ವಿಎಸ್‌ಕೆ ವಿವಿ ಕುಲಪತಿ ಬಂಧನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 5
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಸಚಿವ ಡಾ.ಕೆ. ವಿಜಯಕುಮಾರ್ ಮೇಲೆ ಜಾತಿ ನಿಂದನೆ ಮಾಡಿರುವ ಕುಲಪತಿ ಮಂಜಪ್ಪ ಹೊಸಮನಿ ಅವರನ್ನು ಕೂಡಲೇ ಬಂಧಿಸಿ, ಗುಲ್ಬರ್ಗಾ ವಿವಿಗೆ ವಾಪಸ್ ಕಳುಹಿಸಿರುವ ಕುಲಸಚಿವ ಡಾ.ಕೆ. ವಿಜಯಕುಮರ್ ಅವರನ್ನು ಇದೇ ವಿವಿಯಲ್ಲೇ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಡಾ. ಬಾಬು ಜಗಜೀವನರಾಂ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ವಿಎಸ್‌ಕೆ ವಿವಿಯಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮ, ಅವ್ಯವಹಾರಗಳನ್ನೆಲ್ಲ ಸಿಐಡಿ ತನಿಖೆ ನಡೆಸಿ ಬಹಿರಂಗಪಡಿಸಬೇಕು ಹಾಗೂ ಜಾತಿ ನಿಂದನೆ ಮಾಡಿರುವ ಕಾರಿನ ಚಾಲಕ ಮತ್ತು ಕುಲಪತಿ ಮಂಜಪ್ಪ ಹೊಸಮನೆ ಅವರನ್ನು ಕೂಡಲೇ ಬಂಧಿಸಬೇಕು. ಕುಲಪತಿ ಮಂಜಪ್ಪ ಅವರು ವಿವಿಯ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಕೇಳಿದಲ್ಲಿ ಸೇವೆಯಿಂದ ವಜಾಗೊಳಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಭಾವಿಗಳ ಬೆಂಬಲ: ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಅಕ್ರಮ, ಅವ್ಯವಹಾರ, ಗೊಂದಲಗಳು ನಡೆದರೂ ಸ್ಥಳೀಯ ಶಾಸಕರು, ಸಂಸದರು ಕಂಡು ಕಾಣದಂತೆ ಜಾಣ ಕುರುಡರಂತೆ ವರ್ತಿಸುವುದನ್ನು ಗಮನಿಸಿದರೆ, ಕುಲಪತಿಗಳಿಗೆ ರಾಜಕೀಯ ಪ್ರಭಾವಿಗಳು ಬೆಂಬಲವಾಗಿ ನಿಂತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಕುಲಪತಿ ಮಂಜಪ್ಪ ಅವರನ್ನು ಕೂಡಲೇ ಬಂಧಿಸಿ, ಗುಲ್ಬರ್ಗಾ ವಿವಿಗೆ ವಾಪಸ್ ಕಳುಹಿಸಿರುವ ಕುಲಸಚಿವ ವಿಜಯಕುಮರ್ ಅವರನ್ನು ಇದೇ ವಿವಿಯಲ್ಲಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಪಂಪಾಪತಿ, ಉಪಾಧ್ಯಕ್ಷ ಎಚ್. ದಾನಪ್ಪ, ಜಿಲ್ಲಾಧ್ಯಕ್ಷ ಜೆ. ಸುಂಕಣ್ಣ, ಉಪಾಧ್ಯಕ್ಷ ರಾಮಚಂದ್ರಪ್ಪ, ಎಚ್.ಎಸ್. ಗಾದಿಲಿಂಗಪ್ಪ, ಎಚ್. ಕೆಂಚಪ್ಪ, ಶ್ರೀನಿವಾಸ, ಎಚ್. ಭೀಮಲಿಂಗಪ್ಪ, ಬಿ.ಎಸ್. ಗಂಗಾಧರ, ಆರ್. ಗೂಳಪ್ಪ, ಎಚ್. ಶಂಕ್ರಪ್ಪ, ಎಚ್. ಈರಣ್ಣ, ಎಚ್. ವೀರೇಶ, ವೈ. ಅರುಣಾಚಲಂ, ಎಚ್. ಹುಲುಗಪ್ಪ, ಡಿ. ರಾಘು, ಅನಿಲ್‌ಕುಮಾರ್, ಎ.ಕೆ. ಪಂಪಾಪತಿ, ಎಚ್. ಮಲ್ಲಪ್ಪ, ರಂಗಪ್ಪ, ಯು. ಹನುಮಯ್ಯ, ಡಿ. ಸುಧಾಕರ, ರವಿ, ಆಂಜಿನೇಯ, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಗೋವಿಂದರಾಜುಲು ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

