ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ
ಹೊಸಪೇಟೆ: ಮಾನವ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅದರ ರಕ್ಷಣೆಯ ಅಗತ್ಯತೆ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಅಖಿಲ ಭಾರತ ಮಾನವ ಹಕ್ಕುಗಳ ಸಂಘದ ರಾಷ್ಟ್ರಿಯ ವಕ್ತಾರ ಅಲಂದಾರ್ ಅಬ್ಬಾಸ್ ಹೇಳಿದರು.
ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಗೌರವಿಸುವುದು, ಸಾಮಾಜಿಕ ಕಲ್ಯಾಣಕ್ಕಾಗಿ, ರಾಜಕೀಯ ಉದ್ದೇಶಗಳ ಗಮನ ಹರಿಸುವುದು, ಸಮಾಜದ ಎಲ್ಲ ಜನಾಂಗದವರಿಗೆ ಯಾವುದೇ ಬೇಧವಿಲ್ಲದೆ ನೆಲೆ ದೊರಕಿಸಲು ಪ್ರಯತ್ನಿಸುವುದು. ಸಾರ್ವಜನಿಕ ಅಧಿಕಾರ ಕೇಂದ್ರಗಳು ರಾಜಕೀಯದ ಒತ್ತಡದಿಂದ ಮುಕ್ತವಾಗಬೇಕು. ಜನ ಸಾಮಾನ್ಯರನ್ನು ಸಾಮಾಜಿಕ ಕ್ಷೇತ್ರಗಳಲ್ಲಿ ಭಾಗವಹಿಸಿ ಕ್ರಿಯಾಶೀಲರನ್ನಾಗುವಂತೆ ಮಾಡುವುದು, ಮಾನವ ಹಕ್ಕುಗಳ ವಿಶ್ವವಿದ್ಯಾಲಯ ಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಪಿ. ಮೋಹನ್‌ಬಾಬು, ರಾಜ್ಯ ಕಾರ್ಯದರ್ಶಿ ಸುಲೇಮಾನ್ ರಾಜ್, ಜಿಲ್ಲಾಧ್ಯಕ್ಷ ಎಂ.ಪಿ. ಆನಂದ್, ರಾಜ್ಯ ಕಾರ್ಯದರ್ಶಿ ಕೆ.ಎಂ. ಮಂಜುಳಾ, ಗುಜರಾತ್ ರಾಜ್ಯದ ಮುಖಂಡ ಅಭಯ್ ಸುರಾಜ್, ಬಿಹಾರದ ಮುಖ್ಯಸ್ಥ ಮಿಶ್ರಾ, ತಾಲೂಕು ಅಧ್ಯಕ್ಷ ಗುಜ್ಜಲ ರಾಮಾಂಜನಿ, ವಕೀಲ ಕೆ. ಯಸೂಫ್ ಸೇರಿದಂತೆ ಇತರರು ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

