ಬೆಂಗಳೂರು ನಗರ

ಸೆಟ್‌ಟಾಪ್ ಬಾಕ್ಸ್: ಇಂದು ವಿಚಾರಗೋಷ್ಠಿ

Published On :

ಬೆಂಗಳೂರು: ಟಿ.ವಿ.ಗಳಿಗೆ ಕೇಬಲ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಮನೆಯವರೂ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಬಗ್ಗೆ ಇರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬ್ರಾಡ್‌ಕಾಸ್ಟಿಂಗ್ ಎಂಜಿನಿಯರಿಂಗ್ ಸೊಸೈಟಿ ಫೆ.18ರಂದು ಚಾನ್ಸೆರಿ ಪೆವಿಲಿಯನ್ ಹೊಟೇಲ್‌ನಲ್ಲಿ ವಿಚಾರಗೋಷ್ಠಿ ಏರ್ಪಡಿಸಿದೆ. ವಿಚಾರಗೋಷ್ಠಿಯಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಜಿತೇಂದ್ರ ಶಂಕರ್ ಮಾಥುರ್, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಜಿಲ್ಲಾಧಿಕಾರಿ, ನವದೆಹಲಿ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಸೊಸೈಟಿ ಅಧ್ಯಕ್ಷ ಆರ್.ಕೆ. ಸಿನ್ಹ ಹಾಗೂ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ತಾಂತ್ರಿಕ ಸಲಹೆಗಾರ ಯೋಗೇಂದ್ರ ಪಾಲ್ ಭಾಗವಹಿಸಲಿದ್ದಾರೆ ಎಂದು ಸೊಸೈಟಿ ಪ್ರಕಟಣೆ ತಿಳಿಸಿದೆ.
ಸಿಮೇಲಿಯ
ಸಂಸ್ಥೆ ಖರೀದಿ
ಸೆರೆಬ್ರಾ ಇಂಟಿಗ್ರೇಟೆಡ್ ಐಟಿ ಸೆಲ್ಯೂಷನ್ ಕಂಪನಿ ಸಿಂಗಾಪುರ ಮೂಲದ ಸಿಮೇಲಿಯಾ ರಿಸೋರ್ಸ್ ರಿಕವರಿ ಕಂಪನಿಯನ್ನು 110ಕೋಟಿ ಮೊತ್ತಕ್ಕೆ ಖರೀದಿಸಿದೆ. ಜಾಗತಿಕವಾಗಿ ಸೆಲೆಬ್ರಾ ಕಂಪನಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಪರಿಕರಗಳ ತಾಜ್ಯ ನಿರ್ವಹಣೆ ಉದ್ಯಮ ನಡೆಸುತ್ತಿದ್ದು, ಅಂದಾಜು 2000 ಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಪ್ರತಿವರ್ಷ ಶೇ.25ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ನೂತನ ಕಂಪನಿಯ ಖರೀದಿಯಿಂದ ನಮಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇ- ತ್ಯಾಜ್ಯ ನಿರ್ವಹಣೆ ಮಾರುಕಟ್ಟೆಗೆ ಉತ್ತಮ ಪ್ರವೇಶದೊರೆತಂತಾಗಿದೆ. ಇದರಿಂದ ನಗರದಲ್ಲಿ 10 ಎಕರೆ ಪ್ರದೇಶದಲ್ಲಿ 1ಲಕ್ಷ ಚದರ ಅಡಿ ವಿಸ್ತಾರದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಅನುಕೂಲವಾಗಿದೆ ಎಂದು ಸೆರೆಬ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿ. ರಂಗನಾಥನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.