ಬಳ್ಳಾರಿ

ಮೂವರು ಅಭ್ಯರ್ಥಿಗಳಿಗೆ ನೋಟಿಸ್

Published On :

ಬಳ್ಳಾರಿ: ಬಿಎಸ್ಸಾರ್ ಅಭ್ಯರ್ಥಿ ಸೇರಿದಂತೆ ಬಳ್ಳಾರಿ ನಗರ ಕ್ಷೇತ್ರದ ಮೂರು ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಚುನಾವಣಾ ವೆಚ್ಚದ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಿ, ಏ. 29ರವರೆಗೆ ಮಾಹಿತಿ ನೀಡದಿದ್ದರೆ, ಅವರ ವಿರುದ್ಧ ಕೇಸು ದಾಖಲಿಸಿ, ಚುನಾವಣೆಗೆ ನೀಡಿರುವ ವಾಹನಗಳ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಡಿ.ಎಲ್. ನಾರಾಯಣ ಎಚ್ಚರಿಸಿದ್ದಾರೆ. ಏ. 25ರಂದು ಅಭ್ಯರ್ಥಿಗಳು ತಮ್ಮ ಚುನಾವಣೆ ವೆಚ್ಚದ ದಾಖಲೆಗಳ ಮಾಹಿತಿಯನ್ನು ನೀಡಬೇಕೆಂದು ನೋಟಿಸ್ ನೀಡಲಾಗಿತ್ತು. ಅಲ್ಲದೆ ಸಭೆಯಲ್ಲೂ ಹೇಳಲಾಗಿತ್ತು. ಆದರೆ ಏ. 25ರಂದು ಎಲ್ಲರೂ ವೆಚ್ಚದ ಮಾಹಿತಿ ನೀಡಿದ್ದರೂ, ಬಿಎಸ್ಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ, ಪಿಪಿಐ ಅಭ್ಯರ್ಥಿ ಅರುಣಾಚಲಂ ವೈ. ಹಾಗೂ ಬಿಎಸ್ಸಾರ್ ಅಭ್ಯರ್ಥಿ ಎಸ್. ಮುರಳೀಕೃಷ್ಣ ಅವರು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಏ. 29ರೊಳಗೆ ಮಾಹಿತಿ ನೀಡುವಂತೆ ಡಿ.ಎಲ್. ನಾರಾಯಣ ಸೂಚನೆ ನೀಡಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ
ಕಂಪ್ಲಿ: ರಾಜ್ಯದಲ್ಲಿ ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಮಹಿಳೆಯರಿಗೆ ಮನೆ ಹಾಗೂ ಎಲ್ಲಾ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು ಎಂದು ಜೆಡಿಎಸ್ ಯುವ ಮುಖಂಡ ನಾರಾ ಭರತರೆಡ್ಡಿ ಹೇಳಿದರು. ಮಂಗಳವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನತಾದಳ ಅಭ್ಯರ್ಥಿ ಎಸ್. ವೀರೇಶ್ ಪರ ನಡೆಸಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ತಮ್ಮ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಲ್ಲಿ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ನಂತರ ಕಂಪ್ಲಿ ವ್ಯಾಪ್ತಿಯ ಕಮ್ಮರಚೇಡು, ಬಸರಕೋಡು, ಹಡ್ಲಿಗಿ ಹಾಗೂ ಚಾನಾಳ್ ಗ್ರಾಮಗಳ ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಎಸ್. ವಿರೇಶ್ ಅವರಿಗೆ ಮತ ನೀಡಿ, ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ. ರಾಮಕೃಷ್ಣಾ ರೆಡ್ಡಿ, ದೊಡ್ಡಬಸಪ್ಪ, ಮಲ್ಲಿಕಾರ್ಜುನ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.