ್ಯಾಸಂಸ್ಥೆಗೆ ವಿವಿಧ ಪ್ರಶಸ್ತಿ

Published On :

ಬೆಂಗಳೂರು: ಚೆನ್ನೈನಲ್ಲಿ ಚೆನ್ನೈನಲ್ಲಿ ಭಾನುವಾರ ಮುಕ್ತಾಯಗೊಂಡ 14ನೇ ಅಖಿಲ ಭಾರತ ಕ್ರೀಡಾಕೂಟದಲ್ಲಿ ನಗರದ ಜೈನ್ ಸಂಸ್ಥೆಯ ಆಟಗಾರರು ಪುರುಷರ ವಿಭಾಗದ ಬ್ಯಾಸ್ಕೆಟ್ ಬಾಲ್ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಜೈನ್ ವಿಶ್ವವಿದ್ಯಾಲಯ ಹಾಗೂ ಕೊಯಮತ್ತೂರಿನ ಜಿಆರ್‌ಡಿ ಕಾಲೇಜು ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಜೈನ್ ತಂಡ 78- 67 ಅಂತರದಲ್ಲಿ ಜಯ ಗಳಿಸಿತು.
ಕ್ರಿಕೆಟ್: ಚೆನ್ನೈನ ಎಚ್‌ಎಎಲ್ ಮೈದಾನದಲ್ಲಿ ನಡೆದ ಪುರುಷರ ವಿಭಾಗದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ನಗರದ ಎ.ಎಂ. ಜೈನ್ ಕಾಲೇಜು, ಬೆಂಗಳೂರಿನ ಜೈನ್ ಯೂನಿವರ್ಸಿಟಿ ಕಾಲೇಜನ್ನು ಮಣಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಎ.ಎಂ. ಜೈನ್ ಕಾಲೇಜು 127 ರನ್ (37 ಓವರ್)ಗಳಿಗೆ ಆಲೌಟ್ ಆಗಿತ್ತು.
ಆನಂತರ, ಬ್ಯಾಟ್ ಮಾಡಿದ ಜೈನ್ ಯೂನಿವರ್ಸಿಟಿ 23 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ: ವಿವಿಧ ಕ್ರೀಡಾ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಪರುಷರ ವಿಭಾಗದ ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್‌ಗಳಲ್ಲಿ ಪ್ರಶಸ್ತಿ ಪಡೆದ ಜೈನ್ ಸಂಸ್ಥೆ ಮಹಿಳೆಯ ವಿಭಾಗದಲ್ಲಿ ನಡೆದ ಟೆನಿಸ್, ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್‌ಗಳಲ್ಲೂ ಪ್ರಶಸ್ತಿ ತನ್ನದಾಗಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.