ಬಳ್ಳಾರಿ

ಅಂಚೆ ಮೂಲಕ ವೇತನ ವಿತರಿಸಲು ಒತ್ತಾಯ

Published On :

ಬಳ್ಳಾರಿ: ಸ್ಮಾರ್ಟ್ಕಾರ್ಡ್ ಯೋಜ ನೆಯ ಬದಲಾಗಿ ಈ ಮೊದಲಿನಂತೆ ಅಂಚೆ ಕಚೇರಿ ಮೂಲಕ ವಿಧವಾ, ಅಂಗವಿಕಲ ವೇತನವನ್ನು ವಿತರಿಸುವಂತೆ, ಕರ್ನಾಟಕ ರಾಜ್ಯ ಡಾ.ಬಾಬು ಜಗಜೀವನ್ರಾಮ್ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ ಒತ್ತಾಯಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಜೆ.ಸುಂಕಣ್ಣ, ಎಚ್.ಜಿ. ಸುಂಕಪ್ಪ ಮತ್ತು ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ಸರ್ಕಾರವು ಪ್ರಸ್ತುತ ಸ್ಮಾರ್ಟ್ಕಾರ್ಡ್ ಮೂಲಕ ನೀಡುತ್ತಿರುವ ಮಾಸಾಶನಗಳು 6 ತಿಂಗಳಿಗೊಮ್ಮೆ ಫಲಾನುಭವಿಗಳ ಕೈ ಸೇರುತ್ತಿವೆ. ಒಮ್ಮೊಮ್ಮೆ ಇದೂ ಬರಲ್ಲ. ಈ ಬಗ್ಗೆ ಕೇಳಿದರೆ ಮುಂದಿನ ತಿಂಗಳು ಬರುತ್ತೆ ಎಂಬ ಸುಳ್ಳು ಹೇಳಿ ಸ್ಮಾರ್ಟ್ಕಾರ್ಡ್ನವರು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ವಾಸ್ತವಾಂಶವನ್ನು ಪರಿಗಣಿಸಿ, ಮಾಸಾಶನದ ಮೇಲೆಯೇ ಜೀವನ ಸಾಗಿಸುತ್ತಿರುವ ಅಂಗವಿಕಲ, ವಿಧವಾ ವೇತನಗಳನ್ನು ಈ ಮೊದಲಿನಂತೆಯೇ ಅಂಚೆ ಕಚೇರಿ ಮೂಲಕ ಪ್ರತಿ ತಿಂಗಳು ವಿತರಿಸುವಂತೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ವೇದಿಕೆಯ ಕೆ. ಗೂಳಪ್ಪ, ರಾಮಚಂದ್ರಪ್ಪ, ಗಾದಿಲಿಂಗಪ್ಪ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.