26ರಂದು ಜೆಸ್ಕಾಂ ಕಚೇರಿ ಎದುರು ಧರಣಿ
ಕೊಟ್ಟೂರು: ರೈತರ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುಂತೆ ಒತ್ತಾಯಿಸಿ ಕೊಟ್ಟೂರಿನ ಜೆಸ್ಕಾಂ ಕಚೇರಿ ಬಳಿ ಆ. 26ರಂದು ಧರಣಿ ಕೈಗೊಳ್ಳಲು ಮುಂದಾಗಿದ್ದೇವೆ. ವಿದ್ಯುತ್ ಬವಣೆ ಬಗ್ಗೆ ಸಾಕಷ್ಟು ಬಾರಿ ದೂರಿದರೂ ನಿರ್ಲಕ್ಷ್ಯ ವಹಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ತಮಗೆ ಅನಿರ್ವಾಯವಾಗಿದ್ದರಿಂದ ಈ ಸತ್ಯಾಗ್ರಹಕ್ಕೆ ಮುಂದಾಗಬೇಕಾಗಿದೆ ಎಂದು ಕೆ. ಅಯ್ಯನಹಳ್ಳಿ ತಾಪಂ ಸದಸ್ಯ ಎ.ಎಂ. ಗುರುಪ್ರಸಾದ್ ತಿಳಿಸಿದರು. ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಅಯ್ಯನಹಳ್ಳಿ, ಹರಾಳು, ಕನ್ನಾನಾಯಕನಕಟ್ಟೆ, ಚಪ್ಪರದಹಳ್ಳಿ, ಮರೂರು ಮತ್ತು ರಾಮನಾಯಕನಹಳ್ಳಿಯಲ್ಲಿನ ರೈತರ ಪಂಪ್ಸೆಟ್ಗಳಿಗೆ ಇದುವರೆಗೂ ಕೇವಲ 3 ತಾಸು ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಅವಧಿ ರೈತರ ಹೊಲಗಳಿಗೆ ನೀರು ಹರಿಸಲು ಖಂಡಿತಾ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಚೆನ್ನಾಗಿರುವ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದರೂ, ರೈತರ ಹೊಲಗದ್ದೆಗಳ ಚಟುವಟಿಕೆ ನಡೆಸಲು ಸೂಕ್ತ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲು ನಿರಾಕರಿಸುತ್ತಿರುವುದದಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶ ಕಾಣುವಂತಾಗಿದೆ ಎಂದು ಹೇಳಿದರು. ಹೊಲಗಳಲ್ಲಿ ಕನಿಷ್ಠ 8 ತಾಸು ಸಿಂಗಲ್ ಫೇಸ್ ಮತ್ತು ಹಗಲು 6 ತಾಸು ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಕೂಡ್ಲಿಗಿ ತಾಲೂಕಿನ ಅಕ್ಕ ಪಕ್ಕದ ತಾಲೂಕಿನಲ್ಲಿ ಜಾರಿಯಲ್ಲಿದೆ. ಈ ಸೌಲಭ್ಯ ನಮ್ಮ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೂ ದೊರಕಬೇಕೆಂಬುದು ಸತ್ಯಾಗ್ರಹದ ಮೂಲ ಬೇಡಿಕೆ. ಬೇಡಿಕೆಯನ್ನು ಈಡೇರಿಸುವತ್ತ ಇನ್ನಾದರೂ ಸಂಬಂಧಪಟ್ಟವರು ಮುಂದಾಗಬೇಕು ಎಂದು ಒತ್ತಾಯಿಸಿದರು. ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಓ. ಕೊಟ್ರಯ್ಯ, ಸದಸ್ಯ ಕೆ. ಕೊಟ್ರೇಶ್ ಮತ್ತಿತರರು ಇದ್ದರು.
ವೇದಿಕೆಗೆ ನೇಮಕ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ನಗರ ಘಟಕದ ಜಂಟಿ ಕಾರ್ಯದರ್ಶಿಯಾಗಿ ಸುಬ್ಬಣ್ಣ ಆಯ್ಕೆಯಾಗಿದ್ದಾರೆ. ವೇದಿಕೆಯ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಕುರುಗೋಡು ಚನ್ನಬಸವರಾಜ್ ಆದೇಶ ಹೊರಡಿಸಿದ್ದು, ವೇದಿಕೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಸಮಾಜ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿ, ಸಂಘಟನೆಯನ್ನು ಬಲಪಡಿಸುವಂತೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

