ಬಳ್ಳಾರಿ

ಕೆಪಿಎಲ್: ಸ್ಟೆಮಿನಾ ಬಾಯ್ಸ್‌ಗೆ ಚಾಂಪಿಯನ್ಸ್ ಪಟ್ಟ

Published On :

ಕುಷ್ಟಗಿ: 67ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ಥಳೀಯ ಗೆಳೆಯರ ಬಳಗದಿಂದ ನಡೆದ ಕುಷ್ಟಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 2ನೇ ಬಾರಿಗೆ ಸ್ಟೇಮಿನಾ ಬಾಯ್ಸ್ ತಂಡ ಮತ್ತೆ ಚಾಂಪಿಯನ್ಸ್ ಪಟ್ಟ ಗಿಟ್ಟಿಸಿಕೊಂಡಿದೆ.
ಪಟ್ಟಣದ ರಾಯಚೂರು ರಸ್ತೆ ಪಕ್ಕದ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಸ್ಟೆಮಿನಾ ಬಾಯ್ಸ್ ಹಾಗೂ ಕ್ಲಾಸಿಕ್ ಬಾಯ್ಸ್ ತಂಡದ ಮಧ್ಯೆ ನೆರ ಹಣಾಹಣಿ ನಡೆಯಿತು. ಅಲ್ಲದೆ ಎರಡು ತಂಡಗಳ ಆಟಗಾರರು ಉತ್ತಮ ಆಟ ಪ್ರದರ್ಶಿಸಿದರು.
ಪ್ರಶಸ್ತಿ ವಿತರಣೆ: ಗುರುವಾರ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಉಮೇಶ ಮಂಗಳೂರು ಅವರ ಸ್ಟೆಮಿನಾ ಬಾಯ್ಸ್ ತಂಡಕ್ಕೆ ಸಿಪಿಐ ನೀಲಪ್ಪ ಓಲೀಕಾರ ಪ್ರಥಮ ಬಹುಮಾನ ಚಾಂಪಿಯನ್ಸ್ ಟೋಫಿ ಮತ್ತು 10 ಸಾವಿರ ನಗದು ನೀಡಿ ಗೌರವಿಸಿದರು.
ನಾಗರಾಜ ಮೇಲಿನಮನಿ, ಹಾಗೂ ಶಶಿಧರ ಕವಲಿ ಯವರ ಕ್ಲಾಸಿಕ್ ಬಾಯ್ಸ್ ಮತ್ತು ಸೈಲೆಂಟ್ ಕಿಲ್ಲರ್ಸ್ ತಂಡಗಳು ಎರಡು ಹಾಗೂ ಮೂರನೇ ಬಹುಮಾನಗಳನ್ನು ಪಡೆದವು. ರಮೇಶ ಮೇಲಿನಮನಿ ಪಂದ್ಯ ಶ್ರೇಷ್ಠ ಮತ್ತು ಅಲ್ಲಾಭಕ್ಷಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸ್ಥಳೀಯ ಠಾಣೆ ಪೇದೆ ವಿರೂಪಾಕ್ಷಿ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು.
ಟ್ರೋಫಿ ಗೆದ್ದ ಸ್ಚೆಮಿನಾ ಬಾಯ್ಸ್ ತಂಡ ಗುರುವಾರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.