ವಾದಿರಾಜ ತೀರ್ಥರ ಕೊಡುಗೆ ಅಪಾರ
ಬಳ್ಳಾರಿ: ಸಾಹಿತ್ಯ ಸೇರಿದಂತೆ ಇತರೆ ಜ್ಞಾನವನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸುವುದಕ್ಕೆ ಸೋಂದಾ ಶ್ರೀವಾದಿರಾಜ ತೀರ್ಥರ ಕೊಡುಗೆ ಅಪಾರವಾಗಿದೆ ಎಂದು ಪಂಡಿತ ಸತ್ಯನಾರಾಯಣಾಚಾರ್ಯ ಅಭಿಪ್ರಾಯಪಟ್ಟರು.
ನಗರದ ಕೌಲ್.ಬಜಾರ್.ನ ವ್ಯಾಸರಾಜ ಸಹಿತ ಪಂಚ ಬೃಂದಾವನಗಳ ಸಾನ್ನಿಧಿಯಲ್ಲಿ ವಾದಿರಾಜರ ಮತ್ತು ವ್ಯಾಸರಾಜ ತೀರ್ಥರ 474ನೇ ಆರಾಧನೆ ಮಹೋತ್ಸವ ನಿಮಿತ್ತ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಸಾಹಿತ್ಯ ಪ್ರಬಲವಾಗಿ ಬೆಳೆಯಲು ವಾದಿರಾಜರು, ವ್ಯಾಸರಾಜರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ಹರಿದಾಸರು ದಾಸ ಸಾಹಿತ್ಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಪ್ರಸ್ತುತ ಕೆಲ ಉಪಲಬ್ಧ ಇವೆ. ದಾಸ ಸಾಹಿತ್ಯದ ಕುರಿತು ಸಾಕಷ್ಟು ಆಳವಾಗಿ ಸಂಶೋಧನೆಗಳು ನಡೆಯುವ ಅಗತ್ಯವಿದೆ. ತಂದೆ, ತಾಯಂದಿರು ಮಕ್ಕಳಿಗೆ ಅನ್ಯ ಸಂಸ್ಕೃತಿಯ ಸಾಹಿತ್ಯ, ಕಲೆ, ಸಂಗೀತ ಅಭ್ಯಾಸ ನೀಡದೆ ದಾಸರ ಹಾಗೂ ಜ್ಞಾನಿಗಳ ಕೀರ್ತನೆ, ಪದ್ಯಗಳನ್ನು ಕಲಿಸಬೇಕು. ಜೀವನದ ಹಲವಾರು ಸಮಸ್ಯೆಗಳಿಗೆ ದಾಸ ಸಾಹಿತ್ಯದಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಲಾಗಿದೆ ಎಂದು ಹೇಳಿದರು.
ಆರಾಧನೆ ನಿಮಿತ್ತ ಬೆಳಗ್ಗೆ ವಾದಿರಾಜರ, ವ್ಯಾಸರಾಜರ ಬೃಂದಾವನಗಳಿಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ, ಫಲ ಪಂಚಾಮೃತಾಭಿಷೇಕ, ತುಳಸಿ, ಪುಷ್ಪಾರ್ಚನೆ, ರಜತ ಮತ್ತು ರೇಷ್ಮೆ ವಸ್ತ್ರದ ಅಲಂಕಾರ ಮಾಡಲಾಗಿತ್ತು. ಮಠದ ಆವರಣದಲ್ಲಿ ರಜತ ರಥೋತ್ಸವ ನಡೆಯಿತು. ವ್ಯಾಸರಾಜ, ವಾದಿರಾಜರ ಮಹಿಳಾ ಭಜನಾ ಮಂಡಳಿ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ ವಾದಿರಾಚಾರ್ಯ, ರಾಜಲಕ್ಷ್ಮಿ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಪಾಂಡು ರಂಗಾಚಾರ್ಯ, ಭೀಮರಾವ್, ಮಂತ್ರಾಲಯ ವಿದ್ಯಾಪೀಠದ ಅಧ್ಯಾಪಕ ಹತ್ತಿಬೆಳಗಲ್ ಕೃಷ್ಣಾಚಾರ್ಯ, ಗುರುರಾಜಾಚಾರ್ಯ ಗುಬ್ಬಿ, ಶ್ರೀನಿವಾಸಾಚಾರ್ಯ, ಅನಂತ ಆಚಾರ್ಯ, ಸತ್ಯನಾರಾಯಣ, ರಮೇಶ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

