ಸುದ್ದಿ ಸಂಕ್ಷೇಪ
ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹ
ಬಳ್ಳಾರಿ: ನಗರದ ಸಂತ ಜೋಸೆಫ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಸ್. ಪಾಲ್ಕುಮಾರ್ನ ಸಂಶಯಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮೃತನ ತಂದೆ ಎಸ್. ವೀರಣ್ಣ ಅಲಿಯಾಸ್ ಫಾಸ್ಟರ್ ಯೇಸುದಾಸ್ ಆಗ್ರಹಿಸಿದ್ದಾರೆ. ಈ ಕುರಿತು ಎಸ್ಪಿ ಡಾ. ಚೇತನ್ಸಿಂಗ್ ರಾಥೋರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ನಗರದ ಸಂತ ಜೋಸೆಫ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪಾಲ್ಕುಮಾರ್, ಉತ್ತಮ ವಿದ್ಯಾರ್ಥಿಯಾಗಿದ್ದ. ಭಾನುವಾರ ರಾತ್ರಿ 7.30ರ ಸುಮಾರಿಗೆ ಮನೆಯಿಂದ ಹೋದವನು ಮರಳಿ ಬಂದಿಲ್ಲ. ಹೋಗುವ ಮುನ್ನ ಕೇಳಿದರೆ, ಇಲ್ಲಿಯೇ ಹೋಗಿ ಬರುವೆನು ಎಂದು ಹೇಳಿ ಹೋಗಿದ್ದಾನೆ. ಇಡೀ ರಾತ್ರಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ, ಏಕಾಏಕಿ ಸೋಮವಾರ ಬೆಳಗ್ಗೆ 8.30ಕ್ಕೆ ರೇಲ್ವೆ ಪೊಲೀಸರು ಪಾಲ್ಕುಮಾರ್ನ ಮೃತದೇಹ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಸಮಗ್ರ, ಕೂಲಂಕಷ ತನಿಖೆ ನಡೆಸಿ, ನ್ಯಾಯ ದೊರಕಿಸುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈಲು ಹಳಿಗೆ ಬಿದ್ದು ಓರ್ವ ಆತ್ಮಹತ್ಯೆ
ಹೊಸಪೇಟೆ: ಜೀವನದಲ್ಲಿ ಜಿಗುಪ್ಸೆ ಹೊಂದಿ ವ್ಯಕ್ತಿಯೋರ್ವ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಂಚನಗುಡಿ ಸಮೀಪದಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ 4ನೇ ವಾರ್ಡ್ನ ನಿವಾಸಿ ಶಿವಕುಮಾರ್ (22) ಆತ್ಮಹತ್ಯೆ ಮಾಡಿಕೊಂಡಿ ವ್ಯಕ್ತಿಯಾಗಿದ್ದಾನೆ. ಆಹ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ.
ನೇಣಿಗೆ ವ್ಯಕ್ತಿ ಶರಣು
ಹೊಸಪೇಟೆ: ಜೀವನದಲ್ಲಿ ಜಿಗುಪ್ಸೆ ಹೊಂದಿ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಚಪ್ಪರದಹಳ್ಳಿ ನಿವಾಸಿ ಸುರೇಶ್ ಬಾಬು (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾನೆ. ಸಾಲ ನೀಡಿದ್ದ ಹಣ ವಾಪಾಸ್ ಬರಲಿಲ್ಲ ಎಂದು ಜಿಗುಪ್ಸೆಗೊಂಡು ನಗರದ ಲಾಡ್ಜ್ವೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಾನಪದ ಕಲೆ ಪರಿಚಯ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ವಿದ್ಯಾಕೇಂದ್ರದ ವಿದ್ಯಾರ್ಥಿ ನಿಲಯದ ಮಕ್ಕಳಿಗಾಗಿ ಕರ್ನಾಟಕ ಜಾನಪದ ಕಲೆ ಪರಿಚಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಶಾರದಾ ವಿದ್ಯಾಮಂದಿರದ ಕಲಾ ಶಿಕ್ಷಕ ಆನಂದ ಕಡ್ಲಿ ಅವರು, 50ಕ್ಕೂ ಹೆಚ್ಚು ಬಗೆಯ ಜನಪದ ಕಲೆಗಳ ಪ್ರಕಾರ, ಅವುಗಳ ನಿಯಮ, ಪದ್ಧತಿ ಹಾಗೂ ವೇಷಭೂಷಣಗಳನ್ನು ತಾವೇ ರಚಿಸಿದ 72 ಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು, ನಮ್ಮ ಹಳೆಯ ಸಂಪ್ರದಾಯ, ಜನಪದ, ಕಲೆ-ಸಂಸ್ಕೃತಿಯನ್ನು ಉಳಿಸಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.
ಕೇಂದ್ರದ ಕಾರ್ಯದರ್ಶಿ ಬಸವನಗೌಡ ಮಾತನಾಡಿ, ಕಾಲಗರ್ಭದಲ್ಲಿ ಅನೇಕ ಜನಪದ ಕಲೆಗಳು ನಾಶವಾಗಿವೆ. ನಾವೆಲ್ಲರೂ ಪ್ರಯತ್ನಶೀಲರಾದರೆ ಮರೆಮಾಚಿದ ಬಯಲಾಟ, ದೊಡ್ಡಾಟಗಳನ್ನು ಈಗಲೂ ಉಳಿಸಿ- ಬೆಳೆಸಬಹುದು. ವಿದ್ಯಾರ್ಥಿಗಳು ನಿಮ್ಮ ಕುಟುಂಬದ ಹಿರಿಯರನ್ನು ಕೇಳಿ, ಹೆಳವರನ್ನು ಪತ್ತೆಮಾಡಿ ವಂಶವೃಕ್ಷ ತಿಳಿಯಬಹು ಎಂದರು. ನಿಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಲಕ್ಷ್ಮೀಕಾಂತ್ ಸ್ವಾಗತಿಸಿ, ಮಲ್ಲಿಕಾರ್ಜುನ ರೆಡ್ಡಿ ವಂದಿಸಿದರು. ವಿವೇಕಾನಂದ ನಿರೂಪಿಸಿದರು. ಸೋಮನಗೌಡ ಸೇರಿದಂತೆ ನಿಲಯದ ಶಿಕ್ಷಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಮನೆ ಬೀಗ ಮುರಿದು ಕಳ್ಳತನ
ಬಳ್ಳಾರಿ: ಬೀಗ ಹಾಕಿದ ಮನೆಯ ಬೀಗ ಮುರಿದು, ಮನೆಯಲ್ಲಿದ್ದ ರು. 55 ಸಾವಿರ ನಗದು ಸೇರಿದಂತೆ ಬಂಗಾರದ ಆಭರಣಗಳನ್ನು ಕಳವು ಮಾಡಿರುವ ಘಟನೆ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ. ಉರ್ದು ಸರ್ಕಾರಿ ಶಾಲೆಯ ನಿವಾಸಿ ಬಾಷಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಅವರು ಆ. 19ರಂದು ಮನೆಯ ಬೀಗ ಮುರಿದು ಕಳ್ಳರು ಮನೆಗೆ ನುಗ್ಗಿದ ಬೀರುದಲ್ಲಿದ್ದ ರು. 55 ಸಾವಿರ ನಗದು, ರು. 20 ಸಾವಿರ ಮೌಲ್ಯದ ಬಂಗಾರದ ಉಂಗುರವನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

