ಬಳ್ಳಾರಿ

ಶಾಂತಿಯುತ ರಂಜಾನ್‌ಗೆ ಸಿಪಿಐ ಮನವಿ

Published On :

ಕೊಟ್ಟೂರು: ಮುಸ್ಲಿಂ ಬಾಂಧವರು ಶುಕ್ರವಾರ ಪಟ್ಟಣದಲ್ಲಿ ರಂಜಾನ್ ಹಬ್ಬ ಆಚರಿಸಲು ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗುವುದು ಎಂದು ಸಿಪಿಐ ವಿ.ಎಚ್. ವಿಜಯಕುಮಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಈ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 8.30ಕ್ಕೆ ರಂಜಾನ್ ಮೆರವಣಿಗೆ ನಡೆಯಲಿದೆ. ರಾಜೀವ್ ನಗರ ಮತ್ತು ಮತ್ತಿತರ ಮಸೀದಿಗಳಿಂದ ಜಾಮೀಯಾ ಮಸೀದಿಗೆ ಪಾದಯಾತ್ರೆ ಮೂಲಕ ಮೆರವಣಿಗೆ ಕೈಗೊಂಡು ನಂತರ ಈದ್ಗಾ ಮೈದಾನಕ್ಕೆ ತೆರಳಲಿದ್ದಾರೆ. ಮೆರವಣಿಗೆ ಕಾಲಕ್ಕೆ ರಸ್ತೆಗಳಲ್ಲಿ ಯಾವುದೇ ಬಗೆಯ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸ್‌ಐ ಗುರುರಾಜ್ ಮೈಲಾರ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಯಾವುದೇ ಬಗೆಯ ಅಹಿತಕರ ಘಟನೆಗಳಿಗೆ ಯಾರೊಬ್ಬರೂ ಅವಕಾಶ ಮಾಡಿಕೊಡಬಾರದು. ಕಿಡಿಗೇಡಿಗಳು ಕೃತ್ಯ ಎಸಗಲು ಮುಂದಾದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಮುಸ್ಲಿಂ ಸಮಾಜದ  ಆಯೂಬ್‌ಖಾನ್, ಹುಸೇನ್ ಇಮಾಮ್‌ವಲಿ, ರಫೀಕ್ ಸಾಬ್, ರಶೀದ್ ಸಾಬ್, ದಾದಾಸಾಬ್, ಎನ್. ಗೋಪಿ, ದಾರುಕೇಶ್, ದುರುಗೇಶ್, ಶಿವಕುಮಾರ್, ರಮೇಶ್ ಅನೇಕರು ಪಾಲ್ಗೊಂಡಿದ್ದರು. ಎಚ್.ಸಿ. ಅಬ್ಬಾಸ್ ಸ್ವಾಗತಿಸಿದರು. ಎಎಸ್‌ಐ ಸಂಗಯ್ಯ ವಂದಿಸಿದರು. ಪಿ.ಸಿ. ಕಲ್ಲೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.